ಬೈಕ್

ಬೈಕ್ ಓಡಿಸುತ್ತಿರುವಾಗ ಸ್ವಲ್ಪ ಎಚ್ಚರ ತಪ್ಪಿದ್ದಕೆ ಏನಾಯ್ತು ನೋಡಿ,ಸಿಸಿಟಿವಿ ದ್ರಶ್ಯ…

Home

ಇತ್ತೀಚೆಗಷ್ಟೇ ಸಂಚಾರ ಪೊಲೀಸರ ತಪಾಸಣೆ ನಡೆಸುತ್ತಿದ್ದ ಸಂಧರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಬೈಕಿನಿಂದ ಬಿದ್ದ ಸವಾರನ ಮೇಲೆ ಟಿಪ್ಪರ್ ಅಪಘಾತಕ್ಕೆ ಆತ ಇಹಲೋಕ ತ್ಯಜಿಸಿದ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆಯ ಆರ್‌ಎಂಪಿ ವೃತ್ತದ ಬಳಿ ನಡೆದಿತ್ತು. ಹೌದು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಹಂಪಾಪುರದ ಕಲ್ಲೇನಹಳ್ಳಿ ನಿವಾಸಿ ದೇವರಾಜು(43) ಎಂಬುವವರ ಪ್ರಾಣ ಕಳೆದುಕೊಂಡಿದ್ದು, ಇವರೊಂದಿಗೆ ಇದ್ದ ಸುರೇಶ್ ಅವರಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರ ನಿರ್ಲಕ್ಷ್ಯದಿಂದ ಸಿವಿಲ್ ಇಂಜಿನಿಯರ್ ಒಬ್ಬರು ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ವಾಹನವನ್ನು ಜಖಂಗೊಳಿಸಿದ್ದಾರೆ.

ಹೌದು ಹೆಲ್ಮೆಟ್ ಹಾಕಿದ್ದರೂ ಕೂಡ ಪೊಲೀಸರ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಂಡ ಸಿವಿಲ್ ಇಂಜಿನಿಯರ್ ದೇವರಾಜು(46) ಎಂದು ಗುರುತಿಸಲಾಗಿದ್ದು, ಎಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿಯಾಗಿದ್ದ ದೇವರಾಜು ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿದ್ದರು. ಹೆಲ್ಮೆಟ್ ಧರಿಸಿದ್ದರೂ ಕೂಡ ಮೈಸೂರು ಪೊಲೀಸರು ವಾಹನ ಅಡ್ಡಗಟ್ಟಿದ್ದು, ಹಳೆಯ ಕೇಸ್ ದಂಡ ವಸೂಲಿಗಾಗಿ ಸಂಚಾರ ಪೊಲೀಸರು ವಾಹನ ಅಡ್ಡಗಟ್ಟಿದ್ದಾರೆ.

ಇನ್ನು ಚಾಲನೆಯಲ್ಲಿದ್ದ ಬೈಕ್‌ ಗೆ ಪೊಲೀಸ್ ಸಿಬ್ಬಂದಿ ಲಾಠಿ ಬೀಸಿದ್ದು, ಪೋಲಿಸ್ ಪೇದೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ದೇವರಾಜು ಮತ್ತೊಂದು ವಾಹನಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.  ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಸ್ಥಳೀಯರು ಪೊಲೀಸರ ವಾಹನವನ್ನು ಜಖಂಗೊಳಿಸಿದ್ದರು. ಮೈರೂರಿನ ಬೋಗಾದಿಯಿಂದ ಹಿನಕಲ್ ಕಡೆಗೆ ದೇವರಾಜು ಅವರು ಸುರೇಶ್ ಅವರ ಜೊತೆಗೆ ಬೈಕಿನಲ್ಲಿ ಬರುತ್ತಿದ್ದು, ಈ ವೇಳೆ ಆರ್‌ಎಂಪಿ ವೃತ್ತದ ಬಳಿ ವಿವಿ ಪುರಂ ಸಂಚಾರ ಪೊಲೀಸರು ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದರು.

ಇನ್ನು ದೇವರಾಜು ಅವರ ಬೈಕ್ ಅನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಪೊಲೀಸರನ್ನು ಕಂಡ ಬೈಕ್ ಸವಾರ ದೇವರಾಜು, ತಬ್ಬಿಬ್ಬಾಗಿದ್ದು, ಅಲ್ಲದೆ ತಕ್ಷಣ ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಆದರೆ ಇದೀಗ ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಬೈಕ್ ಸವಾರ ನಿಯಂತ್ರಣ ತಪ್ಪಿ ನಂತರ ಏನಾಯ್ತು? ಇದರಲ್ಲಿ ಯಾರದು ತಪ್ಪು ಎಂದು ವಿಡಿಯೋ ನೋಡಿ ನೀವೆ ಹೇಳಿ.

 
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...