ಭಾರತದಲ್ಲಿ ಈಗ ಎಲ್ಲ ಕೆಲಸವನ್ನು ಡಿಜಿಟಲ್ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ. ಈ ಹಿಂದೆ ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಿದ್ದ ಅನೇಕ ಕಾರ್ಯಗಳನ್ನು ಇದೀಗ ಆನ್ಲೈನ್ ಮೂಲಕ ನಾವು ಸರಳವಾಗಿ ಮಾಡಬಹುದಾಗಿದೆ. ಇದೆ ವ್ಯವಸ್ಥೆ ಈಗಾಗಲೇ ಸಾರಿಗೆ ಇಲಾಖೆಯಲ್ಲೂ ಕೂಡ ಬಂದಿದೆ. ನಿಮಗೆ ತಿಳಿದಿರುವಂತೆ ಈಗ RTO ನಿಯಮಗಲ್ಲು ಕೂಡ ಹೆಚ್ಚಿನ ಬದಲಾವಣೆಗಳು ಆಗಿವೆ. ಡ್ರೈವಿಂಗ್ ಲೈಸನ್ಸ್, ಆರ್ಸಿ, ಇನ್ಸೂರೆನ್ಸ್ ಹೀಗೆ ಅನೇಕ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸುವ ನಿಯಮ ಕೂಡ ಜಾರಿಯಾಗಿದೆ. ಇಷ್ಟೇ ಅಲ್ಲದೆ ಆನ್ಲೈನ್ ಮೂಲಕ ನೀವು ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಲವೇ ಕೆಲವು ಅಧಿಕ್ರತ ಡಾಕ್ಯುಮೆಂಟ್ ನೀಡುವ ಮೂಲಕ ಸರಳ ವಿಧಾನದಲ್ಲಿ ಮಾಡುವ ಯೋಜನೆ ರೂಪಿಸಿದೆ.

ಇವೆಲ್ಲದರ ನಡುವೆ ಸರ್ಕಾರ ಇದೀಗ ವಾಹನ ಮಾಲೀಕರಿಗೆ ಇನ್ನೊಂದು ಭರ್ಜರಿ ಸುದ್ದಿ ನೀಡಿದೆ. ಇನ್ನು ಮುಂದೆ ಈ ಐದು ಕೆಲಸಗಳನ್ನು ಬಹಳ ಸರಳವಾಗಿ ಜನರಿಗೆ ಅನುಕೂಲವಾಗುವಂತೆ ಅವರೇ ಮಾಡಲು ಅನುಕೂಲ ಮಾಡಲಾಗಿದೆ. ಸರ್ಕಾರ ತರಲಿರುವ ಈ ಹೊಸವಿಧಾನದಲ್ಲಿ ಯಾವೆಲ್ಲ ಕೆಲಸಗಳನ್ನು ಜನರು ಆನ್ಲೈನ್ ಮೂಲಕವೇ ಮಾಡಬಹುದು ಎನ್ನುವ ವಿಷಯ ಇಲ್ಲಿದೆ ತಿಳಿದುಕೊಳ್ಳಿ.

ನಿಮ್ಮ ಬಳಿ ಎರಡು ಅಥವಾ ನಾಲ್ಕು ಚಕ್ರದ ವಾಹನದ ಮಾಲೀಕರಾಗಿದ್ದರೆ ಈ ಸುದ್ದಿಯನ್ನು ಓದುವುದರಿಂದ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ವಾಹನ ಮಾಲೀಕರು ಈಗ ತಮ್ಮ ವಾಹನಕ್ಕೆ ಸಂಬಂಧಿಸಿದ ಐದು ಅಗತ್ಯ ಕೆಲಸಗಳನ್ನು ಮನೆಯಲ್ಲಿ ಆನ್ಲೈನ್ ಪೋರ್ಟಲ್ ಮೂಲಕ ಮಾಡಲು ಸಾಧ್ಯವಾಗುತ್ತದೆ. ಈ ಕೆಲಸಗಳಿಗಾಗಿ ಕಾರು ಮಾಲೀಕರು ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ಇದಕ್ಕಾಗಿ ಈಗ ವಾಹನ ಮಾಲೀಕರು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.

Bikes-car

ಹೌದು ಇನ್ನು ಮುಂದೆ ನೀವು ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಿ ಅದಕ್ಕೆ ಬೇಕಾದ ಶುಲ್ಕವನ್ನು ಅಲ್ಲಿಯೇ ಪಾವತಿ ಮಾಡಬೇಕು. ನೀವು ಅರ್ಜಿ ಸಲ್ಲಿಸಿದ ಕೆಲ ದಿನಗಳಲ್ಲಿಯೇ ಆರ್ಟಿಒ ಅಧಿಕಾರಿಗಳನ್ನು ಅದನ್ನು ಪರಿಶೀಲನೆ ಮಾಡಿ ನಿಮಗೆ ಅಗತ್ಯ ಸೇವೆ ಒದಗಿಸಲಿದ್ದಾರೆ.ಒಂದು ವೇಳೆ ನೀವು ಸಲ್ಲಿಸಿದ ಅರ್ಜಿಯಲ್ಲಿ ಎನ್ದರೂ ದೋಷ ಕಂಡುಬಂದರೆ  ಅಪ್ಲಿಕೇಶನ್‌ನಲ್ಲಿ ಯಾವುದೇ ಕೊರತೆ ಕಂಡುಬಂದರೆ, ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಂಖ್ಯೆಯ ನಂಬರ್ ಬಳಸಿ, ಅದರ ನಂತರ ಅರ್ಜಿದಾರರು ತಿದ್ದುಪಡಿ ಫಾರ್ಮ್ ಅನ್ನು ಕಳುಹಿಸಬೇಕು.

ಎಲ್ಲವೂ ಸರಿಯಾಗಿ ಕಂಡುಬಂದರೆ, ಒಂದು ವಾರದೊಳಗೆ ವಾಹನದ ದಾಖಲೆಗಳನ್ನು ನಿಮ್ಮ ಅರ್ಜಿ ಸಂಖ್ಯೆಗೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ವಾಹನ ದಾಖಲೆಗಳನ್ನು ಮುದ್ರಿಸಲು ಮತ್ತು ಸಾಧ್ಯವಾಗುತ್ತದೆ. ಇನ್ನು ಸರ್ಕಾರ ಸರಳೀಕರಿಸುವ ಆ ಐದು ಕೆಲ್ಸಗಳ ವಿವರ ಈ ರೀತಿ ಇದೆ. ಮೊದಲನೆಯದು ಆರ್ಸಿಯಲ್ಲಿ ವಾಹನ ಮಾಲೀಕನ ವಿಳಾಸ ಬದಲಾಯಿಸುವುದು, ಇನ್ನು ವಾಹನದ ಮಾಲೀಕತ್ವವನ್ನು ವಾಹನದ ಆರ್‌ಸಿಗೆ ವರ್ಗಾಯಿಸಿಸುವ ಕೆಲಸ.

ವಾಹನ ನೋಂದಣಿ ಪ್ರಮಾಣಪತ್ರದಿಂದ ಬ್ಯಾಂಕ್ ಸಾಲವನ್ನು ತೆಗೆಯುವುದು, ಕಾರಿನ ಆರ್‌ಸಿ ಕಳೆದುಹೋದರೆ ಎರಡನೇ ಪ್ರತಿ ತೆಗೆಯುವುದು, ಇನ್ನು ವಾಹನವನ್ನು ನವೀಕರಣ ಮಾಡಿ ಹೊಸ ಆರ್ಸಿ ಪಡೆಯಲು ಕೂಡ ಈ ಪೋರ್ಟಲ್ ಸಹಾಯ ಮಾಡಲಿದೆ.ಇನ್ನು ಈ ಸೇವೆಗಳಿಗೆ ಶೀಘ್ರವೇ ಸರ್ಕಾರ ಪೋರ್ಟಲ್ ಗಳನ್ನೂ ತೆರೆಯಲಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •