ಪುನೀತ್

ಗಾಜನೂರಿಗೆ ಪುನೀತ್ ಭೇಟಿ ಕೊಟ್ಟಿದ್ದರೆ..? ಇಂದು ಅಪ್ಪು ಬದುಕುತಿದ್ದರಾ?

Home

ನಮಸ್ಕಾರ ಸ್ನೇಹಿತರೆ ಗಾಜನೂರು ಎಂದ ತಕ್ಷಣ ವರ ನಟ ಡಾಕ್ಟರ್ ರಾಜಕುಮಾರ್ ಹುಟ್ಟಿದ ಊರು ಎಂದು ನೆನಪಾಗುತ್ತದೆ. ಡಾಕ್ಟರ್ ರಾಜ್ ಕುಮಾರ್ ಕೂಡ ಬದುಕಿದಷ್ಟು ದಿನ ಹುಟ್ಟೂರನ್ನು ಮರೆಯದೆ ಸಮಯ ಸಂದರ್ಭ ಬಂದಾಗಲೆಲ್ಲ
ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ಅಲ್ಲಿಗೆ ಸದಾ ಹೋಗಿ ಬರುತ್ತಿದ್ದರು ತಂದೆಯ ಊರನ್ನು ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮಕ್ಕಳು ಕೂಡ ಮರೆತಿಲ್ಲ. ಪ್ರತಿವರ್ಷ ಸಮಯ ಸಿಕ್ಕಾಗಲೆಲ್ಲಾ ಪುನೀತ್ ಶಿವಣ್ಣ ರಾಘಣ್ಣ ಗಾಜನೂರಿಗೆ ಹೋಗಿ ಭೇಟಿ ಕೊಡುತ್ತಿದ್ದರು, ಹಳ್ಳಿಯಲ್ಲಿ ಅವರ ಆತ್ಮೀಯರ ಜೊತೆ ಸಮಯ ಕಳೆಯುತ್ತಿದ್ದರು. ಗಾಜನೂರಿಗೆ ಬಂದಾಗ ಅಣ್ಣಾವ್ರು ಕುಳಿತು ಕೊಳ್ಳುತ್ತಿದ್ದ ಆಲದ ಮರ ಇನ್ನೂ ಇದೆ. ಅಲ್ಲಿಗೆ ಹೋಗಿ ತಾವು ಕೂಡ ಭೇಟಿ ಕೊಡುತ್ತಿದ್ದರು. ಇನ್ನು ಪುನೀತ್ ಆಗಲಿ ಶಿವಣ್ಣ ಆಗಲಿ ರಾಘವೇಂದ್ರ ರಾಜಕುಮಾರ್ ಅವರು ಅವರ ಬಾಲ್ಯ ಗಳನ್ನು ಕೆಲವು ಕೆಲವು ಕಾಲ ಅಲ್ಲಿ ಕಳೆದಿದ್ದಾರೆ ಎಂದು ನಂಬಲಾಗಿದೆ.

Puneeth Raj Kumar Dream : ಪುನೀತ್ ಕನಸು, ಗಾಜನೂರಿನಲ್ಲಿ ನಿರ್ಮಾಣವಾಗಲಿದೆ ಡಾ.ರಾಜ್  ಮ್ಯೂಸಿಯಂ - ಸಿನಿಮಾ

 

ಪುನೀತ್ ನನ್ನು ನೋಡಲು ಗುಂಪು, ಗುಂಪಾಗಿ ಅಭಿಮಾನಿಗಳು ಬರುತ್ತಿದ್ದರು. ಅಕ್ಟೋಬರ್ 29 ನೇ ತಾರೀಕು ಬೆಳಿಗ್ಗೆ ಪುನೀತ್ ರಾಜ್ ಕುಮಾರ್ ಗಾಜನೂರಿಗೆ ಹೋಗುವ ಪ್ರೋಗ್ರಾಮ್ ರೆಡಿಯಾಗಿತ್ತು. ಆದರೆ ದುರಾದೃಷ್ಟ ಎಂದರೆ ಆವತ್ತು ಬೆಂಗಳೂರಿನಲ್ಲಿ ಇನ್ನೊಂದು ಕಾರ್ಯಕ್ರಮಕ್ಕೆ ಹೋಗುವ ಒಂದು ಆಹ್ವಾನ ಬರುತ್ತದೆ. ಆವತ್ತು ಅವರು ಆ ಕಾರ್ಯಕ್ರಮಕ್ಕೆ ಒಂದು ಗಂಟೆಗೆ ಹೋಗ ಬೇಕಾಗಿತ್ತು. ಇದೇ ಕಾರಣ ಗಾಜನೂರಿಗೆ ಬೆಳಿಗ್ಗೆ ಹೋಗುವ ಕಾರ್ಯಕ್ರಮವನ್ನ ರದ್ದುಮಾಡಿ ಆ ಒಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಅವರು ಗಾಜನೂರಿಗೆ ಅಂದು ಬೆಳಿಗ್ಗೆನೇ ಹೋಗಿಬಿಟ್ಟಿದ್ದರೆ. ಇವತ್ತು ಅಪ್ಪು ನಮ್ಮ ನಿಮ್ಮ ಜೊತೆ ಇರುತ್ತಿದ್ದರು ಎನ್ನುವ ಒಂದು ನಂಬಿಕೆ ಇದೆ ಅಷ್ಟೇ ಆದರೆ ವಿಧಿಯಾಟವೆ ಬೇರೆ ಸ್ನೇಹಿತರೆ ಸ್ಟಾರ್ ಕುಟುಂಬದಲ್ಲಿ ಹುಟ್ಟಿದರು ಅಹಂ ಪ್ರದರ್ಶಿಸದ ನಟ ಪುನೀತ್ ರಾಜ್ ಕುಮಾರ್ ತಾವು ಬೆಳೆದ

ಗಾಜನೂರಿಗೆ ಪುನೀತ್ ಭೇಟಿ ಕೊಟ್ಟಿದ್ದರೆ..? ಇಂದು ಅಪ್ಪು ಬದುಕುತಿದ್ದರಾ? – Public  Master

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನಂಟನ್ನು ಕೂಡ ಬೆಳೆಸಿದ್ದರೆಂದು ಅಲ್ಲಿನ ಅವರ ಸ್ನೇಹಿತರು ಹೇಳುತ್ತಾರೆ. ದೊಡ್ಡ ಗಾಜನೂರಿಗೆ ಕುಟುಂಬ ಸಮೇತ ಅಲ್ಲವೇ ಒಬ್ಬರೆ ಬಂದು ಹೋಗುತ್ತಿದ್ದ ಅಪ್ಪು ಇಂದು ಇಲ್ಲ ನಾಳೆ ಗಾಜನೂರಿಗೆ ಬರುವುದಾಗಿ ಸಹೋದರ ಸಂಬಂಧಿಗೆ ತಿಳಿಸಿದ್ದರು ಎಂದು ಕೂಡ ನಂಬಲಾಗಿದೆ. ಗಾಜನೂರಿಗೆ ಬಂದಾಗಲೆಲ್ಲ ತಮ್ಮ ಒಡತನದ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಸುತ್ತಾಡುತ್ತಾ ಅಣ್ಣಾವ್ರ ನೆಚ್ಚಿನ ಆಲದ ಮರದ ಕೆಳಗಡೆ ಕುಳಿತು ಜ್ಞಾನ ಕೂಡ ಮಾಡುತ್ತಿದ್ದರು. ರಾಜ್ ಕುಮಾರ್ ಹುಟ್ಟಿದ ಹಳೆಮನೆಗೆ ಭೇಟಿಕೊಟ್ಟು ಗ್ರಾಮಸ್ಥರ ಜೊತೆಯಲ್ಲಿ ಆತ್ಮೀಯವಾಗಿ ಮಾತಾಡುತ್ತಿದ್ದರು.

ಕಳೆದ ಕೆಲವು ದಿನಗಳ ಹಿಂದಷ್ಟೇ ಅಪ್ಪು ತನ್ನ ಇಡೀ ಕುಟುಂಬ ದೊಂದಿಗೆ ಗಾಜನೂರಿಗೆ ಭೇಟಿಕೊಟ್ಟು ಬಾಡೂಟ ಸವಿದು ಸ್ಥಳೀಯರೊಂದಿಗೆ ಆತ್ಮೀಯ ವಾಗಿ ಮಾತನಾಡಿ ಸೆಲ್ಫಿ ಅನ್ನು ಕೂಡ ಕ್ಲಿಕ್ ಮಾಡಿದ್ದರು. ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದ್ದ ಅಂತಹ ಸಾಕ್ಷ್ಯ ಚಿತ್ರದ ಚಿತ್ರೀಕರಣದಲ್ಲಿ ಕಳೆದ ನೂರು ದಿನಗಳ ಹಿಂದೆ ಪಾಲ್ಗೊಂಡಿದ್ದ ಪುನೀತ್ ರಾಜ್ ಕುಮಾರ್ ನಂತರ ಗಾಜನೂರಿನ ಅಣ್ಣಾವ್ರ ಮನೆಗೆ ಭೇಟಿ ನೀಡಿ ಸ್ವಲ್ಪಕಾಲ ಸಮಯ ಕೂಡ ಕಳೆದಿದ್ದರು.

Puneeth Rajkumar: ಡಾ. ರಾಜ್‌ ಆಡಿ ಬೆಳೆದ ಗಾಜನೂರಿನ ಮನೆಗೆ ಪುನೀತ್‌ ರಾಜ್‌ಕುಮಾರ್‌  ಭೇಟಿ! ಕಾರಣ ಏನು? - yuvarathnaa actor puneeth rajkumar visits dr rajkumar's  ancestral home in gajanur | Vijaya Karnataka

ಈ ವೇಳೆ ಮುತ್ತಣ್ಣನ ಮಗ ಎಂದು ಹಾರೈಸಿದ್ದ ಹಿರಿಯರೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡು ಅಪ್ಪು ಸಂಭ್ರಮಿಸಿದ ಫೋಟೋ ಈಗ ವೈರಲ್ ಆಗಿದೆ. ತವರೂರಿನ ಮೋಹ ಬಿಡದ ಅಪ್ಪು ಶುಕ್ರವಾರ ಗಾಜನೂರಿಗೆ ಬೇಟಿ ನೀಡಬೇಕಿತ್ತು ಆ ವೇಳೆಗೆ ಹಾಸಿಗೆ ಹಿಡಿದಿರುವ ಡಾಕ್ಟರ್ ರಾಜ್ ಕುಮಾರ್ ಅವರ ಸೋದರಿ ನಾಗಮ್ಮ ಅವರನ್ನು ಭೇಟಿ ಮಾಡುವುದಾಗಿ ಆಪ್ತರೊಂದಿಗೆ ಹೇಳಿಕೊಂಡಿದ್ದರಂತೆ. ಅಲ್ಲದೆ ಎರಡು ದಿನ ಗಾಜನೂರಿನಲ್ಲಿ ಇದ್ದು ಸೋಮವಾರ ಮೈಸೂರಿಗೆ ಭೇಟಿ ನೀಡಿ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತಿ ತಾಯಿ ಚಾಮುಂಡೇಶ್ವರಿಯಾ ದರ್ಶನ ಪಡೆಯುವುದಾಗಿ ಹೇಳಿ ಕೊಂಡಿದ್ದರಂತೆ.ಅಷ್ಟರಲ್ಲಿ ವಿಧಿಯ ಕರೆಗೆ ಹೋಗಿರುವ ಅಪ್ಪು ಅವರ ಅ’ಘಾ’ತಕಾರಿ ವಿಷಯ ನಾಗಮ್ಮನಿಗೆ ಇನ್ನೂ ಸಹಿತ ಗೊತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಪುನೀತ್ ರಾಜ್ ಕುಮಾರ್ ಅವರು ಭೇಟಿ ನೀಡುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಗಾಜನೂರಿನಲ್ಲಿರುವ ಫಾರ್ಮ್ ಹೌಸ್ ಮುಖ್ಯದ್ವಾರದ ಬಳಿ ಗೇಟನ್ನು ಹಾಕಿಸಲಾಗಿತ್ತು.

Puneeth Rajkumar: dr shivarajkumar puneeth rajkumar family visit to dr  rajkumar birth place gajanur | Vijaya Karnataka Photogallery

ಈ ನಡುವೆ ಪುನೀತ್ ಅವರು ಸಾ’ವ’ನ್ನಪ್ಪಿದ್ದಾರೆ ಎಂಬ ಸುದ್ದಿ ಸುದ್ದಿವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದಂತೆಯೆ ಅಲ್ಲಿನ ಗ್ರಾಮಸ್ಥರು ಆ’ಘಾ’ತಕ್ಕೆ ಒಳಗಾ ಗಿದ್ದರೂ. ಅಲ್ಲದೆ ಕೊಳ್ಳೇಗಾಲ ಚಾಮರಾಜನಗರ ಜಿಲ್ಲೆ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಈ ವಿಷಯ ಕೇಳಿ ಈಗಲೂ ಕೂಡ ಅಲ್ಲಿ ದಿಗ್ಭ್ರಾಂತರಾಗಿದ್ದಾರೆ. ತಮ್ಮ ನೆಚ್ಚಿನ ನಟನೆಗೆ ಗೌರವ ವನ್ನು ಕೂಡ ಸಲ್ಲಿಸುತ್ತಿದ್ದಾರೆ. ಗಾಜನೂರಿನಲ್ಲಿ ರೈತರಾಗಿರುವ ನಾಗಪ್ಪ ಅವರು ಮಾತನಾಡಿ ಪುನೀತ್ ರಾಜ್ ಕುಮಾರ್ ರಲ್ಲಿ ಅವರ ತಂದೆ ರಾಜ್ ಕುಮಾರ್ ಅವರ ಸಾಕಷ್ಟು ಗುಣಗಳಿದ್ದವು. ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದರೆ ರಾಜಕುಮಾರ್ ಅವರನ್ನೆ ನೋಡಿದಂತೆ ಆಗುತ್ತಿತ್ತು ಎಂದು ನಾಗಪ್ಪ ತಮ್ಮ ದುಃಖವನ್ನು ಹಂಚಿ ಕೊಂಡಿದ್ದಾರೆ. ವರ ನಟ ಡಾಕ್ಟರ್ ರಾಜಕುಮಾರ್ ಅವರ ತವರೂರಾದ
ತಮಿಳುನಾಡಿನ ತಾಳವಾಡಿ ಸಮೀಪದ ದೊಡ್ಡ ಗಾಜನೂರಿನಲ್ಲಿ ಪುನೀತ್ ರಾಜ್ ಕುಮಾರ್ ನಿ’ಧ’ನಕ್ಕೆ ಜನರು ಕಂಬನಿಯನ್ನು ಈಗಲೂ ಕೂಡ ಮಿಡಿಯುತ್ತಿದ್ದಾರೆ. ಈಗಲೂ ಕೂಡ ಈ ಊರಿನಲ್ಲಿ ಮೌನವೇ ಆಚರಿಸಿದೆ. ಆದಷ್ಟು ಬೇಗ ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿ ಬರಲಿ ಎಂದು ನಾವು ಕೂಡ ಆಶಿಸೋಣ.
ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕುಳಿತು ಮಜ್ಜಿಗೆ ಊಟ ಮಾಡಿದ ಪುನೀತ್​ ರಾಜ್​ಕುಮಾರ್​;  ಫೋಟೋ ವೈರಲ್ | Puneeth Rajkumar Visited Koppala And Had launch with Shepherds  | TV9 Kannada
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...