ಪ್ರತಿ ತಿಂಗಳು ವಿದ್ಯುತ್ ಬಿಲ್ ಏಕೆ ಹೆಚ್ಚು ಬರುತ್ತದೆ, ವಿದ್ಯುತ್ ಬಿಲ್ ಕಳುಹಿಸುವವರಿಗೂ ಈ ವಸ್ತುನಿಷ್ಠ ಪ್ರಶ್ನೆಗೆ ಉತ್ತರ ಇರುವುದಿಲ್ಲ. ಆದ್ದರಿಂದ ವಿದ್ಯುತ್ ಬಿಲ್ ಬರದಂತೆ ವಿದ್ಯುತ್ ಬಿಲ್ ಕಡಿಮೆ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಆದರೆ ಅದು ಹೇಗೆ? ನಾವು ಅಷ್ಟೊಂದು ವಿದ್ಯುತ್ ಬಳಕೆ ಏನೂ ಮಾಡುತ್ತಿಲ್ಲ ಆದರೂ ಹೆಚ್ಚು ಬಿಲ್ ಬಂದಿದೆ ಎಂದು ಕೆಲವರಿಗೆ ಪ್ರತೀ ತಿಂಗಳು ಇದೊಂದು ಸಮಸ್ಯೆಯನ್ನು ಎದುರಿಸಬೇಕು. ಆದರೆ ನಮಗೇ ಗೊತ್ತಿಲ್ಲದಂತೆ ನಾವು ಬಳಕೆ ಮಾಡಿಯೇ ಇಲ್ಲ ಎಂದುಕೊಂಡಿದ್ದಕ್ಕೆಲ್ಲ ವಿದ್ಯುತ್ ವ್ಯತ್ಯಯ ಆಗಿರುತ್ತದೆ. ಹೇಗೆ ಎಲ್ಲೆಲ್ಲಿ ನಮಗೆ ತಿಳಿಯದೇ ಯಿದ್ಯುತ್ ವ್ಯತ್ಯಯ ಆಗುತ್ತಿರುತ್ತದೆ ಮತ್ತು ವಿದ್ಯುತ್ ಬಿಲ್ ಲೀಗಲ್ ಆಗಿ ಕಡಿಮೆ ಬರುವ ಹಾಗೆ ಮಾಡುವುದು ಹೇಗೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲಿಗೆ ಇಂಡಿಕೇಟರ್ ಗಳು. ಸ್ವಿಚ್ ಬೋರ್ಡ್ ನಲ್ಲಿ ಕಂಡುಬರುವ ಚಿಕ್ಕ ಚಿಕ್ಕ ಇಂಡಿಕೇಟರ್ ಗಳು ಒಂದೊಂದು ಇಂಡಿಕೇಟರ್ ಕೂಡಾ ಹದಿನೈದು ವ್ಯಾಟ್ ಕರೆಂಟ್ ಎಳೆದುಕೊಳ್ಳುತ್ತವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹತ್ತು ಇಂಡಿಕೇಟರ್ ಗಳು ಇದೆ ಎಂದರೆ ಅಲ್ಲಿಗೆ ನೂರೈವತ್ತು ವ್ಯಾಟ್ ಅಷ್ಟು ಕರೆಂಟ್ ವ್ಯತ್ಯಯ ಆಗಿರುತ್ತದೆ. ಹಾಗಾಗಿ ಇಂಡಿಕೇಟರ್ ಗಳನ್ನ ಆದಷ್ಟು ಕಡಿಮೆ ಮಾಡಿ ಅಗತ್ಯ ಇರುವಲ್ಲಿ ಮಾತ್ರ ಬಳಸಬೇಕು. ಇನ್ನು ಎರಡನೆಯದಾಗಿ ಮಸ್ಕಿಟೋ ರೆಪಲೆಟ್ಸ್ ಇದನ್ನು ಕೂಡಾ ನಾವು ಸಾಮಾನ್ಯವಾಗಿ ಎಲ್ಲಾ ಕಡೆ ಬಳಸುತ್ತೇವೆ. ಇದು ಬಳಕೆ ಆಗುವುದು ಇದರ ಒಳಗೆ ಇರುವ ಒಂದು ತಂತಿ ಅದು ಬಿಸಿ ಆಗಿ ಅದರಲ್ಲಿ ಇರುವ ಲಿಕ್ವಿಡ್ ನಮಗೆ ಪ್ರಯೋಜನಕ್ಕೆ ಬರುತ್ತದೆ. ಹೀಗೆ ಆಗುವಾಗ ಒಂದು ಮಸ್ಕಿಟೋ ರೆಪಲೆಟ್ಸ್ ಗೆ ಐವತ್ತು ವ್ಯಾಟ್ ವಿದ್ಯುತ್ ವ್ಯತ್ಯಯ ಆಗಿರುತ್ತದೆ. ಹಾಗಾಗಿ ಮಸ್ಕಿಟೋ ರೆಪಲೆಟ್ಸ್ ಬದಲು ಅದಕ್ಕೆ ಪರ್ಯಾಯ ವ್ಯವಸ್ಥೆ ಇರುತ್ತದೆ ಅದನ್ನು ಬಳಕೆ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ಅತೀ ಹೆಚ್ಚು ವಿದ್ಯುತ್ ಉಳಿಸಬಹುದು.

ಮೂರನೆಯದಾಗಿ ಫ್ರಿಡ್ಜ್.. ಸಾಕಷ್ಟು ಜನರಿಗೆ ಫ್ರಿಡ್ಜ್ ನ್ನು ಯಾವ ಲೇವಲ್ ನಲ್ಲಿ ಇಡಬೇಕು ಎನ್ನುವುದು ಸರಿಯಾಗಿ ತಿಳಿದಿರುವುದಿಲ್ಲ. ಫ್ರಿಡ್ಜ್ ನಲ್ಲಿ ಕಂಡುಬರುವ ನೊಬ್ ಇದನ್ನ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಬದಲಿಸಿಕೊಳ್ಳಬೇಕು. ಸಾಕಷ್ಟು ಜನರು ಮೊದಲಿನಿಂದಲೂ ಹೇಗೆ ಇತ್ತೋ ಅದಕ್ಕೆ ಅಡ್ಜೆಸ್ಟ್ ಮಾಡಿ ಇಟ್ಟಿರುತ್ತಾರೆ. ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇಡೀ ದಿನವೂ ಆನ್ ಆಗಿಯೇ ಇರುತ್ತದೆ ಹಾಗಾಗಿ ಇದೂ ಕೂಡ ಹೆಚ್ಚು ವಿದ್ಯುತ್ ಬಿಲ್ ಬರಲು ಒಂದು ಕಾರಣ ಎಂದು ಹೇಳಬಹುದು. ನಾಲ್ಕನೆಯದಾಗಿ ಮೊಬೈಲ್ ಚಾರ್ಜರ್ ಗಳು. ಕೆಲವರ ಮನೆಯಲ್ಲಿ ಮೊಬೈಲ್ ಚಾರ್ಜರ್ ಸ್ವಿಚ್ ಮೊಬೈಲ್ ಚಾರ್ಜ್ ಹಾಕದೇ ಇದ್ದರೂ ಯಾವಾಗಲೂ ಆನ್ ಆಗಿಯೇ ಇರುತ್ತದೆ. ಇಲ್ಲಿ ನಾವು ಚಾರ್ಜ್ ಹಾಕುವ ಸಮಯದಲ್ಲಿ ಮಾತ್ರ ವಿದ್ಯುತ್ ಪೂರೈಕೆ ಆಗುತ್ತದೆ ಎಂದು ತಿಳಿದುಕೊಂಡಿರುತ್ತೇವೆ. ಆದರೆ ನಾವು ಚಾರ್ಜ್ ಹಾಕದೇ ಇದ್ದಾಗಲೂ ಸಹ ನಮ್ಮ ಒಂದು ಮೊಬೈಲ್ ಚಾರ್ಜರ್ ನಿಂದ ಒಂದು ದಿನಕ್ಕೆ ಏನಿಲ್ಲಾ ಅಂದರೂ ಒಂದರಿಂದ ಎರಡು ವ್ಯಾಟ್ ವಿದ್ಯುತ್ ವ್ಯತ್ಯಯ ಆಗಿರುತ್ತದೆ. ಹಾಗಾಗಿ ಮೊಬೈಲ್ ಚಾರ್ಜ್ ಹಾಕದೇ ಇರುವ ಸಂದರ್ಭದಲ್ಲಿ ಬಂದ್ ಮಾಡಿ ಇಡುವುದು ಒಳ್ಳೆಯದು.

ಇನ್ನು ಬಲ್ಬ್ ಗಳು. ಈಗ ಅದೆಷ್ಟೋ ಹೊಸ ಹೊಸ ರೀತಿಯ ಬಲ್ಬ್ ಗಳು ಬಂದಿದ್ದರೂ ಇನ್ನೂ ಅನೇಕ ಜನರು CFL ಬಲ್ಬ್ ಗಳನ್ನೆ ಬಳಕೆ ಮಾಡುತ್ತಿದ್ದಾರೆ. ಆದರೆ CFL ಬಲ್ಬ್ ಗಳಿಂದ LED ಬಲ್ಬ್ ಇವುಗಳನ್ನು ಹೆಚ್ಚೆಚ್ಚು ಬಳಸುವುದು ಸೂಕ್ತ. ಏಕೆಂದರೆ CFL ಬಲ್ಬ್ ಗಳು ಇಪ್ಪತ್ತರಿಂದ ಮೂವತ್ತು ವ್ಯಾಟ್ ವಿದ್ಯುತ್ ವ್ಯತ್ಯಯ ಮಾಡುತ್ತವೆ. ಹಾಗಾಗಿ ಮನೆಯಲ್ಲಿ ಹೆಚ್ಚು LED ಬಲ್ಬ್ ಬಳಕೆ ಮಾಡುವ ಮೂಲಕ ಹೆಚ್ಚು ವಿದ್ಯುತ್ ವ್ಯತ್ಯಯ ಆಗುವುದನ್ನು ತಡೆಯಬಹುದು. ನಾವು ದಿನನಿತ್ಯ ಬಳಸುವ ಫ್ಯಾನ್ ಇವೂ ಕೂಡಾ ವಿದ್ಯುತ್ ಬಿಲ್ ಹೆಚ್ಚಾಗಲು ಕಾರಣವಾಗಿದೆ. ನಾವು ಅಂಗಡಿಗೆ ಹೋಗುತ್ತೇವೆ ಯಾವುದೋ ಒಂದು ಫ್ಯಾನ್ ಇಷ್ಟ ಆಯ್ತು ಅಂತಾ ತಗೊಂಡು ಬರ್ತೀವಿ ಆದ್ರೆ ಅದರಲ್ಲೂ ಸಹ ಅತೀ ಹೆಚ್ಚು ವ್ಯಾಟ್ ಬಳಕೆ ಆಗಿರುತ್ತದೆ. ಸರಿಸುಮಾರು ಇನ್ನೂರು ವ್ಯಾಟ್ ವರೆಗೂ ವಿದ್ಯುತ್ ಬಳಕೆ ಬರೀ ಒಂದು ಫ್ಯಾನ್ ಗೆ ಆಗುತ್ತದೆ. ಹಾಗಾಗಿ ಎನರ್ಜಿ ಸೇವಿಂಗ್ ಫ್ಯಾನ್ ಬಳಕೆ ಮಾಡುವುದರಿಂದ ಇವು ಬರೀ ಅರವತ್ತು ಎಪ್ಪತ್ತು ವ್ಯಾಟ್ ಗಳಲ್ಲಿ ಉತ್ತಮ ಗಾಳಿಯನ್ನು ನೀಡುತ್ತದೆ. ಹಾಗಾಗಿ ಉತ್ತಮವಾದ ಫ್ಯಾನ್ ಆಯ್ಕೆ ಮಾಡುವ ಮೂಲಕ ಹೆಚ್ಚು ಯುನಿಟ್ಸ್ ಉಳಿಸಬಹುದು.

ಇನ್ನು ಟಿವಿ. ಟಿವಿಯಲ್ಲಿ ಕೂಡಾ LCD ಮತ್ತು LED ಎಂದು ಇರುತ್ತದೆ. ಹೊಸದಾಗಿ ಟಿವಿಯನ್ನು ಕೊಂದುಕೊಳ್ಳುವವರು LED ಟಿವಿಗಳನ್ನು ಕೊಳ್ಳುವುದು ಒಳ್ಳೆಯದು. LED ಟಿವಿ ಇದು ಹಳೆಯ ಟಿವಿ ಹಾಗೂ LCD ಗಳಿಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ಯೂನಿಟ್ ಉಳಿತಾಯ ಮಾಡುತ್ತದೆ. ಕೊನೆಯದಾಗಿ ನೀರಿನ ಪಂಪ್ ಗಳು. ಇವುಗಳಲ್ಲಿ ನಮಗೆ ಅತೀ ಹೆಚ್ಚು ವಿದ್ಯುತ್ ವ್ಯತ್ಯಯ ಆಗಿರುತ್ತದೆ. ಏಕೆಂದರೆ ಇವುಗಳ ಬಳಕೆ ಮಾಡುವಾಗ ಒಂದು ಕಿಲೋ ಎರಡು ಕಿಲೋ ವ್ಯಾಟ್ ಬೇಕಾಗುತ್ತದೆ. ಹಾಗಾಗಿ ನಾವು ಒಮ್ಮೆ ಮಶೀನ್ ಆನ್ ಮಾಡಿದರೆ ಟಾಕಿ ಫುಲ್ ತುಂಬಿಸಿಕೊಳ್ಳಬೇಕು ಪದೇ ಪದೇ ನೀರು ತುಂಬಿಸಲು ಮಶೀನ್ ಬಳಕೆ ಮಾಡುವುದರಿಂದ ಅಧಿಕ ವ್ಯಾಟ್ ಬಳಕೆ ಇದರಿಂದ ಆಗುತ್ತದೆ. ಇಲ್ಲವಾದರೆ ಆಟೋ ವಾಟರ್ ಲೇವಲ್ ಕಂಟ್ರೋಲರ್ ಇದನ್ನು ಹಾಕಿಸಿಕೊಳ್ಳಬೇಕು. ಇದರಿಂದ ಕೂಡಾ ನಾವು ಸಾಕಷ್ಟು ವಿದ್ಯುತ್ ವ್ಯತ್ಯಯ ಆಗದ ಹಾಗೆ ನೋಡಿಕೊಳ್ಳಬಹುದು. ಈ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ನಾವು ಅನುಸರಿಸಿದರೆ ಪ್ರತೀ ತಿಂಗಳು ಸುಮಾರು ಐವತ್ತರಿಂದ ಅರವತ್ತು ವ್ಯಾಟ್ ಅಷ್ಟು ವಿದ್ಯುತ್ ಉಳಿಸಬಹುದು ಹಾಗೂ ಬಿಲ್ ಕೂಡಾ ಕಡಿಮೆ ಬರುವ ಹಾಗೆ ಮಾಡಿಕೊಳ್ಳಬಹುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •