ದೇಶದ ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸೇರಿದೆ. ಅನೇಕ ಸರ್ಕಾರಿ ಸೇವೆಯ ಲಾಭ ಪಡೆಯಲು ಆಧಾರ್ ಕಡ್ಡಾಯ. ಹುಟ್ಟಿದ ಮಗುವಿಗೂ ಆಧಾರ್ ಮಾಡಿಸಲಾಗುತ್ತದೆ. ಮಕ್ಕಳಿಗಾಗಿ ಬಾಲ್ ಆಧಾರ್ ತಯಾರಿಸುವಂತೆ ಆಧಾರ್ ಕಾರ್ಡ್ ತಯಾರಕ ಸರ್ಕಾರಿ ಸಂಸ್ಥೆ ಯುಐಡಿಎಐ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ. ಈ ಕಾರ್ಡನ್ನು ಐದು ವರ್ಷದೊಳಗಿನ ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಮಕ್ಕಳಿಗೆ ನೀಡಲಾಗುವ ಆಧಾರ್ ನೀಲಿ ಬಣ್ಣದಲ್ಲಿರುತ್ತದೆ. ಮಗುವಿಗೆ 5 ವರ್ಷವಾಗ್ತಿದ್ದಂತೆ ಈ ಆಧಾರ್ ಅಮಾನ್ಯವಾಗುತ್ತದೆ. ನಂತ್ರ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಸಂಖ್ಯೆ ನೀಡಿ ಮಕ್ಕಳ ಬಯೋಮೆಟ್ರಿಕ್ ವಿವರ ನೀಡಿ, ಶಾಶ್ವತ ಆಧಾರ್ ಪಡೆಯಬೇಕಾಗುತ್ತದೆ.

ಮಕ್ಕಳಿಗಾಗಿ ನೀಲಿ ಆಧಾರ್ ಕಾರ್ಡ್ ಬಯಸುವವರು, ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಿ ಫಾರ್ಮ್ ಭರ್ತಿ ಮಾಡಬೇಕು. ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ನೀಡಬೇಕು. ಮಗುವಿನ ಫೋಟೋವನ್ನು ನೀಡಬೇಕಾಗುತ್ತದೆ. ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ಇಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಪಾಲಕರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. 60 ದಿನಗಳಲ್ಲಿ ಮಕ್ಕಳ ಆಧಾರ್ ಕಾರ್ಡ್ ಮನೆಗೆ ಬರುತ್ತದೆ. ಹೊಸ ನಿಯಮದ ಪ್ರಕಾರ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡಲಾಗ್ತಿದೆ.

ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ ನೀಲಿ ಆಧಾರ್ ಕಾರ್ಡ್ ನೀಡುವ ಬಗ್ಗೆ ಈ ಹಿಂದೆಯೇ ಮಾಹಿತಿ ನೀಡಿತ್ತು. ಈ ಆಧಾರ್ ಕಾರ್ಡ್‌ನ ಹೆಸರು ಬಾಲ್ ಆಧಾರ್ ಕಾರ್ಡ್ ಮತ್ತು ಅದರ ಬಣ್ಣ ಕೂಡ ನೀಲಿ ಬಣ್ಣದ್ದಾಗಿರುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ ಈ ಆಧಾರ್ ಕಾರ್ಡ್ ನೀಡಲಾಗುವುದು. ಈ ಹಿಂದೆ ಎಲ್ಲರಿಗೂ ಒಂದೇ ರೀತಿಯ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತಿತ್ತು. ಐದು ವರ್ಷದೊಳಗಿನ ಮಕ್ಕಳಿಗೆ ‘ಬಾಲ್ ಆಧಾರ್ ಕಾರ್ಡ್’ ತರಲಾಗುತ್ತಿದೆ ಎಂದು ಆಧಾರ್ ಕಾರ್ಡ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಈ ಆಧಾರ್ ಕಾರ್ಡ್ ಅನ್ನು ಯಾವುದೇ ಬಯೋಮೆಟ್ರಿಕ್ ವಿವರಗಳಿಲ್ಲದೆ ತಯಾರಿಸಲಾಗುತ್ತದೆ.

Apply

ಮಗುವಿನ ಜನನ ಪ್ರಮಾಣಪತ್ರ ಮತ್ತು ಯಾವುದೇ ಪೋಷಕರ ಆಧಾರ್ ಕಾರ್ಡ್ ಸಂಖ್ಯೆ ಮೂಲಕ ‘ಮಕ್ಕಳ ಆಧಾರ್’ ಮಾಡಬಹುದು. ಮೊದಲನೆಯದಾಗಿ, ದಾಖಲಾತಿ ಕೇಂದ್ರಕ್ಕೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಿ. ಮಗುವಿನ ಜನನ ಪ್ರಮಾಣಪತ್ರ ಮತ್ತು ಯಾವುದೇ ಒಬ್ಬ ಪೋಷಕರ ಆಧಾರ್ ಸಂಖ್ಯೆಯನ್ನು ನೀಡಿ. ನೀವು ಮೊಬೈಲ್ ಸಂಖ್ಯೆಯನ್ನು ಸಹ ಒದಗಿಸಬೇಕು.ಅರ್ಜಿದಾರನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದಾನೆ, ಆದ್ದರಿಂದ ಅವನ ಬಯೋಮೆಟ್ರಿಕ್ ಅಗತ್ಯವಿರುವುದಿಲ್ಲ. ಫೋಟೋಗಳು ಮಾತ್ರ ಅಗತ್ಯವಿದೆ. ಆ ಮಗುವಿಗೆ 5 ವರ್ಷ ಮೀರಿದಾಗ, ಅವನ / ಅವಳ ಬಯೋಮೆಟ್ರಿಕ್ ಮಾಡಲಾಗುತ್ತದೆ. ಮಗುವಿನ ಫೋಟೋ ಕ್ಲಿಕ್ ಮಾಡಲಾಗುತ್ತದೆ. ಮಗುವಿನ ‘ಆಧಾರ್’ ಅನ್ನು ಅವನ / ಅವಳ ಹೆತ್ತವರ ಯುಐಡಿ (ಆಧಾರ್ ಕಾರ್ಡ್ ಸಂಖ್ಯೆ) ಗೆ ಲಿಂಕ್ ಮಾಡಲಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •