ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿಯೊಂದನ್ನು ನೀಡಿದ್ದು, ಎಸ್ ಬಿಐ ತನ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಜೊತೆಗೆ ಉಚಿತ ಆಕಸ್ಮಿಕ ವಿಮೆ ಸೌಲಭ್ಯವನ್ನು ನೀಡುತ್ತಿದೆ. ಹೌದು, ಎಸ್ ಬಿಐ ರೂಪೇ ಪ್ಲಾಟಿನಂ ಕಾರ್ಡ್ ಗೆ ಎಸ್ ಬಿಐ ಗ್ರಾಹಕರು ಅರ್ಜಿ ಸಲ್ಲಿಸಬಹುದು ಮತ್ತು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಆಗಿರುವ ಎಸ್ ಬಿಐ ರೂಪೇ ಪ್ಲಾಟಿನಂ ಕಾರ್ಡ್ ನೊಂದಿಗೆ 2 ಲಕ್ಷ ರೂ.ವರೆಗಿನ ಆಕ್ಸಿಡೆಂಟಲ್ ಇನ್ಶೂರೆನ್ಸ್ ಕವರ್ ಸೇರಿದಂತೆ ವಿಶೇಷ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

Apply

ಗ್ರಾಹಕರು ಎಸ್ ಬಿಐ ರೂಪೇ ಪ್ಲಾಟಿನಂ ಕಾರ್ಡ್ ಸಹಾಯದಿಂದ 2 ಲಕ್ಷ ರೂ.ವರೆಗಿನ ಆಕಸ್ಮಿಕ ವಿಮೆ ಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಪಘಾತಸಂಭವಿಸಿದ 45 ದಿನಗಳ ಮುಂಚಿತವಾಗಿ ಯಾವುದೇ PoS/e-ಕಾಮರ್ಸ್ ನಲ್ಲಿ ಗ್ರಾಹಕನಿಂದ ಕನಿಷ್ಠ ಒಂದು ಹಣಕಾಸಿನ ವ್ಯವಹಾರವು ಆಕಸ್ಮಿಕ ವಿಮೆಯನ್ನು ಪಡೆಯಲು ಅಗತ್ಯವಾಗಿರುತ್ತದೆ.SBI ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ನ ಪ್ರಯೋಜನಗಳೇನು? ಗೊತ್ತಾ ನೋಡಿ.

ಈ ಕಾರ್ಡ್ ಮೂಲಕ, ಒಬ್ಬ ಗ್ರಾಹಕನು ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಶಾಪಿಂಗ್ ಮಾಡಬಹುದು.ಈ ಕಾರ್ಡ್ ಸಿನಿಮಾ ಟಿಕೆಟ್ ಗಳು, ಬಿಲ್ ಪಾವತಿಗಳು, ಪ್ರಯಾಣ, ಆನ್ ಲೈನ್ ಖರೀದಿಗಳನ್ನು ಬುಕ್ ಮಾಡಲು ಸಹಾಯ ಮಾಡುತ್ತದೆ. ಗ್ರಾಹಕರು ಈ ಎಸ್ ಬಿಐ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ನಗದು ವಿತ್ ಡ್ರಾ ಮಾಡಬಹುದು.

Apply

ಎಸ್ ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಕಾಂಪ್ಲಿಮೆಂಟರಿ ಏರ್ ಪೋರ್ಟ್ ಲಾಂಜ್ ಗಳಿಗೆ ಪ್ರವೇಶವನ್ನು ನೀಡುತ್ತದೆ. ಎಸ್ ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಪ್ರತಿ 200 ರೂ.ಗೆ 2 ಎಸ್ ಬಿಐ ರಿವಾರ್ಡ್ಜ್ ಪಾಯಿಂಟ್ ಗಳನ್ನು ನೀಡುತ್ತದೆ. ಗ್ರಾಹಕರು ಎಸ್ ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ನಿಂದ ಹುಟ್ಟುಹಬ್ಬದ ಬೋನಸ್ ಅನ್ನು ಸಹ ಪಡೆಯಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •