ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನ ಈಗಾಗಲೇ ಜಾರಿಗೆ ತಂದಿದೆ ಮತ್ತು ಇನ್ನು ಕೂಡ ಹಲವು ಯೋಜನೆಗಳನ್ನ ಜಾರಿಗೆ ತರುತ್ತಲೇ ಇದೆ. ಇನ್ನು ಸರ್ಕಾರ ಬಡಜನರಿಗೆ ಅದರಲ್ಲೂ ಹೆಚ್ಚಾಗಿ ಬಡ ಕುಟುಂಬದ ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ ಕೆಲವು ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಲೇ ಇದೆ. ಇನ್ನು ಈಗ ಬಿಹಾರ್ ರಾಜ್ಯ ಸರ್ಕಾರ ರಾಜ್ಯದ ಬಡ ಕುಟುಂಬದ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ರಾಜ್ಯದ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸಿಗಲಿದೆ 51 ಸಾವಿರ ರೂಪಾಯಿ.

ಹಾಗಾದರೆ ಬಿಹಾರ್ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆ ಯೋಜನೆ ಯಾವುದು ಮತ್ತು ಈ ಯೋಜನೆ ನಮ್ಮ ರಾಜ್ಯದಲ್ಲಿ ಯಾವಾಗ ಜಾರಿಗೆ ಬರಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬಿಹಾರ್ ರಾಜ್ಯದಲ್ಲಿ ಮಹಿಳಾ ಸಬಲೀಕರಣ ಮತ್ತು ಬಡ ಕುಟುಂಬದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನ ಉತ್ತೇಜಿಸುವ ಸಲುವಾಗಿ ಬಿಹಾರ್ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಕನ್ಯಾ ಸುರಕ್ಷಾ ಯೋಜನೆಯನ್ನ ಜಾರಿಗೆ ತಂದಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ರಾಜ್ಯದ ಬಡಕುಟುಂಬದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇಕಾಗುವ ಅಧಿಕ ಮೊತ್ತದ ಹಣವನ್ನ ಕೊಡಲಾಗುತ್ತದೆ.

ನ್ನು ಹೆಣ್ಣು ಮಕ್ಕಳ ಉತ್ತೇಜನಕ್ಕಾಗಿ ಮತ್ತು ಅವರ ಮಹಿಳೆಯರ ಸಬಲೀಕರಣಕ್ಕಾಗಿ ಬಿಹಾರ್ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳ ಪೋಷಕರಿಗೆ 51 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನ ನೀಡುತ್ತಿದೆ. ಇನ್ನು ಪೋಷಕರು ಕಂತಿನ ರೂಪದಲ್ಲಿ ಈ ಯೋಜನೆಯ ಲಾಭವನ್ನ ಪಡೆಯಬಹುದಾಗಿದೆ ಮತ್ತು ಹೆಣ್ಣು ಮಕ್ಕಳ ಜನನವನ್ನ ಉತ್ತೇಜನ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ. ಇನ್ನು ಒಂದು ಹೆಣ್ಣಿನ ಹುಟ್ಟಿನಿಂದ ಪದವಿಯ ತನಕ ವಿದ್ಯಾಭ್ಯಾಸಕ್ಕೆ ಬೇಕಾಗುವ ಹಣವನ್ನ ರಾಜ್ಯ ಸರ್ಕಾರವು ಪೋಷಕರಿಗೆ ಕಂತುಗಳ ರೂಪದಲ್ಲಿ ನೀಡಲಿದೆ. ಇನ್ನು ಒಂದು ಹೆಣ್ಣು ಮಗು ಜನಿಸಿದ ನಂತರ ಪೋಷಕರಿಗೆ ಮೊದಲ ಕಂತಿನ ಹಣವಾಗಿ ಎರಡು ಸಾವಿರ ರೂಪಾಯಿ ಹಣವನ್ನ ಖಾತೆಗೆ ಹಾಕಲಾಗುತ್ತದೆ ಮತ್ತು ಇದಾದ ಬಳಿಕ ಮಗುವಿಗೆ ಒಂದು ವರ್ಷ ಆದನಂತರ ಇನ್ನು ಒಂದು ಸಾವಿರ ರೂಪಾಯಿಯನ್ನ ಖಾತೆಗೆ ಜಮಾ ಮಾಡಲಾಗುತ್ತದೆ.

Apply-for-women-scheme

ಇನ್ನು ಹೀಗೆ ಆ ಹೆಣ್ಣು ಮಗು 12 ನೇ ತರಗತಿ ಓದುವಾಗ 10 ಸಾವಿರ ನೀಡುವುದರ ಜೊತೆಗೆ ಪದವಿ ಹಂತಕ್ಕೆ ಹೋಗುವ ತನಕ ಒಟ್ಟು 51 ಸಾವಿರ ರೂಪಾಯಿಯನ್ನ ರಾಜ್ಯ ಸರ್ಕಾರ ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಗುವಿಗೆ ನೀಡಲಿದೆ. ಇನ್ನು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಈ ಯೋಜನೆಗೆ ಸಂಬಂಧಿಸಿದ ನಮೂನೆಯನ್ನ ಪಡೆದುಕೊಂಡು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಇನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮಗುವಿನ ಜನನ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಹೀಗೆ ಅಗತ್ಯ ದಾಖಲೆಗಳನ್ನ ನೀವು ಅರ್ಜಿ ಜೊತೆಗೆ ಸಲ್ಲಿಸಬೇಕು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನೋಂದಾವಣೆ ಆಗುತ್ತದೆ ಹಾಗು ನೀಡಿದ ಮಾಹಿತಿ ಸರಿಯಾಗಿದ್ದರೆ ಯೋಜನೆಯ ಲಾಭವನ್ನ ಸಂಪೂರ್ಣವಾಗಿ ಪಡೆಯಬಹುದಾಗಿದೆ.

ಇನ್ನು ಈ ಯೋಜನೆಯೂ ಕೆಲವು ಷರತ್ತುಗಳನ್ನ ಒಳಗೊಂಡಿದ್ದು ಅದನ್ನ ಪ್ರತಿಯೊಬ್ಬರೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ, ಕೇವಲ ಬಡ ಕುಟುಂಬದ ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯ ಲಾಭವನ್ನ ಪಡೆಯಬಹುದಾಗಿದೆ, ಇನ್ನು ಅರ್ಜಿ ಸಲ್ಲಿಸಿದ ಕುಟುಂಬದಲ್ಲಿ ಯಾರು ಕೂಡ ಸರ್ಕಾರೀ ಕೆಲಸದಲ್ಲಿ ಇರಬಾರದು ಇನ್ನು ಅರ್ಜಿ ಸಲ್ಲಿಸುವ ಪೋಷಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಹೊಂದಿರಲೇಬೇಕು. ಇನ್ನು ಸದ್ಯ ಈ ಯೋಜನೆ ಬಿಹಾರ್ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ, ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •