ಅಶ್ವಿನಿ

ಅಪ್ಪು ಇರದ ಬಳಿಕ ಮೊದಲ ಬಾರಿ ಮದುವೆಯಲ್ಲಿ ಕಾಣಿಸಿಕೊಂಡ ಅಶ್ವಿನಿ,ನೋಡಿ ಫೋಟೋಸ್…

Home

ನಮ್ಮ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮ ಕರುನಾಡಿನ ಮನೆ ಮಗನಾಗಿದ್ದವರು. ಸದ್ಯ ಇದೀಗ ಅಪ್ಪು ಅಗಲಿಕೆಯ ವಾಸ್ತವವನ್ನು ನೆನೆದು ಜೀವನ ನಡೆಯಲೇಬೇಕು ಎನ್ನುವಂತಾಗಿದ್ದು ಆದರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ನನಸು ಮಾಡುತ್ತಾ ತಮ್ಮ ಮುಂದಿನ ಬದುಕನ್ನು ಸಾಗಿಸುವ ನಿರ್ಧಾರವನ್ನು ಇದೀಗ ಕೈಕೊಂಡಿದ್ದು ಮೊನ್ನೆಯಷ್ಟೇ ಅಪ್ಪು ಕನಸಿನ ಸಿನಿಮಾದ ಗಂಧದಗುಡಿ ಚಿತ್ರದ ಟೈಟಲ್ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದರು. ಹೌದು ಸದ್ಯ ಇದೀಗ ಈ   ದೇಶದಾದ್ಯಂತ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದ್ದು ಕೇವಲ ಎರಡು ದಿನದಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆ ಪಡೆದುಕೊಂಡು ದಾಖಲೆ ಬರೆದಿದೆ.

ಇನ್ನು ಪ್ರತಿಯೊಂದು ನಿರ್ಧಾರವನ್ನು ಆಗಲೇ ಪ್ರತಿಯೊಂದು ಹೆಜ್ಜೆ ಆಗಲಿ ಬಹಳ ಪ್ರಭುತ್ವದಿಂದ ಇಡುವ ಗುಣದವರು ಅಶ್ವಿನಿ ಯವರಾಗಿದ್ದು ಇಂತಹ ನೋವಿನ ಮತ್ತು ಕಷ್ಟದ ಸಮಯದಲ್ಲಿ ಅಶ್ವಿನಿ ರವರು ನಡೆದುಕೊಳ್ಳುತ್ತಿರುವ ರೀತಿ ಮಾತ್ರ ಅವರ ದೊಡ್ಡ ಗುಣ ಹಾಗೂ ದೊಡ್ಡತನವನ್ನು ತೋರಿಸಿದೆ ಎನ್ನಬಹುದು. ಇನ್ನು ಈ ನೋವುಗಳು ಎಲ್ಲವನ್ನೂ ಕಡಿಮೆ ಮಾಡಿಕೊಳ್ಳಬೇಕಾದರೆ ಪಿ ಆರ್ ಕೆ ಆಫಿಸ್ ಗೆ ತೆರಳಿ ಅಲ್ಲಿನ ಕೆಲಸಗಳನ್ನು ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನಂತರ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನಿಲ್ಲಿಸದೆ ದೊಡ್ಡ ಮಗಳನ್ನು ಅಮೆರಿಕಾಗೆ ಮತ್ತೆ ಕಳುಹಿಸಿದ್ದಾರೆ. ಸದ್ಯ ಇದೀಗ ಜೀವನದಲ್ಲಿ ನಡೆದಿರುವುದನ್ನು ತಿಳಿದುಕೊಂಡು ವಾಸ್ತವಕ್ಕೆ ಮರಳುತ್ತಿರುವ ಅಪ್ಪು ಪತ್ನಿ ಅಶ್ವಿನಿ ಇದೀಗ ಅಪ್ಪು ಇಲ್ಲವಾದ 45 ದಿನಗಳ ಬಳಿಕ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದಾರೆ.

ಹೌದು ವಿಜಯ ರಾಘವೇಂದ್ರ ಅವರ ಮನೆಯಲ್ಲಿ ನಡೆದಿರುವ ಸಮಾರಂಭದಲ್ಲಿ ಇದೀಗ ಅಶ್ವಿನಿ ಅವರು ಭಾಗಿಯಾಗಿದ್ದು ವಿಜಯ ರಾಘವೇಂದ್ರ ಅವರ ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅಲ್ಲದೆ  ಜೊತೆ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಇನ್ನು ವಿಜಯ ರಾಘವೇಂದ್ರ ಅವರ ತಮ್ಮ ಶ್ರೀಮುರುಳಿ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದು ಇವರಿಬ್ಬರು ಕೂಡ ಜೊತೆಯಾಗಿ ಸೇರಿ ಎಲ್ಲಾ ಸಮಾರಂಭಗಳನ್ನು ಸಂಭ್ರಮಗಳನ್ನು ಆಚರಿಸುವುದು ವಿಶೇಷ. ಸಧ್ಯ ಇದೀಗ ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಸಂಭ್ರಮ ನಡೆದಿದ್ದು ಇದರಲ್ಲಿ ದೊಡ್ಮನೆ ಸೊಸೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹೌದು ಅಶ್ವಿನಿ ಪುನೀತ್ ರಾಜಕುಮಾರ್ ಸ್ಪಂದನ ವಿಜಯ್ ಎಲ್ಲರೂ ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಪೂಜೆ ಇದ್ದ ಕಾರಣ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಡದಿ ಅಶ್ವಿನಿ ಅವರು ಬಂದಿದ್ದು ವಿಜಯರಾಘವೇಂದ್ರ ದಂಪತಿಗಳಿಗೆ ಒಂದು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಾಲಾಗಿದೆ. ಈ ಲೇಖನಿಯಲ್ಲಿ ಅಶ್ವಿನಿಯವರ ಫೋಟೋಗಳನ್ನು ನೋಡಬಹುದು.

ಇಮ್ನು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಆಕ್ಟಿಂಗ್ ಬೇಡ ಎಂದೆನಿಸಿ ಬ್ಯುಸಿನೆಸ್ ಮಾಡಿಕೊಂಡಿದ್ದರು. ಬಾಲನಟನಾಗಿ ತಮ್ಮ 13ನೇ ವರ್ಷಕ್ಕೆ ಆಕ್ಟಿಂಗ್ ಅನ್ನು ನಿಲ್ಲಿಸಿದ್ದರು. ಅದಾದ ಬಳಿಕ ಪುನೀತ್ ಅವರು ನಟನೆ ಬಗ್ಗೆ ಒಲವು ತೋರಿರಲಿಲ್ಲ. ಆದರೆ, ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಅವರ ಸಿನಿಮಾಗಳ ಸೆಟ್ ಗಳ ಮೇಲುಸ್ತಿವಾರಿಯನ್ನು ಮಾಡುತ್ತಿದ್ದರು. ಆಗಾಗ ಸೆಟ್ ಗಳಿಗೆ ಹೋಗಿ ಬರುತ್ತಿದ್ದರು. ಈ ವೇಳೆ, ಪುನೀತ್ ಹಾಗೂ ಅಶ್ವಿನಿ ಅವರ ಕಾಮನ್ ಫ್ರೆಂಡ್ ಮೂಲಕ ಇವರಿಬ್ಬರ ಪರಿಚಯವಾಯ್ತು. ಇನ್ನು ಅಶ್ವಿನಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಸಮೀಪದ ಭಾಗಮನೆಯಲ್ಲಿದ್ದವರಾಗಿದ್ದು ಅಶ್ವಿನಿ ಅವರ ತಂದೆಯ ಹೆಸರು ರೇವಂತ್.

ರೇವಂತ್ ಅವರು ಭಾಗಮನೆಯಲ್ಲಿ ಚಿರಪರಿಚಿತರಾಗಿದ್ದು ಅಶ್ವಿನಿ ಹಾಗೂ ಪುನೀತ್ ಅವರಿಬ್ಬರ ಪರಿಚಯ ಆದಾಗಿನಿಂದ ಇಬ್ಬರೂ ಆಗಾಗ ಭೇಟಿಯಾಗುತ್ತಲೇ ಇರುತ್ತಿದ್ದರು. ಸುತ್ತಾಡಲು ಶುರು ಮಾಡಿದ್ದು ಬರಬರುತ್ತಾ ಇಬ್ಬರಲ್ಲೂ ಪ್ರೀತಿ ಮೂಡಿತು. ಇಬ್ಬರು ಸುತ್ತಾಡುತ್ತಿರುವುದು ಶಿವಣ್ಣನಿಗೆ ಗೊತ್ತಾಯ್ತು. ಪುನೀತ್ ಅವರು ಮನೆಯಲ್ಲಿದ್ದಾಗ ಸದಾ ಅಶ್ವಿನಿ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದರಂತೆ. ಇನ್ನು ಇದೆಲ್ಲವನ್ನೂ ಗಮನಿಸಿದ ಶಿವಣ್ಣ ಪುನೀತ್ ರನ್ನು ಗಮನಿಸುತ್ತಲೇ ಇದ್ದರಂತೆ. ಆಗಾಗ ರಾಘಣ್ಣ ಹಾಗೂ ಶಿವಣ್ಣ ಅವರ ಶೂಟಿಂಗ್ ಸೆಟ್ ಗೆ ಪುನೀತ್ ಜೊತೆ ಅಶ್ವಿನಿ ಅವರು ಬರುತ್ತಿದ್ದರಂತೆ. ಈ ಬಗ್ಗೆ ತಿಳಿದ ಶಿವಣ್ಣ ತಾಯಿ ಪಾರ್ವತಮ್ಮನ ಬಳಿ ಹೇಳಿದರಂತೆ .ಪಾರ್ವತಮ್ಮ ಅವರು ನನಗೆ ಇದೆಲ್ಲಾ ಗೊತ್ತಾಗೋದಿಲ್ಲ ಹೋಗಪ್ಪ ಅಪ್ಪಾಜಿಗೆ ಹೇಳು ಅಂತ ಹೇಳಿದರಂತೆ. ರಾಜ್ ಕುಮಾರ್ ಅವರಿಗೆ ವಿಚಾರ ತಿಳಿಯುತ್ತಿದ್ದಂತೆ, ನಕ್ಕು ಸುಮ್ಮನಾದರಂತೆ. ಆದರೆ ಮನೆಯಲ್ಲೆಲ್ಲರೂ ಏನೂ ಗೊತ್ತಿಲ್ಲ ಎಂಬಂತೆ ನಡೆದುಕೊಳ್ತಿದ್ರಂತೆ.

ಅಪ್ಪು ಅವರಿಗೆ ಅಪ್ಪ ಎಂದರೆ ಭಯವಿರಲಿಲ್ಲವಂತೆ. ಆದರೆ ಪ್ರೀತಿ ವಿಚಾರದ ಬಗ್ಗೆ ಅಮ್ಮನ ಬಳಿ ಹೇಳೋದೇಗೆ ಎಂಬ ಆತಂಕವಿತ್ತಂತೆ. ಒಂದು ಸಲ ಅಶ್ವಿನಿ ಅವರ ಫೋನ್ ಬಂದಾಗ ಪುನೀತ್ ಫೋನ್ ಅನ್ನು ಅಪ್ಪನಿಗೆ ಕೊಟ್ಟು ಹೇಳಿದರಂತೆ ಅವಳು ಅಶ್ವಿನಿ ಅಂತ ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಆಕೆ ನಿಮ್ಮ ಬಳಿ ಮಾತನಾಡಬೇಕಂತೆ ಎಂದು. ಆಗ ರಾಜ್ ಕುಮಾರ್ ಅವರು ಸ್ವಲ್ಪವೂ ಗೊಂದಲಕ್ಕೀಡಾಗದೇ ಅಶ್ವಿನಿ ಅವರ ಜೊತೆಗೆ ಮಾತನಾಡಿದರಂತೆ.
ಬಳಿಕ ಪತ್ನಿ ಪಾರ್ವತಮ್ಮ ಅವರಿಗೆ ತಿಳಿಸಿದರಂತೆ. ಆಗ ಪಾರ್ವತಮ್ಮ ಅವರು ಅಶ್ವಿನಿ ಅವರನ್ನು ಮನೆಗೆ ಬರಲು ತಿಳಿಸಿದರಂತೆ. ಮನೆಗೆ ಬಂದ ಅಶ್ವಿನಿ ಅವರು ಮನೆಗೆ ಬಂದಾಗ ಅವರ ಗಲ್ಲ ಹಿಡಿದು ಒಳ್ಳೆಯ ಸೊಸೆ ಎಂದರಂತೆ. ಬಳಿಕ ಎಲ್ಲರೂ ಒಪ್ಪಿ ಅಶ್ವಿನಿ ಹಾಗೂ ಪುನೀತ್ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...