ಕಿರಿಕ್​ ಪಾರ್ಟಿಯ ನಾಯಕಿ ಸಂಯುಕ್ತಾ ಹೆಗಡೆ ನಿಮಗೆಲ್ಲ ನೆನಪಿರಲೇ ಬೇಕಲ್ಲವೇ?

ಬಿಗ್​ಬಾಸ್​ ರಿಯಾಲಿಟಿ ಶೋ ವೇಳೆ ಕಿರಿಕ್​ ಮಾಡಿಕೊಂಡು ಶೋನಿಂದ ಹೊರಬಿದ್ದ ನಟಿ ಸಂಯುಕ್ತಾ ಹೆಗಡೆ, ನಟನೆ ಹಾಗೂ ಚಿತ್ರಗಳಿಂದ ಸುದ್ದಿ ಮಾಡಿದ್ದಕ್ಕಿಂತ ವಿವಾದಗಳಿಂದ ಪ್ರಸಿದ್ಧಿಗೆ ಬಂದಿದ್ದೇ ಜಾಸ್ತಿ ಇದೀಗ ನಟಿ ಸಂಯುಕ್ತಾ ಕೋರಿಯೋಗ್ರಾಫರ್​ ಜೊತೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ವಿಡಿಯೋ ಸಖತ್ ವೈರಲ್​ ಆಗಿದ್ದು, ಸೊಂಟ ಮುಟ್ಟಿದ್ದಕ್ಕೆ ಸಮೀರಾಚಾರ್ಯರಿಗೆ ಹೊಡೆದ ಸಂಯುಕ್ತಾ ಏನಿದೆಲ್ಲ ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಹೌದು ಕಿರಿಕ್​ ಪಾರ್ಟಿ ನಟಿ ಸಂಯುಕ್ತಾ ಬಿಗ್​ಬಾಸ್​ ರಿಯಾಲಿಟಿ ಶೋ ವೇಳೆ ಆಟ ಆಡುವಾಗ ಸೊಂಟ ಮುಟ್ಟಿದ್ದಕ್ಕೆ ಸಮೀರಾಚಾರ್ಯಗೆ ಕಪಾಳ ಮೋಕ್ಷ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಳು. ಬಿಗ್​ಬಾಸ್​ ನಿಯಮದಂತೆ ಸಂಯುಕ್ತಾರನ್ನು ತಕ್ಷಣವೇ ಶೋನಿಂದ ಹೊರಹಾಕಲಾಗಿತ್ತು. ಆಗಲೂ ಆಕೆ ಸಮೀರಾಚಾರ್ಯ ನನ್ನನ್ನು ಬ್ಯಾಡ್​ ಟಚ್​ ಮಾಡಿದ್ದಾರೆ ಎಂದೇ ವಾದಿಸಿದ್ದಳು.

ಇದೀಗ ಸಂಯುಕ್ತಾ ಬಾಂಬೈನಲ್ಲಿ ಡ್ಯಾನ್ಸ್​ ಪ್ರ್ಯಾಕ್ಟಿಸ್​ ವೇಳೆ ಕೊರಿಯೋಗ್ರಾಫರ್​ ಜೊತೆ ಅಗತ್ಯಕ್ಕಿಂತ ಜಾಸ್ತಿ ಕ್ಲೋಸ್​ ಆಗಿ ಸ್ಟೆಪ್​ ಹಾಕಿರುವ ದೃಶ್ಯವೊಂದು ಲೀಕ್ ಆಗಿದ್ದು, ಸಖತ್ ವೈರಲ್​ ಆಗಿದೆ. ಅಕಸ್ಮಾತಾಗಿ ಸೊಂಟಕ್ಕೆ ಕೈತಾಗಿದ್ದಕ್ಕೆ ಹೊಡೆದ ಸಂಯುಕ್ತಾ ಇಲ್ಲಿ ಯುವಕನ ಕಾಲಿನೊಂದಿಗೆ ಕಾಲು ಬೆರೆಸಿ ಕುಣಿದಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಅಷ್ಟೇ ಅಲ್ಲ ವೈರಲ್ ಆಗಿರೋ ವಿಡಿಯೋ ನೋಡಿ ಜನ ಸಖತ್ ಕಮೆಂಟ್​ ಕೂಡ ಮಾಡ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •