ಕನ್ನಡ ಕಿರುತೆರೆಯಲ್ಲಿ ಸದ್ಯ ಸಾಲು ಸಾಲು ಹೊಸ ಕಾರ್ಯಕ್ರಮಗಳು ಶುರುವಾಗಿದ್ದು ಒಂದರ ಹಿಂದೆ ಒಂದು ಮನರಂಜನಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.. ಅದರಲ್ಲೊಂದು ಕಲರ್ಸ್ ಕನ್ನಡ ವಾಹಿನಿಯ ಮಜಾ ಭಾರತ.. ಇದೀಗ ಮಜಾ ಭಾರತ ಶೋನಲ್ಲೊ ನಿರೂಪಣೆ ಮಾಡುತ್ತಿದ್ದ ಭೂಮಿ ಶೆಟ್ಟಿ ಶೋ ಇಂದ ಹೊರ ನಡೆದಿದ್ದಾರೆ..‌ ಈ ಬಗ್ಗೆ ಅಧಿಕೃತವಾಗಿ ಭೂಮಿ‌ ಶೆಟ್ಟಿ ಅವರೇ ತಿಳಿಸಿದ್ದಾರೆ..

ಹೌದು ಕೊರೊನಾ ಕಾರಣದಿಂದಾಗಿ ಸಾಕಷ್ಟು ಶೋಗಳು ಧಾರಾವಾಹಿಗಳು ಎಲ್ಲವೂ ತನ್ನ ಪ್ರಸಾರ ನಿಲ್ಲಿಸಿದ್ದವು.. ಒಂದು ರೀತಿ ಸಂಪೂರ್ಣವಾಗಿ ಕಿರುತೆರೆ ನೆಲಕಚ್ಚಿತ್ತೆನ್ನಬಹುದು.. ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಾ ಸಮಯ ಸಾಗಿಸುತ್ತಿದ್ದರು.. ಆದರೆ ಪರಿಸ್ಥಿತಿ ಮೊದಲ ರೀತಿ ಬರುತ್ತಿದ್ದಂತೆ ಎಲ್ಲಾ ವಾಹಿನಿಗಳಲ್ಲಿ ಹೊಸ ಹೊಸ ಶೋಗಳು ಪ್ರಸಾರ ಆಗಲು ಶುರುವಾಯಿತು.. ಹೊಸ ಹೊಸ ಧಾರಾವಾಹಿಗಳು ಶುರುವಾದವು.. ಹೊಸ ಕತೆಗಳ ಮೂಲಕ ಕನ್ನಡ ಕಿರುತೆರೆ ಮತ್ತೆ ತನ್ನ ಹಾದಿಗೆ ಬಂದಿತು..

bhoomi-shetty

ಇನ್ನು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಶೋ ವನ್ನು ಕಲರ್ಸ್ ಸೂಪರ್ ವಾಹಿನಿ ಸ್ಥಗಿತಗೊಂಡ ಕಾರಣ ಕೆಲ ತಿಂಗಳ ಹಿಂದೆಯೇ ಕಲರ್ಸ್ ಕನ್ನಡ ವಾಹಿನಿಗೆ ವರ್ಗಾಯಿಸಲಾಗಿತ್ತು.. ಇನ್ನು ಇದೀಗ ಕೆಲ ತಿಂಗಳ ಹಿಂದೆ ಮಜಾ ಭಾರತದ ಹೊಸ ಸೀಸನ್ ಅನ್ನು ಸಹ ಶುರು ಮಾಡಿದ್ದು ಬಿಗ್ ಬಾಸ್ ಖ್ಯಾತಿಯ ಭೂಮಿ‌ಶೆಟ್ಟಿ ಹಾಗೂ ಹರೀಶ್ ರಾಜ್ ಅವರನ್ನು ನಿರೂಪಕರನ್ನಾಗಿ ಮಾಡಲಾಗಿತ್ತು.. ಶೋ ತಕ್ಕ ಮಟ್ಟಗೆ ರೇಟಿಂಗ್ ಕೂಡ ಪಡೆದು ಹಿಟ್ ಆಗಿತ್ತು..

bhoomi-shetty

ಆದರೆ ಇದೀಗ ಶೋನಿಂದ ಭೂಮಿ ಶೆಟ್ಟಿ ಹೊರ ನಡೆದಿದ್ದಾರೆ.. ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರಿತೆರೆಗೆ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ ನಂತರ ಬಿಗ್ ಬಾಸ್ ಸೀಸನ್ ಏಳರಲ್ಲಿ ಭಾಗವಹಿಸಿ ಹೆಸರು ಮಾಡಿದ್ದರು.. ಶೈನ್ ವಾಸುಕಿ ಜೊತೆಗೆ ಬಹಳ ಆತ್ಮೀಯವಾದ ಸ್ನೇಹ ಇಟ್ಟುಕೊಂಡಿದ್ದ ಭೂಮಿ ಶೆಟ್ಟಿ ಬಿಗ್ ಬಾಸ್ ನಲ್ಲಿ ಕೊನೆಯ ವಾರಗಳ ವರೆಗೂ ಇದ್ದು ನಂತರ ಹೊರ ನಡೆದಿದ್ದರು.. ಬಿಗ್ ಬಾಸ್ ಮುಗಿದ ಬಳಿಕ ಲಾಲ್ ಡೌನ್ ನಲ್ಲಿ‌ ಊರು ಸೇರಿದ್ದ ಭೂಮಿ ಶೆಟ್ಟಿ ಖುದ್ದು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು..

ಆನಂತರ ಮಜಾಭಾರತ ಶೋನಲ್ಲಿ ನಿರೂಪಣೆ ಮಾಡುವ ಮೂಲಕ‌ ಮತ್ತೊಮ್ಮೆ ಕಿರುತೆರೆಗೆ ರೀಎಂಟ್ರಿ ಪಡೆದಿದ್ದರು.. ಆದರೆ ಮೊನ್ನೆಯಷ್ಟೇ ಶೋ ನಿಂದ ಹೊರ ಹೋಗುತ್ತಿದ್ದೇನೆ ಎಂದಿದ್ದಾರೆ.. “ಇಂದಿನ ಮಜಾಭಾರತ ಸಂಚಿಕೆ ನನ್ನ ಕಡೆಯ ಶೋ.. ನಾನು‌ ಮಜಾ ಭಾರತದ ನಿರೂಪಣೆ ನಿಲ್ಲಿಸುತ್ತಿದ್ದೇನೆ.. ಇದು ಅಧಿಕೃತವಾಗಿ ಕಡೆಯ ಸಂಚಿಕೆ ಚಿತ್ರೀಕರಣ..

bhoomi-shetty

ನನ್ನ ನಿರೂಪಣೆಯನ್ನು ನೀವೆಲ್ಲರೂ ಆನಂದಿಸಿದ್ದೀರಾ ಎಂದು ಅಂದುಕೊಂಡಿದ್ದೇನೆ.. ನಾನು ಒಂದು ನಿಲುವು ತೆಗೆದುಕೊಂಡಿದ್ದೇನೆ.. ಅದೇ ಕಾರಣಕ್ಕಾಗಿ ನಿರೂಪಣೆ ನಿಲ್ಲಿಸುತ್ತಿದ್ದೇನೆ.. ನೀವೆಲ್ಲರೂ ಇಷ್ಟು ದಿನ ನನಗೆ ನೀಡಿದ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು.. ರಚಿತಾ ರಾಮ್ ಹಾಗೂ ಗುರುಕಿರಣ್ ಸರ್ ನೀವಿಬ್ಬರು ರತ್ನಗಳು.. ಹರೀಶ್ ರಾಜ್ ಅವರು ಒಳ್ಳೆಯ ಪಾರ್ಟನರ್ ಆಗಿದ್ದರು.. ಎಲ್ಲರಿಗೂ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಇನ್ನು ಶೋ ಬಿಡುತ್ತಿರುವುದಕ್ಕೆ ಸರಿಯಾದ ಕಾರಣ ನೀಡದ ಭೂಮಿ ಶೆಟ್ಟಿ ನಿಲುವು ಒಂದನ್ನು ತೆಗೆದುಕೊಂಡಿರುವೆ ಎಂದಿದ್ದಾರೆ.. ಆದರೆ ಬಲ್ಲ ಮೂಲಗಳ ಪ್ರಕಾರ ಭೂಮಿ ಶೆಟ್ಟಿ ಅವರಿಗೆ ತೆಲುಗು ಕಿರುತೆರೆ ಇಂಡಸ್ಟ್ರಿಯಲ್ಲಿ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದ ಅವಕಾಶ ದೊರೆತಿದ್ದು ಅಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.. ಅದಾಗಲೇ ಕನ್ನಡದ ಸಾಕಷ್ಟು ಕಿರುತೆರೆ ಕಲಾವಿದರು ತೆಲುಗು ಕಿರುತೆರೆ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದು ಇದೀಗ ಭೂಮಿ ಶೆಟ್ಟಿ ಕೂಡ ತೆಲುಗು ಕಿರುತೆರೆಗೆ ಕಾಲಿಡುತ್ತಿದ್ದಾರೆನ್ನಲಾಗಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •