ಅನುಶ್ರೀ ಅವರ ತಂದೆ ಯಾರು ಗೊತ್ತಾ? ಈಗ ಎಲ್ಲಿದ್ದಾರೆ ಗೊತ್ತಾ? ಕಣ್ಣೀರಿನ ಕಥೆ.

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡದ ಬಹುಬೇಡಿಕೆಯ ನಿರೂಪಕಿಯಾಗಿದ್ದಾರೆ ಕನ್ನಡದ ಟಾಪ್ ಅಂಕ್ಯರ್ ಅಂದರೆ ನೆನಪಾಗುವುದು ಅನುಶ್ರೀ. ಇಂದು ದೊಡ್ಡ ಸ್ಟಾರ್ಗಳ ಮಟ್ಟಿಗೆ ಹೆಸರುಮಾಡಿರುವ ಅನುಶ್ರೀ ಒಂದು ಕಾಲದಲ್ಲಿ ಬರಿಗೈನಲ್ಲಿ ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ಅನುಶ್ರೀ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಅದನ್ನು ಸಂಪೂರ್ಣವಾಗಿ ಹೇಳುತ್ತೇವೆ.

ಅನುಶ್ರೀ ಅವರ ತಂದೆ ಚಿಕ್ಕ ವಯಸ್ಸಿನಲ್ಲೆ ಬಿಟ್ಟುಹೋದರು ತಂದೆ ತಾಯಿ ಸಂಪೂರ್ಣ ಬೇರ್ಪಟ್ಟು ಮನೆಯ ಜವಾಬ್ದಾರಿ ಅನುಶ್ರೀ ಅವರ ಮೇಲೆ ಬಿತ್ತು. ಪಿಯುಸಿ ಓದುತ್ತಿರುವಾಗಲೇ ಮಂಗಳೂರಿನ ಲೋಕಲ್ ಚಾನೆಲ್ಲೊಂದರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು.ಅಲ್ಲಿ ಜೀವನ ನಡೆಸಲು ಕಷ್ಟವಾದಾಗ ಬೆಂಗಳೂರಿಗೆ ಬರುತ್ತಾರೆ, ಒಂದು ಎಪಿಸೋಡ್ 250 ರೂಪಾಯಿ ಪಡೆಯುವುದರ ಮೂಲಕ ಬೆಂಗಳೂರಿನ ಒಂದು ಖಾಸಗಿ ಚಾನೆಲ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ತುಂಬಾ ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿ ಎಲ್ಲರಿಂದ ಶಭಾಷ್ ಎನಿಸಿಕೊಳ್ಳುತ್ತಾರೆ. ಬೆಂಕಿಪಟ್ಣ ಚಿತ್ರದ ಮೂಲಕ ನಾಯಕಿಯಾಗಿ ನಟನೆಗೆ ಇಳಿಯುತ್ತಾರೆ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕರ್ನಾಟಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ತನ್ನ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿರುವ ಅನುಶ್ರೀ ತಾಯಿ ಹಾಗೂ ತಮ್ಮನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಕಲ್ಪನಾ ಅಂದರೆ ಇವರಿಗೆ ತುಂಬಾ ಅಚ್ಚುಮೆಚ್ಚು.

ಅನುಶ್ರೀ ಈಗ ಕನ್ನಡದ ಟಾಪ್ ನಿರೂಪಕಿಯಾಗಿ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅದರಲ್ಲಿ ಪ್ರಮುಖವಾಗಿ ಸರೆಗಮಪ ಕನ್ನಡದಲ್ಲಿ 17 ಸೀಸನ್ ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ ಅಲ್ಲದೆ ಬೇರೆಬೇರೆಯಾಗಿ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಮುಂತಾದ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ, ಅದು ಅಲ್ಲದೆ ಉತ್ತಮ ವಿಲನ್,ಮಾಧ ಮತ್ತು ಮನಸಿ ಮತ್ತು ಉಪ್ಪು ಹುಳಿ ಖಾರ ಸಿನೇಮಾಗಳಲ್ಲಿ ಫಿಲ್ಮೊಗ್ರಾಫಿ ಆಗಿ ಕೆಲಸ ನಿರ್ವಹಿಸಿದ್ದಾರೆ.

ಅನುಶ್ರೀ ಅವರಿಗೆ 2011 ರಲ್ಲಿ ಬೆಸ್ಟ್ ದುಬ್ಬಿಂಗ್ ಆರ್ಟಿಸ್ಟ್, 2015ರಲ್ಲಿ ಪಾಪುಲರ್ ಅಂಕ್ಯರ್, 2015ರಲ್ಲಿ ಬೆಸ್ಟ್ ಡಿಬಟ್ ಆಕ್ಟರ್, 2016ರಲ್ಲಿ ಬೆಸ್ಟ್ ಅಂಕ್ಯರ್, 2018ರಲ್ಲಿ ಕೆಂಪೇಗೌಡ ಪ್ರಶಸ್ತಿ ಅವಾರ್ಡ್ ಮತ್ತು 2018 ಮತ್ತು 2019ರಲ್ಲಿ ಫ್ಯಾವರಿಟ್ ಅಂಕ್ಯರ್ ಅವಾರ್ಡ್ ದೊರೆತಿದೆ.ಅನುಶ್ರೀ ಈಗ ಕನ್ನಡದ ಟಾಪ್ ನಿರೂಪಕಿಯಾಗಿದ್ದಾರೆ ಅಂದರೆ ಅದಕ್ಕೆ ಅವರು ಪಟ್ಟ ಪರಿಶ್ರಮವೇ ಸಾಕ್ಷಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...