ನ್ಯಾಚುರಲ್ ಡ್ರಿಂಕ್ ಅಂತಾನೇ ಕರೆಯಬಹುದಾದ ಎಳನೀರನ್ನು ಕುಡಿಯುವುದರಿಂದ ಸಾಕಷ್ಟು ರೋಗಗಳಿಗೆ ಈ ಒಂದು ಎಳನೀರು ರಾಮಬಾಣವಾಗಿದೆ. ಮತ್ತು ಭೂಮಿ ಮೇಲೆ ಇರುವಂತಹ ಅಮೃತ ಅಂತಾನೇ ಕರೆದರೆ ತಪ್ಪಾಗಲಾರದು. ಆದ್ದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಅಂದರೆ ಜೊತೆಗೆ ಸೌಂದರ್ಯವನ್ನು ವೃದ್ಧಿಸಿಕೊಳ್ಳಬೇಕು ಅಂದರೆ ಎಳನೀರನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಕಂಪನಿಗಳಲ್ಲಿ ತಯಾರಿಸುವಂತಹ ಯಾವುದೋ ಎನರ್ಜಿ ಡ್ರಿಂಕ್ ಕುಡಿಯುವ ಬದಲು

ನೈಸರ್ಗಿಕವಾಗಿ ದೊರೆಯುವಂತಹ ಎಳನೀರನ್ನು ಕುಡಿದರೆ ದೇಹಕ್ಕೆ ಸಾಕಷ್ಟು ಎನರ್ಜಿ ದೊರೆಯುವುದರ ಜೊತೆಗೆ ಇನ್ನೂ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಕೂಡ ಎಳನೀರು ಕುಡಿಯುವುದರಿಂದ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಎಳ ನೀರನ್ನು ಕುಡಿಯುವುದರಿಂದ ಯಾವೆಲ್ಲಾ ಸಮಸ್ಯೆ ದೂರವಾಗುತ್ತದೆ ಅನ್ನುವುದನ್ನು ತಿಳಿಯೋಣ. ಮೊದಲಿಗೆ ಎಳನೀರನ್ನು ಕುಡಿಯುವುದರಿಂದ ನಿರ್ಜಲೀಕರಣ

ಅಂದರೆ ಡಿಹೈಡ್ರೇಶನ್ ಸಮಸ್ಯೆಯಿಂದ ಬಳಲುತ್ತಿರುವವರು ಬೇಗನೆ ಶಮನವನ್ನು ಪಡೆಯಬಹುದು. ಆದ್ದರಿಂದ ಬೇಸಿಗೆ ಕಾಲದಲ್ಲಿ ಅಥವಾ ಹೆಚ್ಚು ಬಿಸಿಲಿನಿಂದ ಮನೆಗೆ ಬಂದ ಕೂಡಲೇ ಒಂದು ಎಳನೀರನ್ನು ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಏಕ್ಸ್ಸೈಜ್ ಮಾಡಿದ ಬಳಿಕ ಯಾವುದೇ ಎನರ್ಜಿ ಡ್ರಿಂಕ್ ಅನ್ನು ಕುಡಿಯುವ ಬದಲು ಎಳನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಹೌದು ಸ್ನೇಹಿತರ ವ್ಯಾಯಾಮ ಮಾಡಿದ ನಂತರ ದೇಹದಲ್ಲಿ ಪ್ರೋಟಿನ್ ಅಂಶದ ಕೊರತೆ ಇರುತ್ತದೆ.

ಆಗ ಎಳನೀರನ್ನು ಕುಡಿದರೆ ದೇಹಕ್ಕೆ ಬೇಕಾಗಿರುವಷ್ಟು ಪ್ರೋಟಿನ್ ಅಂಶವನ್ನು ಇದು ದೊರಕಿಸಿಕೊಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಹೃದಯಾಘಾತ ಸಮಸ್ಯೆ ಆಗುವುದನ್ನು ತಡೆಯಬಹುದು. ಇದರ ಜೊತೆಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಪ್ರತಿದಿನ ಎಳನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗಲು ಸಹಾಯ ಮಾಡುತ್ತದೆ. ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡುವುದಕ್ಕೆ ಎಳನೀರು ಸಹಾಯ ಮಾಡುತ್ತದೆ. ಆದ್ದರಿಂದ ಎಳನೀರನ್ನು

ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ಅಥವಾ ಅಜೀರ್ಣ ಸಮಸ್ಯೆ ಆಗುವುದಿಲ್ಲ. ಅತಿಸಾರ ಆಮ ಶಂಕೆ ಅಥವಾ ವಾಂತಿ ಈ ಸಮಸ್ಯೆಯಿಂದ ಸುಸ್ತಾಗಿರುವ ವ್ಯಕ್ತಿಗಳಿಗೆ ಎಳನೀರನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗಿರುವ ಶಕ್ತಿ ಅನ್ನು ಇದು ಪೂರೈಸುವುದರ ಜೊತೆಗೆ ಗ್ಲೂಕೋಸ್ ಅಂಶವನ್ನು ದೇಹದಲ್ಲಿ ಹೆಚ್ಚು ಮಾಡುತ್ತದೆ. ಎಳನೀರಿನಲ್ಲಿ ಗ್ಲೂಟನ್ ಅನ್ನೋ ಒಂದು ಅಂಶ ಇರುವ ಕಾರಣದಿಂದಾಗಿ ಇದನ್ನು ಪ್ರತಿದಿನ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಯಾವುದೇ ತರಹದ ಜ್ವರದಿಂದ ಬಳಲುತ್ತಿದ್ದರೆ ವ್ಯಕ್ತಿಗೆ ಎಳನೀರನ್ನು ಕುಡಿಸುವುದರಿಂದ ನಿಶ್ಶಕ್ತಿ ಆಗುವುದಿಲ್ಲ ಮತ್ತು ದೇಹಕ್ಕೆ ಬೇಕಾಗಿರುವ ಗ್ಲೂಕೋಸ್ ಅಂಶವನ್ನು ಎಳ ನೀರು ಪೂರೈಕೆ ಮಾಡಿ ಸುಸ್ತಾಗದಂತೆ ಇದು ಕಾಪಾಡುತ್ತದೆ.

ಎಳನೀರು - Tender Coconut water - 18 benefits

ನೈಸರ್ಗಿಕವಾಗಿ ದೊರೆಯುವಂತಹ ಈ ಒಂದು ಎಳನೀರನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾಗಿರುವಂತಹ ಸಾಕಷ್ಟು ಪೌಷ್ಟಿಕಾಂಶವನ್ನು ಇದು ದೊರಕುವಂತೆ ಮಾಡುತ್ತದೆ. ಮತ್ತು ತೂಕ ಇಳಿಸಲು ಇಚ್ಛಿಸುವವರು ಪ್ರತಿ ದಿನ ಎಳನೀರನ್ನು ಸೇವನೆ ಮಾಡುವುದರಿಂದ ಇದು ಅನಗತ್ಯ ಕೊಬ್ಬನ್ನು ಕರಗಿಸುವ ಜೊತೆಗೆ ತೂಕವನ್ನು ಕೂಡ ಕಡಿಮೆ ಮಾಡುವುದರಲ್ಲಿ ಸಹಕಾರಿಯಾಗಿದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •