atm-scan-withdraw

ಇನ್ನುಮುಂದೆ ಫೋನ್ ಪೆ,ಗೂಗಲ್ ಪೆ ಮತ್ತು ಪೆಟಿಎಂ ಮೂಲಕ ಏಟಿಎಂ ನಲ್ಲಿ ಹಣ ಪಡೆಯಬಹುದು,ಹೊಸ ಯೋಜನೆ ನೋಡಿ.

Home

ಸಾಮಾನ್ಯವಾಗಿ ಏಟಿಎಂ ಎಲ್ಲರೂ ಬಳಸುತ್ತಾರೆ. ಏಟಿಎಂ ಇಲ್ಲದೆ ಹೆಚ್ಚಿನ ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿಯಮಗಳನ್ನ ಜಾರಿಗೆ ತಂದಿದ್ದು ಇದು ಜನರ ಅನುಕೂಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.ಇನ್ನು ಏಟಿಎಂ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿಯಮಗಳನ್ನ ಜಾರಿಗೆ ತಂದಿದ್ದು ಈಗ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತಂದಿದ್ದು ಇನ್ನುಮುಂದೆ ಜನರು ಏಟಿಎಂ ಕಾರ್ಡ್ ಇಲ್ಲದೆ ಜನರು ಏಟಿಎಂ ಮೂಲಕ ಹಣವನ್ನ ಪಡೆಯಬಹುದಾಗಿದೆ.

ಇನ್ನುಮುಂದೆ ಫೋನ್ ಪೆ, ಗೂಗಲ್ ಪೆ, ಪೆಟಿಎಂ ಮೂಲಕ ಜನರು ಏಟಿಎಂ ಗಳಿಂದ ಹಣವನ್ನ ಪಡೆಯಬಹುದು. ಹಾಗಾದರೆ ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೆ ತಂದಿರುವ ಹೊಸ ಯೋಜನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಎಟಿಎಂನಿಂದ ಹಣವನ್ನು ಹಿಂಪಡೆಯಲು ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಒಂದೇ ಮಾರ್ಗವಲ್ಲ. ಇತ್ತೀಚಿನ ದಿನಗಳಲ್ಲಿ ಎಟಿಎಂನಿಂದ ಬೇರೆ ಬೇರೆ ವಿಧಾನಗಳಲ್ಲಿ ಹಣವನ್ನು ಹಿಂಪಡೆಯಬಹುದು. ಗೂಗಲ್ ಪೇ ಮತ್ತು ಪೇಟಿಎಂ ವಾಲೆಟ್ ಕೂಡ ಇದರಲ್ಲಿ ಸೇರಿದೆ.

How to set, reset Phonepe UPI PIN : PhonePe: ಯುಪಿಐ ಪಿನ್ ಬದಲಾಯಿಸುವುದು ಹೇಗೆ?  - Vijaya Karnataka

ಸ್ನೇಹಿತರೆ ನಿಮ್ಮ ಮೊಬೈಲ್ ನಲಿ ಫೋನ್ ಪೆ,.ಗೂಗಲ್ ಪೆ,ಪೆಟಿಎಂ ಇದ್ದರೆ ನೀವು ಅದರ ಮೂಲಕ ಹಣವನ್ನ ಏಟಿಎಂ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕಾಗಿ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಹಕರು ಹಣ ಹಿಂಪಡೆಯಲು ಮತ್ತು ಎಟಿಎಂಗಳನ್ನು ಹೊರತುಪಡಿಸಿ ಪರ್ಯಾಯ ವಿಧಾನಗಳನ್ನು ಬಳಸಿಕೊಂಡು ಹಣವನ್ನು ಪಡೆಯಲು ಅನುಕೂಲವಾಗುವಂತೆ ಯುಪಿಐ ಆಧಾರಿತ ಮೊಬೈಲ್ ಅಪ್ಲಿಕೇಶನ್‌ನಿಂದ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಸ್ನೇಹಿತರೆ ಈ ಸೌಲಭ್ಯದ ಅಡಿಯಲ್ಲಿ ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಏಟಿಎಂ ಗಕಿಂದ ಹಾನವನ್ನ ಪಡೆಯಬಹುದಾಗಿದೆ.

ಇನ್ನು ಹಣ ಹಿಂಪಡೆಯಲು ನೀವು ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು ಮತ್ತು ಇದನ್ನು ಇಂಟರ್‌ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಟ್ರಾನ್ಸಾಕ್ಷನ್ ಎಂದು ಹೆಸರಿಸಲಾಗಿದೆ. ಸ್ನೇಹಿತರೆ ಈ ವಿಧಾನದಲ್ಲಿ ಹಣವನ್ನ ಪಡೆಯಲು ಯಾವುದೇ ಏಟಿಎಂ ಕಾರ್ಡ್ ಬಳಸುವ ಅವಶ್ಯಕತೆ ಇರುವುದಿಲ್ಲ. ನೀವು ನಿಮ್ಮ ಏಟಿಎಂ ಕಾರ್ಡ್ ಅನ್ನು ಮನೆಯಲ್ಲಿ ಮರೆತು ಬಂದಿದ್ದರೆ ನೀವು ಹಣ ಹಿಂಪಡೆಯಲು ನೀವು ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದನ್ನು ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಟ್ರಾನ್ಸಾಕ್ಷನ್ ಎಂದು ಹೆಸರಿಸಲಾಗಿದೆ. ಇನ್ನು ಜನರು ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಎಟಿಎಂನಿಂದ ಹಣವನ್ನು ಹಿಂಪಡೆಯಬಹು. ಇನ್ನು ಹಣ ಡ್ರಾ ಮಾಡಿದ ಎಟಿಎಂ ಪರದೆಯ ಮೇಲೆ ಕ್ಯೂಆರ್ ಕೋಡ್ ಕಾಣಿಸುತ್ತದೆ. ಆಗ ನೀವು ನಿಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಬೇಕಾಗುತ್ತದೆ.

PhonePe: UPI, Recharge, Investment, Insurance - Google Play वरील अ‍ॅप्स

ನಿಮ್ಮ ಮೊಬೈಲ್‌ನಲ್ಲಿರುವ UPI ಅಪ್ಲಿಕೇಶನ್‌ನಲ್ಲಿ ನೀವು ATM ನಿಂದ ಹಿಂಪಡೆಯಲು ಬಯಸುವ ಹಣವನ್ನು ನಮೂದಿಸಿ. ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ ನೀವು ಒಂದೇ ಸಮಯದಲ್ಲಿ ಯಾವುದೇ ಎಟಿಎಂನಿಂದ ಗರಿಷ್ಠ 5,000 ರೂಪಾಯಿಯ ವರೆಗೆ ಹಣವನ್ನ ವಿತ್ ಡ್ರಾ ಮಾಡಬಹುದು. ಇನ್ನು ಜನರು ಈ ಸಮಯದಲ್ಲಿ ನೆನಪಿನಲ್ಲಿ ಇಡಬೇಕದಾ ಅಂಶ ಏನು ಅಂದರೆ, ನೀವು ಹಣವನ್ನ ತೆಗೆಯುವ ಸಮಯದಲ್ಲಿ ಅಪ್ಲಿಕೇಶನ್‌ನಲ್ಲಿ 4 ಅಥವಾ 6 ಅಂಕಿಯ ಪಿನ್ ಅನ್ನು ನಮೂದಿಸಬೇಕಾಗುತ್ತದೆ. ಇನ್ನು ಪಿನ್ ನಮೂದಿಸಿದ ತಕ್ಷಣ ಎಟಿಎಂನಿಂದ ನೋಟು ಹೊರಬರುತ್ತದೆ. ನಂತರ ನೀವು ಹಣ ಪಡೆದುಕೊಂಡ ಮಾಹಿತಿಯು ನಿಮ್ಮ ಮೊಬೈಲ್ ಫೋನ್‌ಗೆ ಬರುತ್ತದೆ. ಯಾವ ಖಾತೆಯಿಂದ ಹಣ ಕಡಿತವಾಗುತ್ತದೆಯೋ ಆ ಬ್ಯಾಂಕ್‌ನಿಂದ, ಎಟಿಎಂನಿಂದ ಇಷ್ಟು ಹಣ ಡ್ರಾ ಆಗಿದೆ ಎಂಬ ಸಂದೇಶ ಬರುತ್ತದೆ. ಈ ಸಂದೇಶಗಳನ್ನು ಭದ್ರತೆಗಾಗಿ ಕಳುಹಿಸಲಾಗುತ್ತದೆ. ಇನ್ನು ಸೌಲಭ್ಯದ ಅಡಿಯಲ್ಲಿ ಜನರು ಒಮ್ಮೆ 5000 ರೂಪಾಯಿಯನ್ನ ಮಾತ್ರ ಪಡೆಯಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...