ನಮ್ಮ ಸಂಸ್ಕೃತಿಯಲ್ಲಿ ಹೆಂಡತಿಯನ್ನು ಎರಡನೇ ತಾಯಿಯೆಂದೇ ಕರೆಯಲಾಗುತ್ತದೆ.. ಹುಟ್ಟಿದ ಮನೆಯನ್ನು ಬಿಟ್ಟು ಬಂದು ಮತ್ತಿನ್ಯಾವುದೋ ಮನೆಗೆ ಬೆಳಕಾಗುವಳು ಗಂಡನ ಮನೆಯೇ ಸರ್ವಸ್ವವೆಂದು ಬದುಕುವಳು.. ಗಂಡ ಮಕ್ಕಳಿಗಾಗಿ ಜೀವ ಕೊಡಲು ಸಹಾ ತಾಯಾರಾಗಿರುತ್ತಾಳೆ.. ಹೆಣ್ಣಿಗೆ ಪೂಜ್ಯಸ್ಥಾನ ನೀಡಿರುವುದು ಅವಳ ಇಂತಹ ದೊಡ್ಡ ಗುಣಗಳಿಂದ.. ಇದೀಗ ಅಂತಹುದೇ ಒಂದು ತ್ಯಾಗಮಯಿ ಘಟನೆ ನಡೆದಿದ್ದು ಕೊರೊನಾಗೆ ತುತ್ತಾದ ಗಂಡನ ಜೀವ ಉಳಿಸಿಕೊಳ್ಳಲು ಹೆಂಡತಿ ಮಾಡಿರುವ ಕೆಲಸನೋದುಗರಲ್ಲಿ ಆಶ್ವರ್ಯವನ್ನುಂಟು ಮಾಡಿದೆ.. ಆದರೆ ಕೊನೆಗೆ ನಡೆದದ್ದು ಮಾತ್ರ ಮನಕಲಕುವಂತಿದೆ..

ಹೌದು ಕೊರೊನಾ ಎಂದರೆ ಸಾಕು ಕಣ್ಣಿಗೆ ಕಾಣದಂತೆ ದೂರ ಓಡಿಬಿಡುತ್ತಾರೆ.. ಆ ಕಾಯಿಲೆಯೇ ಆ ರೀತಿಯಾಗಿದೆ.. ಆಸ್ಪತ್ರೆಯಲ್ಲಿರುವವರನ್ನು ನೋಡುವ ಹಾಗಿಲ್ಲ.. ಮುಟ್ಟುವ ಹಾಗಿಲ್ಲ.. ಹತ್ತಿರ ನಿಂತು ತಲೆ ನೇವರಿಸಿ ಧೈರ್ಯ ತುಂಬುವಂತಿಲ್ಲ.. ಕೊನೆ ಘಳಿಗೆಯಲ್ಲಿ ಶಾಸ್ತ್ರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವೂ ಮಾಡುವಂತಿಲ್ಲ.. ಆದರೆ ಗಂಡನ ಪ್ರಾಣ ಉಳಿಸಿಕೊಳ್ಳಲು ಅಂದು ಸಾವಿತ್ರಿ ಯಮನಜೊತೆ ಹೋರಾಡಿ ಗೆದ್ದಳೆಂಬ ಕತೆಯನ್ನು ನಾವು ಕೇಳಿರುತ್ತೇವೆ.. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನ ಜೀವ ಉಳಿಸಿಕೊಳ್ಳಲು ತನ್ನ ಜೀವವನ್ನೇ ಲೆಕ್ಕಿಸದೇ ಪ್ರಯತ್ನ ಮಾಡಿರುವ ಘಟನೆ ನಿಜಕ್ಕೂ ಸಂಕಟ ತರುತ್ತದೆ..

ಹೌದು ಆಕೆಯ ಹೆಸರು ರೇಣು ಸಿಂಘಾಲ್.. ಆಕೆಯ ಪತಿ ರವಿ ಸಿಂಘಾಲ್.. ಅವರಿಗೆ ಕೊರೊನಾ ಸೋಂಕು ತಗುಲಿದ್ದು ಉಸಿರಾಟದ ಸಮಸ್ಯೆಯಾಗಿ ಕುಸಿದು ಬಿದ್ದಿದ್ದರು.. ಉಸಿರಾಡಲು ಕಷ್ಟ ಪಡುತ್ತಿದ್ದರು.. ಆಟೋದಲ್ಲಿ ಗಂಡನನ್ನು ಆಸ್ಪತ್ರೆಗೆ ರೇಣು ಸಿಂಗಾಲ್ ಅವರು ಕರೆತರುತ್ತಿದ್ದರು.. ಆದರೆ ಗಂಡನ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು.. ಉಸೊರಾಡುವುದು ಇನ್ನು ಸಾಧ್ಯವೇ ಇಲ್ಲ ಎಂದು ತಿಳಿಯಿತು.. ಗಂಡನ ಹೃದಯ ಹಾಗೂ ಶ್ವಾಸಕೋಶ ಸಂಪೂರ್ಣವಾಗಿ ಕೆಲಸ ನಿಲ್ಲಿಸಿಬಿಟ್ಟರೆ ಎಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಬಿಡಬೇಕಲ್ಲಾ ಎಂಬ ಭಯದಿಂದ ಗಂಡನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಲೇ ಬೇಕೆಂದು ಆಟೋದಲ್ಲಿಯೇ ಗಂಡನ ಬಾಯಿಗೆ ತನ್ನ ಬಾಯಿ ಹಾಕಿ ಉಸಿರು ನೀಡುವ ಮೂಲಕ ಹೃದಯ ಹಾಗೂ ಶ್ವಾಸಕೋಶವನ್ನು ಪ್ರಚೋದಿಸಲು ಪ್ರಯತ್ನ ಮಾಡಿದ್ದಾರೆ.. ಈ ರೀತಿ ಬಾಯಿಗೆ ಬಾಯಿ ಇಟ್ಟರೆ ತನಗೂ ಕೊರೊನಾ ಬರುವುದು ಎಂಬದು ಖಚಿತವಾಗಿದ್ದರು ಸಹ ತನ್ನ ಗಂಡನನ್ನು ಉಳಿಸಿಕೊಳ್ಳಲೇಬೇಕೆಂದು ಬಾಯಿಗೆ ಬಾಯಿಟ್ಟು ಉಸಿರು ನೀಡಿದ್ದಾರೆ..

ಆದರೆ ರೇಣು ಸಿಂಘಾಲ್ ಅವರ ಪ್ರಯತ್ನ ಫಲ ನೀಡಲೇ ಇಲ್ಲ.. ಅವರ ಪತಿ ರವಿ ಸಿಂಘಾಲ್ ಆಟೋದಲ್ಲಿಯೇ ಕೊನೆಯುಸಿರೆಳೆದು ಬಿಟ್ಟಿದ್ದಾರೆ.. ಗಂಡನಿಗಾಗಿ ರೇಣು ಅವರ ನಿಸ್ವಾರ್ಥ ಹೋರಾಟ ಯಶಸ್ವಿಯಾಗಲೇ ಇಲ್ಲ.. ರವಿ ಅವರನ್ನು ನಂತರ ಎಸ್ ಎನ್ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಅದಾಗಲೇ ಜೀವ ಕಳೆದುಕೊಂಡಿದ್ದಾರೆ ಎಂಬುದನ್ನು ಧೃಡ ಪಡಿಸಿದ್ದಾರೆ.. ಇತ್ತ ಗಂಡನನ್ನು ಉಳಿಸಿಕೊಳ್ಳಲೇ ಬೇಕೆಂದು ತನ್ನ ಜೀವವನ್ನೆ ಪಣಕ್ಕಿಟ್ಟ ಹೆಂಡತಿ ರೇಣು ಸಿಂಘಾಲ್ ಅವರಿಗೂ ಬಹುಶಃ ಕೊರೊನಾ ಸೋಂಕು ತಗುಲಿರಬಹುದಾಗಿದ್ದು ಅವರಾದರೂ ಗುಣಮುಖರಾಗಲಿ.. ಕೊನೆ ಪಕ್ಷ ಅವರ ಜೀವವಾದರೂ ಉಳಿಯುವಂತಾಗಲಿ.. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ರೇಣು ಅವರು ಗಂಡನನ್ನು ಉಳಿಸಿಕೊಳ್ಳಲು ಮಾಡಿದ ಈ ಪ್ರಯತ್ನದ ಫೋಟೋ ವೈರಲ್ ಆಗಿದ್ದು ಆಕೆಗಾಗಿ ಕಂಬನಿ ಮಿಡಿದಿದ್ದಾರೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •