ನಮಸ್ಕಾರ ಸ್ನೇಹಿತರೇ,ಕನ್ನಡ ಚಿತ್ರಂಗದ ಕರ್ನಾಟಕದ ರತ್ನ ಎಂದೇ ಖ್ಯಾತಿಯಾಗಿರುವ ಡಾಕ್ಟರ್ ರಾಜಕುಮಾರ್ ಅವರ ಕೊನೆಯ ಕುಡಿಯಾದ ಪುನೀತ್ ರಾಜಕುಮಾರ್ ಅಕಾಲಿಕ ಹೃದಯಾಘಾತದಿಂದ ತಮ್ಮ ಕುಟುಂಬ ವರ್ಗದವರನ್ನು ಹಾಗೂ ಸಾಕಷ್ಟು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಮರಣ ಹೊಂದಿದ್ದಾರೆ. ಈಗ ಕನ್ನಡ ಚಿತ್ರರಂಗ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಈ ಸಾವು ಹೇಳಲಾಗದಂತಹ ನೋವು ತಂದುಕೊಟ್ಟಿದೆ. ಇನ್ನು ನಮಗೆ ಇಷ್ಟು ನೋವಾಗುತ್ತಿದೆ ಅಂದಮೇಲೆ ದೊಡ್ಮನೆ ಕುಟುಂಬಕ್ಕೆ ಇನ್ನಷ್ಟು ನೋವಾಗಿರಬೇಕು.

ಇನ್ನು ಪುನೀತ್ ರಾಜಕುಮಾರ್ ಅವರ ಪ್ರೀತಿಯ ಪತ್ನಿ ಅಶ್ವಿನಿ ಹಾಗೂ ಅವರ ಇಬ್ಬರು ಕಣ್ಣುಗಳು ಮಕ್ಕಳು ದೃತಿ ಮತ್ತು ವಂದಿತ ಅವರಿಗೆ ತನ್ನ ತಂದೆ ಸಾವಿನ ಅಗಲಿಕೆಯಿಂದ ಹೊರಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇನ್ನು ಪುನೀತ್ ರಾಜಕುಮಾರ್ ಅವರು ತಮ್ಮ ಹಿರಿಯ ಮಗಳಾದ ದೃತಿ ಅವರನ್ನು ವಿದೇಶದಲ್ಲಿ ಓದಿಸುತ್ತಿದ್ದರು.

ದೃತಿ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ತನ್ನ ಸ್ವಂತ ಪ್ರತಿಭೆ ಆಗು ಪರಿಶ್ರಮದಿಂದ ವಿದೇಶದಲ್ಲಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೀಟು ಪಡೆದಿದ್ದರು ಹಾಗಾಗಿ ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ವಿದೇಶದಲ್ಲಿ ಓದುತ್ತಿದ್ದ ತನ್ನ ಮಗಳನ್ನು ಅಪ್ಪು ಪ್ರತಿನಿತ್ಯ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು.

ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಿದ್ದರು.ಸಾಯುವ ಹಿಂದಿನ ದಿನ ಸಹ ಅಪ್ಪು ತಮ್ಮ ಮಗಳು ದೃತಿ ಜೊತೆಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡಿದರು. ಮಗಳೇ ನಿನ್ನನ್ನು ನೋಡಬೇಕೆನಿಸುತ್ತಿದೆ ರಜೆ ಯಾವಾಗ ಯಾವಾಗ ಬರುತ್ತೀಯ ಎಂದು ಕೇಳಿದ್ದರು. ಇದಕ್ಕೆ ದೃತಿ ಡಿಸೆಂಬರ್ನಲ್ಲಿ ಬರುವುದಾಗಿ ಅಪ್ಪನ ಜೊತೆ ಮಾತನಾಡಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ತಮ್ಮ ತಂದೆಯನ್ನು ನೋಡಲು ದೃತಿ ಇಂತಹ ಸನ್ನಿವೇಶದಲ್ಲಿ ಬರುತ್ತಾರೆ ಎಂದು ಯಾರು ಸಹ ಊಹಿಸಿರಲಿಲ್ಲ…..

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!