ವಾಸ್ತು ಪ್ರಕಾರ ದಂಪತಿ ನಡುವೆ ಅ*ನುರಾಗ ಹೆಚ್ಚಲು ಬೆ*ಡ್‌ರೂಂ ಹೇಗಿರಬೇಕು? ನೋಡಿ…

Home

ವಾಸ್ತುಗೂ ನಿಮ್ಮ ರೊಮ್ಯಾಂಟಿಕ್‌ ಲೈಫ್‌ಗೂ ಸಂಬಂಧವಿದೆ ಎನ್ನುತ್ತದೆ ವಾಸ್ತುಶಾಸ್ತ್ರ. ನೀವು ವಾಸ್ತು ನಂಬುವುದಾದರೆ ನಿಮ್ಮ ರೊಮ್ಯಾಂಟಿಕ್ ಜೀವನ ಮತ್ತಷ್ಟು ಸುಮಧುರವಾಗಿಸಲು ವಾಸ್ತುಶಾಸ್ತ್ರದ ಪ್ರಕಾರ ಬೆಡ್‌ ರೂಂ ಹೇಗಿರಬೇಕು ಎಂದು ನೋಡೋಣ ಬನ್ನಿ:

ವಾಸ್ತು ಶಾಸ್ತ್ರ ಪ್ರಕಾರ ಬೆಡ್‌ ರೂಂ ನೈರುತ್ಯ ದಿಕ್ಕಿನಲ್ಲಿರಬೇಕು, ಹೋಗಿದ್ದರೆ ಗಂಡ-ಹೆಂಡತಿ ನಡುವೆ ಕೆಮಿಸ್ಟ್ರಿ ಚೆನ್ನಾಗಿರುತ್ತದೆ. ಸಂಬಂಧದಲ್ಲಿ ಸಮತೋಲನವಿರುತ್ತದೆ. ಅಲ್ಲದೆ ಬೆಡ್‌ರೂಂ ಸಾಮಾನ್ಯವಾಗಿ ಇರುವ ಶೇಪ್‌ನಲ್ಲಿ ಇರಬೇಕು, ಯಾವುದೇ ಮೂಲೆ ಅಥವಾ ಕಾರ್ನರ್‌ ಇವೆಲ್ಲಾ ಇರಬಾರದು.

Home Dungeon

ಮೆಟಲ್‌ ಬೆಡ್‌ ನಿದ್ದೆಗೆ ಭಂಗ ಉಂಟು ಮಾಡುವುದು ಹಾಗೂ ದಂಪತಿಯಲ್ಲಿ ಒತ್ತಡ ಹೆಚ್ಚಿಸುವುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮಂಚದ ಮೇಲೆ ಅದಕ್ಕೆ ಹೊಂದುವ ಒಂದು ಬೆಡ್‌ ಇರಲಿ, ಎರಡು ಬೆಡ್‌ಗಳನ್ನು ಜೋಡಿಸಿ ಹಾಕಬೇಡಿ. ಅಲ್ಲದೆ ಬೆಡ್‌ ಅನ್ನು ಬಾಗಿಲಿನ ಮುಂದುಗಡೆ ಇಡಬೇಡಿ.

ಬೆಡ್‌ರೂಂನ ಗೋಡೆಯ ಬಣ್ಣ ಆಕರ್ಷಕವಾಗಿರಬೇಕು. ಪಿಂಕ್ ಅಥವಾ ಪೀಚ್ ಬಣ್ಣ ನೈರುತ್ಯ ದಿಕ್ಕಿಗೆ ಬಳಸಿ, ಪಿಂಕ್‌ ಅಥವಾ ಕೆಂಪು ಬಣ್ಣವನ್ನು ಬೆಡ್‌ ರೂಂ ಬಳಸಿದರೆ ಬೆಡ್‌ರೂಂ ರೊಮ್ಯಾಂಟಿಕ್‌ ಆಗಿರುತ್ತದೆ.

ವಾಸ್ತು ಶಾಸ್ತ್ರ ಪ್ರಕಾರ ಹೆಂಡತಿ ಗಂಡನ ಎಡಭಾಗದಲ್ಲಿ ಮಲಗಿದರೆ ಒಳ್ಳೆಯದಂತೆ. ಅಲ್ಲದೆ ಬೆಡ್‌ರೂಂನಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಲ್ಲಿ ಇಡದೆ ಒಪ್ಪವಾಗಿ, ಆಕರ್ಷಕವಾಗಿ ಇರುವಂತೆ ಇಡಿ.

ಮನೆಯ ಬೆಡ್‌ರೂಂನಲ್ಲಿ ಕನ್ನಡಿಯನ್ನು ಇಡುವಾಗ ಸರಿಯಾದ ಕಡೆಯೇ ಇಡಿ. ಕನ್ನಡಿಯಲ್ಲಿ ಮಂಚದ ಪ್ರತಿಬಿಂಬ ಬೀಳುವಂತೆ ಇಡಲೇಬಾರದು. ಇದರಿಂದ ಸಂಂಬಧದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವುದು. ಬೆಡ್‌ರೂಂನಲ್ಲಿ ಕನ್ನಡಿ ಇಡದಿರುವುದೇ ಒಳ್ಳೆಯದು.

Canopy Beds through History... 35+ Bedroom Designs | Pouted.com | Red  bedroom design, Romantic bedroom design, Bedroom red

ಮನೆಯ ಈಶಾನ್ಯ ದಿಕ್ಕಿನಲ್ಲಿ ಚೆಲ್ಲಾಪಿಲ್ಲಿಯಾಗಿ ವಸ್ತುಗಳನ್ನು ಇಡದಂತೆ ಎಚ್ಚರವಹಿಸಿ. ಉತ್ತರ ಭಾಗದಲ್ಲಿ ಬಿಳಿ, ನೈರುತ್ಯ ಭಾಗದಲ್ಲಿ ಪಪರ್ಲ್, ಕೆಂಪು ಹೂಗಳ ಗಿಡವನ್ನು ಬೆಳೆಸಿ.

ದೇವರ ಫೋಟೋಗಳನ್ನು ಬೆಡ್‌ರೂಂನಲ್ಲಿ ಇಡಬೇಡಿ, ಕುಟುಂಬದ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಇಡಿ. ಈ ವಾಸ್ತು ಟಿಪ್ಸ್ ದಂಪತಿ ನಡುವೆ ಅನುರಾಗ ಹೆಚ್ಚಿಸುವುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...