2021 ರಲ್ಲಿ ಮರಣ ಹೊಂದಿದ ಸ್ಯಾಂಡಲ್ ವುಡ್ ಕಲಾವಿದರು.ಈ ವಿಡಿಯೋ ನೋಡಿ‌…

Home

2021 ರಲ್ಲಿ ಕನ್ನಡ ಚಲನಚಿತ್ರರಂಗ ಸಾಕಷ್ಟು ಮೇರೂ ನಟ-ನಟಿಯರನ್ನು ಕಳೆದುಕೊಂಡಿದ್ದು ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟ ಉಂಟಾಗಿದೆ. ಹಾಗಾಗಿ ಇಂದು ನಿಮಗೆ ಈ ಲೇಖನದಲ್ಲಿ 2021 ರಲ್ಲಿ ಅಕಾಲಿಕ ಮರಣ ಹೊಂದಿದಂತಹ ಪ್ರಸಿದ್ಧ ನಾಯಕ ನಟ ಮತ್ತು ನಟಿಯರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸಲಿದ್ದೇವೆ. ಮೊದಲನೆಯದಾಗಿ ಜಯಶ್ರೀ ರಾಮಯ್ಯ ಅವರು ಸ್ಯಾಂಡಲ್ ವುಡ್‌ ನಾ ನಟಿ ಅಷ್ಟೇ ಅಲ್ಲದೆ ಬಿಗ್ ಬಾಸ್ ಸೀಸನ್ ಮೂರರಲ್ಲಿ ಪ್ರತಿಸ್ಪರ್ಧಿಯಾಗಿದ್ದರು.

ಇವರು ಡಿಪ್ರೆಶನ್ ನಲ್ಲಿ ಬಳಲುತ್ತಿದ್ದರು ಆದಕಾರಣ ಜನವರಿ 25 2021 ರಲ್ಲಿ ಬೆಂಗಳೂರಿನ ಓಲ್ಡ್ ಹೋಂ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೋಟಿ ರಾಮು ಸ್ಯಾಂಡಲ್ ವುಡ್‌ ನಾ ನಿರ್ಮಾಪಕ ಹಾಗೂ ಕನಸಿನ ರಾಣಿ ಮಾಲಾಶ್ರೀ ಅವರ ಪತಿ ರಾಮು ಕನ್ನಡದ ಬಹುತೇಕ ಚಲನಚಿತ್ರಗಳಿಗೆ ನಿರ್ಮಾಪಕರಾಗಿದ್ದಾರೆ. ಲಾಕಪ್ ಡೆತ್, ಎಕೆ 47, ಚಾಮುಂಡಿ, ಕಲಾಸಿಪಾಳ್ಯ ಹೀಗೆ ಮುಂತಾದ ಯಶಸ್ವಿ ಚಿತ್ರಗಳನ್ನು ಚಿತ್ರಿಸಿದಂತಹ ಇವರು 26 ಏಪ್ರಿಲ್ 2021ರಲ್ಲಿ ಕೋವಿಡ್ ನಿಂದಾಗಿ ಮೃತಪಡುತ್ತಾರೆ.

ಮೂರನೆಯದಾಗಿ ಶಂಕನಾದ ಅರವಿಂದ್ ಅವರು ಇವರು ಸ್ಯಾಂಡಲ್ ವುಡ್‌ ನಾ ಹಿರಿಯ ಮತ್ತು ಹಾಸ್ಯ ನಟ 50 ವರ್ಷದ ಸಿನಿಮಾ ಜರ್ನಿಯಲ್ಲಿ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಬಾಲನಟನಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ ಬೆಟ್ಟದ ಹೂ ಎಂಬ ಚಿತ್ರದಲ್ಲಿ ಸೋಮಣ್ಣ ಎಂಬ ಹೆಸರಿನ ಪಾತ್ರದಲ್ಲಿ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದರು ಈ ನಟ ಮೇ 7ನೇ ತಾರೀಕು 2021 ರಂದು ಕೋವಿಡ್ ನಿಂದಾಗಿ ಮೃತ ಪಡುತ್ತಾರೆ. ಸಂಚಾರಿ ವಿಜಯ್ ಇವರು ನಾನು ಅವನಲ್ಲ ಅವಳು ಎಂಬ ಸಿನಿಮಾಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಂತಹ ನಟ. ಹಲವಾರು ವಿಶಿಷ್ಟ ಪಾತ್ರಗಳಲ್ಲಿ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರು ಈ ನಟ ಜೂನ್ 12, 2021 ರಂದು ಬೈಕ್ ಆಕ್ಸಿಡೆಂಟ್ ನಿಂದಾಗಿ ಮೃತಪಟ್ಟರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...