ಅದೆಷ್ಟೊ ಮಂದಿ ನಿವೃತ್ತಿಯ ನಂತ್ರ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ಜನ ಸಾಮಾನ್ಯರು ಈ ಸಮಸ್ಯೆಗಳನ್ನ ಎದುಸಬಾರದು ಅಂತಾನೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅತ್ಯದ್ಭುತ ಯೋಜನೆಯೊಂದನ್ನ ಜಾರಿಗೆ ತಂದಿದೆ. ಈ ಯೋಜನೆಯಡಿ ದಿನಕ್ಕೆ ಕೇವಲ 2 ರೂಪಾಯಿ ಉಳಿಸಿದ್ರು ನಿವೃತ್ತಿಯ ನಂತ್ರ ಆರಾಮದಾಯಕ ಜೀವನ ಸಾಗಿಸ್ಬೋದು. ಹಾಗಾದ್ರೆ, ಈ ಯೋಜನೆ ಯಾವ್ದು. ಅರ್ಜಿ ಸಲ್ಲಿಸುವುದ್ಹೇಗೆ ಎನ್ನುವ ಎಲ್ಲ ವಿವರಗಳು ಈ ಲೇಖನದಲ್ಲಿವೆ.

ಅಂದ್ಹಾಗೆ, ಈ ಯೋಜನೆಯ ಹೆಸ್ರು ʼಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆʼ ಅಂತಾ. ಇದನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಫಲಾನುಭವಿಗೆ ತಿಂಗಳಿಗೆ ಕನಿಷ್ಠ 3000 ರೂಪಾಯಿಗಳ ಪಿಂಚಣಿ ಸಿಗುತ್ತದೆ. ವಿಶೇಷ ಏನೆಂದ್ರೆ ಪ್ರತಿ ತಿಂಗಳು 55 ರೂಪಾಯಿಗಳನ್ನ ಪಾವತಿಸುವ ಮೂಲಕ ಈ ಯೋಜನೆ ಪ್ರಾರಂಭಿಸಬಹುದು. ಇನ್ನು ನೀವು ಎಷ್ಟು ಹಣವನ್ನು ಠೇವಣಿ ಇಡುತ್ತೀರಿ, ಸರ್ಕಾರವು ಸಹ ಅಷ್ಟೇ ಹಣವನ್ನು ಸಂಗ್ರಹಿಸುತ್ತೆ.

PM Narendra Modi launches Pradhan Mantri Shram Yogi Maan-dhan (PM-SYM) Yojana | Odisha Breaking News | Odisha News | Latest Odisha News| Odisha Diary

ವಯಸ್ಸಿಗೆ ಅನುಗುಣವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತು ಹೂಡಿಕೆಗೆ ಅವಕಾಶವಿದೆ. ಹಾಗಾದ್ರೆ, ಈ ಯೋಜನೆಗೆ ಯಾರೆಲ್ಲಾ ಅರ್ಹರು.18 ವರ್ಷ ವಯಸ್ಸಿನ ಯಾರಾದ್ರು ಈ ಯೋಜನೆ ಅರ್ಜಿ ಸಲ್ಲಿಸಬಹುದು.ಇನ್ನು 18 ವರ್ಷ ವಯಸ್ಸಾಗಿದ್ದರೆ, ನೀವು ಪ್ರತಿ ತಿಂಗಳು 55 ರೂಪಾಯಿಗಳನ್ನು 29 ವರ್ಷದವರು ತಿಂಗಳಿಗೆ 100 ರೂಪಾಯಿ ಜಮಾ ಮಾಡಬೇಕು. 40 ನೇ ವಯಸ್ಸಿನವರು 200 ರೂಪಾಯಿಗಳನ್ನ ಜಮಾ ಮಾಡಬೇಕು.

ಯೋಜನೆ ಫಲ ಲಭಿಸುವುದು ಯಾವಾಗ ಎಂದರೆ ಈ ಶ್ರಮ ಯೋಗಿ ಮಾನ್-ಧನ್ ಯೋಜನೆಯಡಿ, ಫಲಾನುಭವಿಯು ಪ್ರತಿ ತಿಂಗಳು 60 ವರ್ಷ ವಯಸ್ಸಿನವರೆಗೆ ಠೇವಣಿ ಇಡಬೇಕಾಗುತ್ತದೆ.
60 ವರ್ಷ ತುಂಬಿದ ನಂತರ, ಫಲಾನುಭವಿಗೆ ತಿಂಗಳಿಗೆ 3000 ರೂಪಾಯಿ ಪಿಂಚಣಿ ಸಿಗುತ್ತದೆ.
ಯಾರ್ಯಾರು ಈ ಯೋಜನೆಯ ಲಾಭ ಪಡೆಯಬಹುದು. ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಸರ್ಕಾರ ಈ ಯೋಜನೆ ಲಾಭ ನೀಡ್ತಿದೆ. ಪ್ರಮುಖವಾಗಿ ರಿಕ್ಷಾ ಚಾಲಕರು, ಕಾರ್ಮಿಕರು, ವ್ಯಾಪಾರಿಗಳು, ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಇದರ ಲಾಭವನ್ನು ಪಡೆಯಬಹುದು.Mandatory Afternoon Rest for Kerala Labourers: a Positive Step towards a Dignified Work Culture | The New Leam

ಈ ಯೋಜನೆಯಡಿ 60 ವರ್ಷಗಳ ನಂತರ ಫಲಾನುಭವಿಯು ಸತ್ತರೆ, ಪ್ರತಿ ತಿಂಗಳು ಪಿಂಚಣಿ ಮೊತ್ತದ ಅರ್ಧದಷ್ಟು ಹಣವನ್ನು ಫಲಾನುಭವಿಯ ನಾಮಿನಿಗೆ ನೀಡಲಾಗುತ್ತದೆ. 18ರಿಂದ 40 ವರ್ಷ ವಯಸ್ಸಿನವರು ಈ ಯೋಜನೆ ಲಾಭ ಪಡೆಯಬಹುದು. ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಸಿಕ ಗಳಿಕೆ 15,000 ರೂಪಾಯಿ ಮೀರಬಾರದು. ನೇರ ತೆರಿಗೆ ಪಾವತಿಸದವರು ಮಾತ್ರ ಈ ಯೋಜನೆಯನ್ನು ಪಡೆಯಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •