ಮದುವೆ

ಮದುವೆ ಮನೆಯಲ್ಲಿ ಅದ್ಭುತವಾಗಿ ಕುಣಿದ ವಧುವಿನ ತಂಗಿ–ವೀಡಿಯೋ ನೋಡಿ ಸಂಭ್ರಮಿಸಿದ ನೆಟ್ಟಿಗರು…

Home

ಮದುವೆ ಎಂದರೆ ಸಂಭ್ರಮ, ಮದುವೆ ಎಂದರೆ ಅಲ್ಲೊಂದು ಸಡಗರ, ಸಂತೋಷ ಹಾಗೂ ಎಲ್ಲರಲ್ಲೂ ಒಂದು ಉತ್ಸಾಹವಿರುತ್ತದೆ. ಮದುವೆ ಎಂದರೆ ಅದೊಂದು ಮರೆಯಲಾರದ ನೆನಪಾಗಿ ಉಳಿಯಬೇಕೆಂದು ಮದುವೆ ಗಂಡು, ಹೆಣ್ಣು ಆಶಿಸುತ್ತಾರೆ. ವಿವಾಹ ಸಮಾರಂಭಗಳಲ್ಲಿ ಗಂಡು, ಹೆಣ್ಣು ಎಷ್ಟು ಖುಷಿಯಿಂದ ಇರುತ್ತಾರೋ ಅದಕ್ಕಿಂತ ಹೆಚ್ಚು ಸಂಭ್ರಮ ಅವರ ಬಂಧು ವರ್ಗದವರಲ್ಲಿ ಹಾಗೂ ಸಹೋದರ,‌ಸಹೋದರಿಯರಲ್ಲಿ ಕಾಣುತ್ತದೆ. ಬಹಳ ಖುಷಿಯಾಗಿ, ಮದುವೆಯ ವಿವಿಧ ಶಾಸ್ತ್ರಗಳು ನಡೆಯುವ ವೇಳೆಯಲ್ಲಿ ಅವರೆಲ್ಲರೂ ಹಾಡಿ, ಕುಣಿದು ಆ ಸಂತೋಷದ ಕ್ಷಣಗಳನ್ನು ಸಂಭ್ರಮ ಇರುವುದು ಸಾಮಾನ್ಯವೇ ಆಗಿರುತ್ತದೆ..

ಇತ್ತೀಚಿನ ದಿನಗಳಲ್ಲಿ ಮದುವೆಮನೆಗಳಲ್ಲಿ ನಡೆಯುವ ಸಂಭ್ರಮ ಸಡಗರದ ಸನ್ನಿವೇಶಗಳನ್ನು ಹೊತ್ತುತರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಂತಹ ಸಂತೋಷದ ಕ್ಷಣಗಳ ವಿಡಿಯೋಗಳನ್ನು ನೋಡಿ‌ದ ಜನರು ಸಹಾ ಬಹಳ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅಂತಹುದೇ ಒಂದು ವಿಡಿಯೋ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಈ ವಿಡಿಯೋದಲ್ಲಿ ಮದುವೆಯ ಸಂಭ್ರಮದ ವೇಳೆ ವಧುವಿನ ತಂಗಿ ಖುಷಿಯಿಂದ ಹಿಂದಿ ಸಿನಿಮಾದ ಹಾಡೊಂದಕ್ಕೆ ಭರ್ಜರಿ ಸ್ಟೆಪ್ಪು ಗಳನ್ನು ಹಾಕುವ ಮೂಲಕ ಮದುವೆಗೆ ಬಂದಿದ್ದ ಅತಿಥಿಗಳನ್ನು ರಂಜಿಸಿದ್ದಾಳೆ. ಆಕೆಯ ಅದ್ಭುತವಾದ ಡಾನ್ಸ್ ನ ದೃಶ್ಯ ಎಲ್ಲರ ಮನಸ್ಸಿಗೂ ಹಿತವನ್ನು ನೀಡುತ್ತಾ,‌ ಡ್ಯಾನ್ಸ್ ಪ್ರಿಯರಿಗೆ ವಿಡಿಯೋ ಮತ್ತಷ್ಟು ಇಷ್ಟವಾಗುತ್ತಾ ವೈರಲ್ ಆಗುತ್ತಾ ಸಾಗಿದೆ.

Viral Video: Bride starts playing 'kabaddi' during the jaimala ceremony garland wedding | Viral Video: ಹಾರ ಹಾಕಿಸಿಕೊಳ್ಳದೆ ಸ್ಟೇಜ್‌ ಮೇಲೆ ವರನ ಜೊತೆ ಕಬಡ್ಡಿ ಆಡಿದ ವಧು, ವರ ಕಕ್ಕಾಬಿಕ್ಕಿ!– News18 Kannada

ಮದುವೆಯ ಹೆಣ್ಣಿನ ತಂಗಿಯು ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದ ಸೂಪರ್ ಡೂಪರ್ ಹಿಟ್ ಹಾಡೊಂದಕ್ಕೆ ಹೆಜ್ಜೆಗಳನ್ನು ಹಾಕಿದ್ದಾಳೆ. ಆಕೆ ಕುಣಿಯುವಾಗ ಎಲ್ಲರೂ ಆಕೆಯ ಡ್ಯಾನ್ಸ್ ಸ್ಟೆಪ್ ಗಳ ಮೋಡಿಗೆ ಒಳಗಾದವರಂತೆ ಡ್ಯಾನ್ಸ್ ನಲ್ಲಿ ಲೀನವಾಗಿ ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋವನ್ನು ಮೂರುವರೆ ಕೋಟಿಗಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ.

ಒಂದು ಲಕ್ಷಕ್ಕಿಂತಲೂ ಅಧಿಕ ಜನರು ಮೆಚ್ಚುಗೆಗಳನ್ನು ನೀಡಿದ್ದಾರೆ. ಎರಡೂವರೆ ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಒಳ್ಳೆಯ ಹಾಡಿನೊಂದಿಗೆ ಉತ್ತಮವಾದ ಡ್ಯಾನ್ಸ್ ಕಂಗ್ರಾಜುಲೇಷನ್ಸ್ ಎಂದು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡುತ್ತಾ ನಿಮ್ಮ ಅದ್ಭುತವಾದ ಡಾನ್ಸನ್ನು ವರ್ಣಿಸಲು ಪದಗಳೇ ಇಲ್ಲ.

ನಿಮ್ಮ ಡಾನ್ಸ್ ನನ್ನ ಹೃದಯಕ್ಕೆ ತಂಪನು ನೀಡಿದೆ ಎಂದು ಹೊಗಳಿದ್ದಾರೆ. ಭಾರತೀಯ ಸಂಸ್ಕೃತಿಗೆ ತಕ್ಕಂತೆ ಬಹಳ ಹಿತವಾದ ನೃತ್ಯ ಎಂದು ಒಬ್ಬರು ಹೇಳಿದರೆ, ವಧುವಿನ ತಂಗಿ ಮನಸ್ಸು ಬಿಚ್ಚಿ ಅಕ್ಕನ ಮದುವೆಯ ಸಂಭ್ರಮವನ್ನು ಹೀಗೆ ಸಂಭವಿಸುತ್ತಿರುವುದು ನಮ್ಮ ಮನಸ್ಸಿಗೂ ಖುಷಿಯನ್ನು ನೀಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹಳ ಸುಂದರವಾದ ಡಾನ್ಸ್ ಇದು, ಆಕೆಯ ಡಾನ್ಸ್ ಕೌಶಲ್ಯ ಅಥವಾ ಪ್ರತಿಭೆಯನ್ನು ಮೆಚ್ಚದೇ‌ ಇರಲು ಸಾಧ್ಯವಿಲ್ಲ ಎಂದು ಕೆಲವರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇನ್ನೂ ಕೆಲವರು ಮದುವೆಯ ಮನೆಗೆ ಈ ಡಾನ್ಸ್ ಮೂಲಕ ಇನ್ನಷ್ಟು ಕಳೆ ಕಟ್ಟಿದೆ ಈ ಹುಡುಗಿಯ ಡಾನ್ಸ್ ಪರ್ಫಾಮೆನ್ಸ್ ಎಂದು ಹೊಗಳಿಕೆಯನ್ನು ನೀಡಿದ್ದಾರೆ. ಒಟ್ಟಾರೆ ಡಾನ್ಸ್ ವೀಡಿಯೋ ಬಹಳಷ್ಟು ಜನರಿಗೆ ಹಿಡಿಸಿದೆ. ಆದ್ದರಿಂದಲೇ ಈ ರೀತಿ ನೆಟ್ಟಿಗರು ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡುವ ಮೂಲಕ ಡ್ಯಾನ್ಸ್ ಬಗ್ಗೆ ತಮ್ಮ ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...