ಈಗ ಪ್ರತಿಯೊಬ್ಬರೂ ಎರಡು ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಸರ್ವೇ ಸಾಮಾನ್ಯವಾಗಿದೆ. ಪ್ರತಿ ಮನೆಯಲ್ಲೂ ಹತ್ತಾರು ಬ್ಯಾಂಕ್ ಖಾತೆಗಳಿರುತ್ತವೆ. ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ನಿಮಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ನೀವು ಒಂದು ವೇಳೆ ವೇತನ ಪಡೆಯುವ ವ್ಯಕ್ತಿಯಾಗಿದ್ದರೆ, ಬಹು ಉಳಿತಾಯ ಖಾತೆಗಳನ್ನು ಹೊಂದಿರುವುದಕ್ಕಿಂತ ಒಂದೇ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಉತ್ತಮ.

Bank

ತೆರಿಗೆ ಮತ್ತು ಹೂಡಿಕೆ ತಜ್ಞರ ಪ್ರಕಾರ, ಒಂದು ಬ್ಯಾಂಕ್ ಖಾತೆಯನ್ನು ನಿರ್ವಹಿಸುವುದು ಸುಲಭ ಮತ್ತು ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ನಿಮ್ಮ ಬ್ಯಾಂಕಿಂಗ್ ವಿವರಗಳು ಒಂದೇ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವುದರಿಂದ ನಿಮ್ಮ ಕೆಲಸವೂ ಸುಲಭವಾಗುತ್ತದೆ. ಒಂದೇ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವುದರಿಂದ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಸುಲಭದ ವಿಧಾನವಾಗಿದೆ. ಇದಲ್ಲದೇ ಆಗಾಗ್ಗೆ ಬ್ಯಾಂಕ್ ಗಳು‌ ವಿಧಿಸುವ ಡೆಬಿಟ್ ಕಾರ್ಡ್ ಎ.ಎಮ್.ಸಿ, ಎಸ್.ಎಂ.ಎಸ್ ಸೇವಾ ಶುಲ್ಕ ಸೇರಿದಂತೆ ಹಲವಾರು ಬ್ಯಾಂಕ್ ಸೇವಾ ಶುಲ್ಕಗಳನ್ನು ಪಾವತಿಸುವುದನ್ನು ತಪ್ಪಿಸುವುದು ಉಳಿಯುತ್ತದೆ.

Bank

ಒಬ್ಬ ವ್ಯಕ್ತಿ ವೇತನ ಪಡೆಯುತ್ತಿದ್ದರೆ, ಆತ ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಸಿಂಗಲ್ ಉಳಿತಾಯ ಖಾತೆ ಹೊಂದುವುದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಅನುಕೂಲವಾಗುತ್ತದೆ ಕೂಡ. ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವುದರಿಂದ ಕನಿಷ್ಠ ಬ್ಯಾಲೆನ್ಸ್ ಕೂಡ ಕಾಯ್ದು ಕೊಳ್ಳಲೇ ಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಸರಿಯಾದ ಕನಿಷ್ಠ ಬ್ಯಾಲೆನ್ಸ್ ನೊಂದಿಗೆ ನಿರ್ವಹಿಸುವಲ್ಲಿ ತೊಂದರೆಯಾಗಬಹುದು ಇತ್ಯಾದಿ. ಅಂತಹ ಸಂದರ್ಭದಲ್ಲಿ, ಒಂದು ಮಿಸ್ ನಿಮ್ಮ CIBIL ರೇಟಿಂಗ್ ಗೆ ನೇರವಾಗಿ ಸಂಬಂಧಿಸಿದ ದಂಡಕ್ಕೆ ಕಾರಣವಾಗಬಹುದು. ರೇಟಿಂಗ್‌ನಲ್ಲಿ ಕೂಡ ಕಡಿಮೆಯಾಗಲಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •