ಕಾರ್ಯಕ್ರಮವೊಂದಕ್ಕೆ ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಅಭಿಮಾನಿಗಳಿಂದ ಬಚಾವ್ ಆಗಲು ನಟಿ ಅನುಶ್ರೀ ಪರದಾಡಿದ್ದಾರೆ.

 

 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಳೆದ ರಾತ್ರಿ ನಡೆದ ಕಲಾಜಾತ್ರೆ ಕಾರ್ಯಕ್ರಮಕ್ಕೆ ಅನುಶ್ರೀ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಫಾನ್ಸ್ ಗಳ ತಳ್ಳಾಟದಿಂದ ಗಬರಿಗೊಂಡಿದ್ದ ಅನುಶ್ರೀ ಅವರು ಖಾಸಗಿ ಭದ್ರತಾ ಗಾರ್ಡ್‍ಗಳ ನೆರವಿನಿಂದ ಕಾರ್ಯಕ್ರಮದಿಂದ ಹೊರಬಂದರು.

 

 

ನಿರ್ದೇಶಕ ಕಲಂದರ ದೊಡಮನಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಲಾಜಾತ್ರೆ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಮಾತನಾಡಿ, ಮಾಲ್ಗುಡಿ ಡೇಸ್ ಚಿತ್ರದ ಪ್ರಚಾರ ನಡೆಸಿದರು. ಚಿತ್ರದ ಪ್ರಚಾರಾರ್ಥವಾಗಿ ಆಗಮಿಸಿದ್ದ ಚಿನ್ನಾರಿ ಮುತ್ತ ಉತ್ತರ ಕರ್ನಾಟಕದವರಿಂದಲೇ ಇಂದು ಕನ್ನಡ ಭಾಷೆ ಜೀವಂತವಾಗಿ ಉಳಿದಿದೆ ಎಂದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •