ಗೌರಿ ಹಬ್ಬದ ದಿನದ ಒಬ್ಬ ಹೆಣ್ಣು ಮಗಳ ಮೇಲೆ ಇಂತಹ ಆರೋಪಗಳನ್ನು ಮಾಡುತ್ತಿದ್ದಿರಿ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಗೌರವವಿದೆ. ಆದರೆ, ಹಬ್ಬದ ದಿನ ಡ್ರಗ್ಸ್ ಸೇವನೆ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ತುಂಬಾ ನೋವಾಗಿದೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ಫೇಸ್ ಮಾಡುತ್ತೇನೆ ಎಂದು ಅನುಶ್ರೀ ಹೇಳಿದರು.

ಬೆಂಗಳೂರು: ಡ್ರ.ಗ್ಸ್ ಪ್ರಕರಣ (Dr/ug Case) ಸಂಬಂಧ ನಿರೂಪಕಿ ಅನುಶ್ರೀ (Anchor Anushree) ಹೆಸರು ಕೇಳಿಬಂದಿತ್ತು. ಆದಾದ ಬಳಿಕ ಅನುಶ್ರೀ ಅವರು ಬೆಂಗಳೂರು ತೊರೆದು ಮುಂಬೈಗೆ (Anushree Gone To Mumbai) ತೆರಳಿದ್ದರು. ಇದೀಗ ಗುರುವಾರ ಸಂಜೆ ಬೆಂಗಳೂರಿಗೆ ವಾಪಸ್ಸಾದ ಅನುಶ್ರೀ (Anushree Return To Bengaluru) ತಮ್ಮ ಮಹಾಲಕ್ಷ್ಮೀ ಲೇಔಟ್ ನಿವಾಸದ ಮುಂದೆ ಸುದ್ದಿಗೋಷ್ಠಿ ನಡೆಸಿದರು. ಕಳೆದ ವರ್ಷ ಸಿಸಿಬಿ ಪೊಲೀಸರು ಪೆ/ಡ್ಲಿಂಗ್ ಮಾಡಿರೋದಾಗಿ ಕರೆದಿಲ್ಲ. ಕಾನೂನಿನ ಪರವಾಗಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾಡಿದ್ದೇನೆ. ಸಾವಿರ ಜನ ಸಾವಿರಾರು ರೀತಿ ಆರೋಪ ಮಾಡಬಹುದು. ಅದಕ್ಕೆ ನಾನು ಉತ್ತರ ನೀಡಬೇಕಾಗಿಲ್ಲ ಎಂದು ಅನುಶ್ರೀ ಹೇಳಿದರು.

2007ರಲ್ಲಿ ಟಿವಿ ಶೋ ಒಂದರ ಗ್ರ್ಯಾಂಡ್ ಫಿನಾಲೆಯಲ್ಲಿ ನಾನು ಗೆದ್ದಿದ್ದೆ. ಈ ವೇಳೆ ಹಲವಾರು ಜನ ಡ್ಯಾನ್ಸ್ ಶೋಗೆ ಬಂದಿದ್ದರು. ಗೆದ್ದಾಗ ನಾನು ಎಲ್ಲರಿಗೂ ಊಟ ಕೊಡಿಸಿದ್ದೆ ಅಷ್ಟೇ ಅದನ್ನು ಹೊರತುಪಡಿಸಿದರೆ ಅವರಿಗೆ ನನಗೂ ಮತ್ತೆ ಯಾವುದೇ ಸಂಪರ್ಕ ಇಲ್ಲ. ಪೊಲೀಸರು ನನ್ನನ್ನು ಕರೆದು ಪ್ರಶ್ನೆ ಮಾಡಿದರೆ ನಾನು ಈ ದೇಶದ ಪ್ರಜೆಯಾಗಿ ಹೋಗಿ ಉತ್ತರ ನೀಡುತ್ತೇನೆ. ಕಳೆದ 15 ವರ್ಷಗಳಿಂದ ಸಾವಿರಾರು ಜನರ ಜೊತೆ ಕೆಲಸ ಮಾಡಿದ್ದೇನೆ. ಈ ಸಾವಿರಾರು ಜನರು ಮಾಡುವ ಕೆಲಸಗಳಿಗೆ ನಾನು ಹೇಗೆ ಜವಾಬ್ದಾರಳಾಗುತ್ತೇನೆ. ಅವರಲ್ಲಿ ಯಾರೋ ಡ್ರ/ಗ್ಸ್ ಪೆ/ಡ್ಲರ್ ಆದರು ಎಂದರೆ ಅದಕ್ಕೂ ನನಗೂ ಹೇಗೆ ಸಂಬಂಧ ಕಲ್ಪಿಸುತ್ತಿರಿ. ಈ 13 ವರ್ಷಗಳಲ್ಲಿ ಹಿಂದೆ ಅವರು ಕೊರಿಯೋಗ್ರಾಫ್ ಆಗಿದ್ದರು.
ನಾನು ಅಲ್ಲಿ ಸ್ಪರ್ಧಿ ಆಗಿದ್ದೆ. ಅಲ್ಲಿ ಜೊತೆಯಾಗಿ ಊಟ ಮಾಡುತ್ತಿದ್ದೆವು. ಅದಾದ ಮೇಲೆ ನನಗೂ ಕಿಶೋರ್ ಅವರಿಗೆ ಯಾವುದೇ ರೀತಿಯ ಸಂಪರ್ಕವಿಲ್ಲ. ಒಮ್ಮೆ ಅವರು ಅವರ ಡಾನ್ಸ್ ಸ್ಕೂಲ್ ಆರಂಭಿಸಿದ್ದಾಗ ನನ್ನನ್ನು ಕರೆದಿದ್ದರು. ಆಗ ನಾನು ಹೋಗಿ ಬಂದಿದ್ದೆ ಅಷ್ಟೇ ಎಂದರು.ಪ್ರಶಾಂತ್ ಸಂಬರಗಿ ಅವರು ನನ್ನ ಬಳಿ ಅಷ್ಟು ಕೋಟಿಯ ಮನೆಗಳಿವೆ. ಆಸ್ತಿ ಇದೆ ಎಂದು ಆರೋಪ ಮಾಡಿದ್ದಾರೆ. ನೋಡಿ ಸಾರ್ ನಾನು ಇಲ್ಲಿ ಇರುವ ಮನೆ ಮೂರು ವರ್ಷಗಳಿಂದ ಬಾಡಿಗೆಯಲ್ಲಿ ಇರುವುದು. ನೀವು ಮನೆ ಮಾಲೀಕರ ಬಳಿ ಹೋಗಿ ಕೇಳಬಹುದು.

ಮಂಗಳೂರಿನಲ್ಲಿ ಇರುವ ಮನೆ ನನ್ನ ಸ್ವಂತದ್ದು. ಅಲ್ಲಿಗೆ ಯಾರೂ ಬೇಕಾದರೂ ಹೋಗಿ ನೋಡಿ ಅದರ ಮೌಲ್ಯ ಎಷ್ಟು ಎಂದು ಹೇಳಬಹುದು. ಅದಕ್ಕೆ ಕಾಂಪೌಂಡ್, ಗೇಟ್​ ಸಹ ಇಲ್ಲ. ಅದೊಂದು ಸಣ್ಣ ಮನೆ. ಯಾರೋ ಕುಳಿತು ಸುಮ್ಮನೆ ಆರೋಪ ಮಾಡುತ್ತಾರೆ. ಅದಕ್ಕೆಲ್ಲಾ ನಾನು ಬೆಲೆ ಕೊಡಲ್ಲ. ನಾನು ಪ್ರತಿದಿನ ಕೆಲಸಕ್ಕೆ ಹೋಗುತ್ತೇನೆ, ಸ್ವಲ್ಪ ಜನರ ಪ್ರೀತಿ ಗಳಿಸಿದ್ದೇನೆ ಅಷ್ಟೇ ಎಂದು ಅನುಶ್ರೀ ಹೇಳಿದರು.ಗೌರಿ ಹಬ್ಬದ ದಿನದ ಒಬ್ಬ ಹೆಣ್ಣು ಮಗಳ ಮೇಲೆ ಇಂತಹ ಆರೋಪಗಳನ್ನು ಮಾಡುತ್ತಿದ್ದಿರಿ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಗೌರವವಿದೆ.

ಆದರೆ, ಹಬ್ಬದ ದಿನ ಡ್ರ/ಗ್ಸ್ ಸೇವನೆ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ತುಂಬಾ ನೋವಾಗಿದೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ಫೇಸ್ ಮಾಡುತ್ತೇನೆ. ಈಗ ನನ್ನ ತಾಯಿಗೆ 60 ವರ್ಷ. ಈ ಘಟನೆಯಿಂದ ಅವರ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರಿದರೆ ನಾನು ಯಾರನ್ನೂ ಬಿಡುವುದಿಲ್ಲ. ಅವನು ಎಷ್ಟೇ ದೊಡ್ಡವನಾದರೂ ನಾನು ಬಿಡುವುದಿಲ್ಲ ಎಂದು ಅನುಶ್ರೀ ಎಚ್ಚರಿಕೆ ನೀಡಿದರು.
ಮುಂಬೈ ಗೆ ಹಾರಿದ ಅನುಶ್ರೀ,ವಿಡಿಯೋ ನೋಡಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •