ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಬಹಳ ಚರ್ಚೆಯಾಗುತ್ತಿರುವ ವಿಚಾರ ಡ್ರ’ಗ್ಸ್ ಕುರಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನೀಡಿದ ಮಾಹಿತಿಗಳು, ಹಾಗೂ ಇತರ ವಿಚಾರಗಳನ್ನು ಗಮನಿಸಿ ಈ ಡ್ರ’ಗ್ಸ್ ಕೇಸ್ ಅನ್ನು, ಸಿಸಿಬಿಗೆ ವರ್ಗಾಯಿಸಿದ ನಂತರ, ಸ್ಯಾಂಡಲ್ ವುಡ್ ನ ಹಲವಾರು ನಟನಟಿಯರು ಡ್ರ’ಗ್ಸ್ ತೆಗೆದುಕೊಳ್ಳುತ್ತಾರೆ, ಅಥವಾ ಡ್ರ’ಗ್ಸ್ ಪೆ’ಡ್ಲ’ರ್ ಗಳ ಸಂಪರ್ಕ ಅವರಿಗಿದೆ ಎಂಬ ವಿಚಾರಗಳು ಹೊರಬರುತ್ತಿವೆ. ಮೊದಲು ನಟಿಯರಾದ, ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರನ್ನು ವಿಚಾರಣೆಗೆ ಕರೆಸಿದ ಸಿಸಿಬಿ, ಸಧ್ಯಕ್ಕೆ ಅವರನ್ನು ಬಂಧಿಸಿದ್ದಾರೆ. ನಂತರ ಸ್ಯಾಂಡಲ್ ವುಡ್ ನಟ ದಿಗಂತ್ ಹಾಗೂ ಐಂದ್ರಿತಾ ರೈ ಅವರಿಗೂ ಸಹ ನೋಟಿಸ್ ತಲುಪಿತ್ತು. ಅವರಿಬ್ಬರು ಸಹ ವಿಚಾರಣೆಗೆ ಹಾಜರಾಗಿದ್ದರು. ನಂತರ ಹಲವಾರು ಇತರ ನಟ ನಟಿಯರ ಮೇಲೂ ಸಹ ಅನುಮಾನ ವ್ಯಕ್ತವಾಗುತ್ತಿದೆ.

ಇದೇ ಸಾಲಿಗೆ ಕಿರುತೆರೆಯ ಪ್ರತಿಷ್ಠಿತ ನಿರೂಪಕಿ ಅನುಶ್ರೀ ಸಹ ಸೇರುತ್ತಾರೆ. ಅನುಶ್ರೀ ಅವರ ಮೇಲೆ ಡ್ರ’ಗ್ಸ್ ಪೆ’ಡ್ಲರ್ ಗಳ ಸಂಪರ್ಕ ಇರುವ ಆರೋ’ಪದಿಂದ ಅವರು ವಿಚಾರಣೆಗೆ ಹಾಜರಾಗಬೇಕೆಂದು ಮಂಗಳೂರು ಸಿಸಿಬಿ ಇಂದ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರೂಪಕಿ ಅನುಶ್ರೀ, ಶುಕ್ರವಾರ ಸಂಜೆ ಮಂಗಳೂರಿಗೆ ಬಂದು, ವಿಚಾರಣೆಗೆ ಸಹಕರಿಸುವುದಾಗಿ ಮಾಧ್ಯಮಗಳಿಗೆ ಸಹ ತಿಳಿಸಿದ್ದರು. ಗುರುವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಹ, ಶುಕ್ರವಾರ ಸಂಜೆ ಸಿಸಿಬಿ ಪೋಲಿಸರ ಮುಂದೆ ಹಾಜರಾಗುವುದಾಗಿ ಪೋಸ್ಟ್ ಮಾಡಿದ್ದರು, ಹಾಗೆಯೇ ನಿನ್ನೆ ಬೆಳಿಗ್ಗೆ, ಸುಮಾರು 5 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದರು. ಆದರೆ ಕೊಟ್ಟ ಮಾತಿನಂತೆ ನಿನ್ನೆ ಸಂಜೆ ಅನುಶ್ರೀ ವಿಚಾರಣೆಗೆ ಹಾಜರಾಗಿಲ್ಲ.

Anushree-new

ಅನುಶ್ರೀ ವಿಚಾರಣೆಗೆ ಬರುವುದಾಗಿ ಎನಿಸಿದ್ದ ಮಂಗಳೂರಿನ ಸಿಸಿಬಿ ಪೊಲೀಸರು ಮತ್ತು ನಾ’ರ್ಕೋ’ಟಿಕ್ ಕ್ರೈo ಠಾಣೆಯ ಪೊಲೀಸರು ಅವರೊಡನೆ ವಿಚಾರಣೆ ನಡೆಸಲು ಬಹಳಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅನುಶ್ರೀ ಅವರನ್ನು ವಿಚಾರಣೆ 15 ಜನ ಅಧಿಕಾರಿಗಳು ತಯಾರಾಗಿದ್ದರು. ಶುಕ್ರವಾರ ನಡೆಯಬೇಕಿದ್ದ ವಿಚಾರಣೆಯಲ್ಲಿ ಡ್ರ’ಗ್ಸ್ ಪೆ’ಡ್ಲಿಂ’ಗ್ ಆರೋ’ಪಿಗಳಾದ ಕಿಶೋರ್ ಅಮನ್, ತರುಣ್ ರಾಜ್ ಜೊತೆಗೆ ಅನುಶ್ರೀ ಅವರಿಗೆ ಸಂಪರ್ಕ ಮತ್ತು ಸಂ’ಬಂಧ ಕುರಿತಾಗಿ ಪ್ರಶ್ನೆಗಳನ್ನು ಕೇಳಿ, ನಂತರ ಈ ವಿಚಾರದ ಕುರಿತು ಸಾಕ್ಷಿಗಳನ್ನು ತೋರಿಸಿ ಅನುಶ್ರೀ ಅವರೊಡನೆ ವಿಚಾರಣೆ ನಡೆಸಲು ಪೊಲೀಸರು ಸಕಲ ತಯಾರಿ ನಡೆಸಿದ್ದರು. ಆದರೆ ಅನುಶ್ರೀ ನಿನ್ನೆ ವಿಚಾರಣೆಗೆ ಹಾಜರಾಗಿಲ್ಲ. ಅನುಶ್ರೀ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ

ಈಗಾಗಲೇ ಆರೋ’ಪಿಗಳಾದ ಕಿಶೋರ್, ತರುಣ್, ನೌಶೀನ್ ರನ್ನು ಬಂ’ಧಿಸಲಾಗಿದೆ. ಈ ಆರೋಪಿಗಳು ಮಂಗಳೂರಿನ ಪಾಂಡೇಶ್ವರದ ಇಕನಾಮಿಕ್ ಮತ್ತು ನಾ’ರ್ಕೋ’ಟಿಕ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋ’ಪಿಗಳಿಂದ ಈಗಾಗಲೇ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿರುವ ಪೊಲೀಸರು ಶುಕ್ರವಾರ ಸಂಜೆ ಕಿಶೋರ್ ಹಾಗೂ ನೌಶೀನ್‍ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, ಆರೋ’ಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕೋರ್ಟಿಗೆ ಕರೆದೊಯ್ಯುವ ಮೊದಲು ಆರೋಪಿಗಳಲ್ಲಿ ಒಬ್ಬನಾದ ತರುಣ್ ಅನುಶ್ರೀ ಕುರಿತು ಕೆಲವು ಮುಖ್ಯವಾದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೊದಲಿಗೆ ಅನುಶ್ರೀ ಅವರಿಗೆ ಕು’ಡಿಯುವ ಹವ್ಯಾಸ ಇತ್ತು ತ ಅಂತ ಮಾತ್ರ ಹೇಳಿದ್ದನು. ಆದರೆ ಪೊಲೀಸರು ಡ್ರಿ’ಲ್ ಮಾಡಿ ತನಿಖೆ ನಡೆಸಿದ ನಂತರ ಇನ್ನು ಕೆಲವು ಮಾಹಿತಿಗಳನ್ನು ತಿಳಿಸಿದ್ದಾನೆ ಎನ್ನಲಾಗಿದೆ. “ನಾವು ಡ್ರ’ಗ್ ಪಾ’ರ್ಟಿ ಮಾಡುತ್ತಿದ್ದೆವು, ಪಾ’ರ್ಟಿಯಲ್ಲಿ ಅನುಶ್ರೀ ಡ್ರ’ಗ್ಸ್ ತೆಗೆದುಕೊಳ್ಳತ್ತಿದ್ದಳು..” ಎಂದು ಪೊಲೀಸರ ಬಳಿ ತರುಣ್ ಹೇಳಿದ್ದಾನೆ ಎಂದು ಮಾಹಿತಿ ದೊರಕಿದೆ. ತರುಣ್ ಕಡೆಯಿಂದ ಬಂದಿರುವ ಮಾಹಿತಿಗಳು ಅನುಶ್ರೀಯನ್ನು ಸಂಕ’ಟಕ್ಕೆ ಸಿಲು’ಕಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •