ಕನ್ನಡದ ಮೇರು ನಟ, ದಿಗ್ಗಜ ನಟರಲ್ಲಿ ಒಬ್ಬರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಧ್ವಂ ಸ ಮಾಡಿದ ವಿಚಾರವಾಗಿ ಈಗಾಗಲೇ ಸಾಕಷ್ಟು ಅ ಸಮಾಧಾನ ಹಾಗೂ ಅಭಿಮಾನಿಗಳು ಮತ್ತು ಸಿನಿ ತಾರೆಯರ ಸಿ ಟ್ಟು ಕೂಡಾ ವ್ಯಕ್ತವಾಗಿದ್ದು, ನಿನ್ನೆಯಷ್ಟೇ ಪುತ್ಥಳಿಯಿದ್ದ ಅದೇ ಜಾಗದಲ್ಲಿ ಹೊಸ ಪ್ರತಿಮೆಯ ಸ್ಥಾಪನೆಗೆ ಶಂಕುಸ್ಥಾಪನೆ ಕಾರ್ಯ ಕೂಡಾ ಬಹಳ ಶುಭಪ್ರದವಾಗಿ ನೆರವೇರಿದೆ. ಅಭಿಮಾನಿಗಳು ಇದರಿಂದ ಸಂತಸಗೊಂಡಿದ್ದಾರೆಯಾದರೂ ಕೂಡಾ ಇಂತಹುದೊಂದು ಅ ಕೃ ತ್ಯ ಮಾಡಿದ ಕಿ ಡಿ ಗೇ ಡಿಗಳಿಗೆ ಸೂಕ್ತ ದಂ ಡ ನೆ ಆಗಬೇಕೆಂಬುದು ಅನೇಕರ ಆಗ್ರಹವಾಗಿರುವುದು ಕೂಡಾ ನಿಜವಾಗಿದೆ.

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ 11 ನೇ ಪುಣ್ಯಸ್ಮರಣೆಯ ದಿನವಾಗಿದೆ‌. ಈ ಸಂದರ್ಭದಲ್ಲಿ ಡಾ. ವಿಷ್ಣುವರ್ಧನ್ ಅವರ ಶ್ರೀಮತಿ ಹಿರಿಯ ನಟಿ ಭಾರತಿ ಅವರು ಇಂದು ಮೈಸೂರಿನಲ್ಲಿ ನಡೆಯುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯದ ಪ್ರಯುಕ್ತ ಇಲ್ಲಿಗೆ ಆಗಮಿಸಿದ್ದರು. ಆ ವೇಳೆ ಅವರು ಮಾದ್ಯಮಗಳ ಮುಂದೆ ವಿಷ್ಣುವರ್ಧನ್ ಅವರ ಪುತ್ಥಳಿಯ ವಿಚಾರವಾಗಿ ಉಂಟಾಗಿದ್ದ ಅ ಸ ಮಾಧಾನದ ವಿಷಯವಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

bharathi-vishnuvardhan

ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿಯು ನಾಪತ್ತೆ ಆಗಿರುವ ವಿಚಾರವು ತಿಳಿದಿದೆ. ಆದರೆ ಬೀದಿ ಬೀದಿಯಲ್ಲಿ ನಮ್ಮ ಯಜಮಾನರ ಪುತ್ಥಳಿಯನ್ನು ಇಡುವುದನ್ನು ನಾನು ಇಷ್ಟ ಪಡುವುದಿಲ್ಲ. ವಿಷ್ಣುವರ್ಧನ್ ಅವರಿಗೂ ಕೂಡಾ ಅದು ಇಷ್ಟ ಆಗಲ್ಲ. ಅಭಿಮಾನದಿಂದ ಇಡಬೇಕೆಂದರೆ ಕೇಳಿ ಮಾಡಿ ಇಡುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ವಿಷ್ಣುವರ್ಧನ್ ಅವರ ಬಗ್ಗೆ ಅ ವ ಹೇ ಳ ನಕಾರಿಯಾಗಿ ಮಾತನಾಡುವವರ ಬಗ್ಗೆಯೂ ಕೂಡಾ ಭಾರತಿ ವಿಷ್ಣುವರ್ಧನ್ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ.

ಯಾರ ಮನಸ್ಸಿನಲ್ಲಿ ಏನಿರುತ್ತದೆ ಎಂದು ಅಂದಾಜು ಮಾಡುವುದು ಸಾಧ್ಯವಿಲ್ಲ. ಅದು ಹೊರಗಡೆ ಬಂದಾಗ ಮಾತ್ರವೇ ಗೊತ್ತಾಗುತ್ತದೆ. ಆದರೆ ಏನೇ ಇದ್ದರೂ ಅದನ್ನು ಒಪ್ಪಿಕೊಳ್ಳುವ ಮನೋಭಾವ ಇರಬೇಕು. ನಮಗೆ ಕೆಟ್ಟ ಭಾವನೆ ಇಲ್ಲದೇ ಇದ್ದಾಗ ಎಲ್ಲವೂ ಕೂಡಾ ಒಳ್ಳೆಯದಾಗಿಯೇ ಕಾಣುತ್ತದೆ. ವಿಷ್ಣುವರ್ಧನ್ ಅವರ ಬಗ್ಗೆ ಯಾರು ಏನೇ ಹೇಳಿದರೂ ಕೂಡಾ ಅವರಿಗೆ ಸುಖಾಸುಮ್ಮನೆ ಪ್ರಚಾರ ಸಿಗುತ್ತದೆ ಎಂದು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!