ಅಯುಷ್ಮಾನ್ ಅರೋಗ್ಯ ಕಾರ್ಡ್ ಮಾಡಿಸಿಕೊಂಡವರಿಗೆ ಭರ್ಜರಿ ಸಿಹಿಸುದ್ದಿ, ಇಲ್ಲಿದೆ ನೋಡಿ

Health/ಆರೋಗ್ಯ Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಈ ಯೋಜನೆಯಿಂದ ಚಿಕಿತ್ಸೆ ಪಡೆಯೋದಕ್ಕೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿ ( Ayushman Bharat Arogya Karnataka card ) ಜೊತೆಗೆ, ಪಡಿತರ ಮತ್ತು ಆಧಾರ್ ಚೀಟಿಗಳನ್ನು ( Ration and Aadhar Card ) ಒದಗಿಸುವಂತೆ ಆಸ್ಪತ್ರೆಗಳಲ್ಲಿ ಕೇಳುತ್ತಿರೋದ್ರಿಂದ, ಗುರುತಿನ ಚೀಟಿ ಇದ್ರೇ ಮಾತ್ರ ಸಾಕು. ಚಿಕಿತ್ಸೆಗೆ ಮತ್ಯಾವುದೇ ದಾಖಲೆಗಳು ಅವಶ್ಯಕವಿಲ್ಲ ಎಂಬುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಸುವರ್ಣ ಆರೋಗ್ಯ ಸುರಕ್ಷಾ ವಿಶ್ವಸ್ಥ ಮಂಡಳಿಯ ಕಾರ್ಯಕಾರಿ ನಿರ್ದೇಶಕರು ಜಂಟಿ ಸುತ್ತೋಲೆ ಹೊರಡಿಸಿದ್ದು, ಈ ಮೊದಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಯನ್ನು ( ayusman arogya karnataka ) ವಿತರಿಸದ ಕಾರಣ, ಆದ್ಯತಾ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ನೀಡೋದಕ್ಕೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಗಳನ್ನು ಗುರುತಿಗಾಗಿ ಬಳಕೆ ಮಾಡಲು ತಿಳಿಸಲಾಗಿತ್ತು.
ಆಯುಷ್ಮಾನ್‌ ಕಾರ್ಡ್‌: ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಯಾವಾಗ? - ಜಿಲ್ಲೆಯ ಜನತೆಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಯಾವಾಗ? | Vijaya Karnataka

ಈಗಾಗಲೇ ರಾಜ್ಯದಲ್ಲಿ ಆಯುಷ್ಮಾನ್ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸುಮಾರು 1.5 ಕೋಟಿ ಗುರುತಿನ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿರುತ್ತದೆ. ಚಿಕಿತ್ಸೆಗಾಗಿ ಫಲಾನುಭವಿಗಳು ಆಸ್ಪತ್ರೆಗಳಿಗೆ ಆಗಮಿಸಿದಾಗ ಮತ್ತು ಒಳರೋಗಿಗಳಾಗಿ ದಾಖಲಿಸಿಕೊಂಡು ಬಳಸುವಂತೆ ತಿಳಿಸಲಾಗಿದೆ.ಆದ್ರೇ ಕೆಲ ಆಸ್ಪತ್ರೆಗಳಲ್ಲಿ ಗುರುತಿನ ಚೀಟಿ ನೀಡಿದ್ದರೂ ಸಹ ಪೂರಕ ದಾಖಲೆಯಾಗಿ ಪಡಿತರ ಮತ್ತು ಆಧಾರ್ ಚೀಟಿಗಳನ್ನ ಒದಗಿಸುವಂತೆ ಒತ್ತಾಯಿಸುತ್ತಿರೋದು ಗಮನಕ್ಕೆ ಬಂದಿರುತ್ತಿದೆ.

ಅಲ್ಲದೇ ರಾಜ್ಯದ ಕೆಲವು ಆಸ್ಪತ್ರೆಗಳು ಕಾರ್ಡ್ ಹೊಂದಿದ್ದರೂ ಪೂರಕ ದಾಖಲೆಗಳನ್ನು ಕೇಳಿ ಅನಾನುಕೂಲ ಉಂಟು ಮಾಡುತ್ತಿರೋದಾಗಿ ರೋಗಿಗಳು ಅಲವತ್ತುಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದಾಗ ಆರೋಗ್ಯ ಮಿತ್ರರು, ಧನಬೇಡಿಕೆ ನಿರ್ವಾಹಕರು, ಆಸ್ಪತ್ರೆಯಲ್ಲಿರುವ ಯಾವುದೇ ಸಿಬ್ಬಂದಿ ಪೂರಕ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸುವುದನ್ನು ನಿಷೇಧಿಲಾಗಿದೆ ಎಂದು ತಿಳಿಸಿದ್ದಾರೆ.

S A S T ( Suvarna Arogya Suraksha Trust ) (@s_arogya) / Twitter

ಒಂದು ವೇಳೆ ಗುರುತಿನ ಚೀಟಿ ಇಲ್ಲದೇ ಇರುವ ಅರ್ಹ ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದಾಗ ಅವರ ಬಳಿ ಲಭ್ಯವಿರುವ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಗಳ ಆಧಾರದ ಮೇಲೆ ದಾಖಲಿಸಿಕೊಂಡು, ಶುಲ್ಕ ರಹಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದು. ಒಂದು ವೇಳೆ ಗುರುತಿನ ಚೀಟಿ ಇದ್ದೂ ಪೂರಕ ದಾಖಲೆಗಳನ್ನು ಒದಗಿಸುವಂತೆ ಕೋರಿದಲ್ಲಿ ಅಂತಹ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...