ನಮ್ಮ ಭಾರತದಲ್ಲಿ ಮಗಳನ್ನು ಮನೆಯ ಲಕ್ಷ್ಮಿ ಎಂದೆ ಕರೆಯಲಾಗುತ್ತದೆ. ಪೋಷಕರು ಸಾಮಾನ್ಯವಾಗಿ ಅವರ ಮಗಳ ಜನನದ ನಂತರ ನಮ್ಮ ಮನೆಗೆ ಲಕ್ಷ್ಮಿ ಬಂದಳು  ಎಂದು ಹೇಳುತ್ತಾರೆ. ಆದ್ರೆ ಸಾಮಾನ್ಯವಾಗಿ ಹೆಣ್ಣು ಮಗಳು ಹುಟ್ಟಿದ ತಕ್ಷಣ ಪೋಷಕರು ಸ್ವಲ್ಪ ಆತಂಕಕ್ಕೆ  ಒಳಗಾಗುವುದು ಮಾಮೂಲಿ, ಕಾರಣ ಆಕೆ ಶಿಕ್ಷಣದಿಂದ ಹಿಡಿದು ವಿವಾಹ ಆಗುವವರೆಗೂ ಹೆಚ್ಚಿನದಾಗಿ ಹಣದ ಉಳಿತಾಯವನ್ನು ಪ್ರಾರಂಭಿಸುತ್ತಾರೆ. ಇದು ದೊಡ್ಡ ಮೊತ್ತವೆಂದು ಸಹ ಸಾಬೀತು ಮಾಡುತ್ತದೆ. ನಾವು ಇಂದಿನ ಈ ಲೇಖನದಲ್ಲಿ ಅಂತಹ ಒಂದು ಯೋಜನೆ ಬಗ್ಗೆಯೇ ಚರ್ಚಿಸಲು ಬಂದಿದ್ದೇವೆ. ಈ ಮೂಲಕ ನೀವು ಹಣವನ್ನ ಉಳಿಸಿಕೊಂಡು ನಿಮ್ಮ ಆತಂಕವನ್ನು ಕಡಿಮೆ ಮಾಡಬಹುದು.  

apply

ಹೌದು ಅದೇ ಭಾರತೀಯ ವಿಮ ಕಂಪೆನಿಯಾದ ಎಲ್ ಐಸಿ ತಂದಿರುವ ಹೊಸ ಯೋಜನೆ. ಆ ಯೋಜನೆಯೇ ಕನ್ಯಾದಾನ..ದೇಶದಲ್ಲಿಯೇ ಅತಿದೊಡ್ಡ ವಿಮಾ ಕಂಪನಿಯಾದ ಈ  ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಯ ಬ್ಯಾಂಕಿಂಗ್ ಪಾಲಿಸಿ ಯೋಜನೆಯು ತುಂಬಾನೇ ಹೆಚ್ಚಿನ ಮಟ್ಟದಲ್ಲಿ ಜನಪ್ರಿಯವಾಗಿದೆ. ಈ ಯೋಜನೆಯ ಅಡಿಯಲ್ಲಿ, ಹೆಣ್ಣುಮಕ್ಕಳ ಪೋಷಕರು, ಅವರ ಮಗಳ ಶಿಕ್ಷಣ ಹಾಗೂ ಮದುವೆಗಾಗಿ ಹಣವನ್ನ ಉಳಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಈ ಎಲ್‌ಐಸಿ ಅನುದಾನ ನೀತಿಯಲ್ಲಿ ದಿನಕ್ಕೆ 121 ರೂಪಾಯಿಗಳನ್ನ ಉಳಿಸಬೇಕಾಗುತ್ತದೆ..  

ನೀವು ಪ್ರತಿದಿನ 121 ರೂ ಅಥವಾ ತಿಂಗಳಿಗೆ ಸುಮಾರು 3600 ರೂ. ವಿಮೆ ಮಾಡಿದವರು ಸತ್ತರೆ, ಕುಟುಂಬವು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪ್ರತಿದಿನವೂ 121 ರೂಪಾಯಿಗಳನ್ನು ಠೇವಣಿ ಇರಿಸುವ ಮುಕಾಂತರ 25 ವರ್ಷಗಳ ನಂತರ ಇದೆ ಪಾಲಿಸಿಯಿಂದ 27 ಲಕ್ಷ ರೂಪಾಯಿಗಳನ್ನು ನಿಮ್ಮದಾಗಿಸಿಕೊಳ್ಳುತ್ತೀರಿ ಅಥವಾ ಪಡೆಯುತ್ತೀರಿ. ಇದರ ವಿಶೇಷತೆ ಏನೆಂದರೇ ಈ ಯೋಜನೆ, 25 ವರ್ಷಗಳವರೆಗೆ ನಿಗದಿಯಾಗಿದೆ. ಆದ್ರೆ ಪ್ರೀಮಿಯಂ ಅನ್ನು ನೀವು, 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಪಾಲಿಸಿಯ ಮಧ್ಯದಲ್ಲಿಯೇ ವಿಮೆ ಮಾಡಿದವರು ಸಾವನ್ನಪ್ಪಿದರೆ, ಕುಟುಂಬವು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಅದೇ ವೇಳೆಯಲ್ಲಿ ಪಾಲಿಸಿಯ ಉಳಿದ ವರ್ಷಗಳಲ್ಲಿ ಮಗಳಿಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ ಹಣ ಸಿಗುತ್ತದೆ. ಜೊತೆಗೆ 25 ವರ್ಷ ಮುಗಿದ ನಂತರ, ಪಾಲಿಸಿ ನಾಮಿನಿಗೆ ಪ್ರತ್ಯೇಕವಾಗಿ ಒಟ್ಟು 27 ಲಕ್ಷ ರೂ ದೊರಕುತ್ತದೆ. ಈ ಯೋಜನೆಯ ಎಲ್ ಐಸಿ ಪಾಲಿಸಿಯನ್ನು ನೀವು 25 ವರ್ಷಗಳವರೆಗೆ ತೆಗೆದುಕೊಳ್ಳಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •