ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳು ಪ್ರಸಾರವಾಗುತ್ತವೆ. ಇವುಗಳಲ್ಲಿ ಸಂಗೀತ ಕಾರ್ಯಕ್ರಮಗಳು, ಹಾಸ್ಯ ಕಾರ್ಯಕ್ರಮಗಳು ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮವಾದ ಸರಿಗಮಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸರಿಗಮಪ ಹಲವಾರು ಸೀಸನ್ ಗಳನ್ನು ಮುಗಿಸಿದ್ದು, ಜನರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕಿರುತೆರೆಯಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳ ಆದರೂ ಕೂಡ ನಿರೂಪಕಿಯಾಗಿ ಅನುಶ್ರೀ ಅವರ ಬೇಡಿಕೆ ಬಹಳವಿದೆ.

Anushree

ಹೌದು ನಿರೂಪಕಿ ಅನುಶ್ರೀ ಅವರು ಕಿರುತೆರೆಯಲ್ಲಿ ಪ್ರಸಾರವಾಗುವ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಇವರ ನಿರೂಪಣೆ ಪ್ರತಿಯೊಬ್ಬ ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ಇವರ ಪಟಪಟನೆ ಮಾತನಾಡುವ ರೀತಿ ಹಾಗೂ ಇವರ ಹಾಸ್ಯ ಸಂಭಾಷಣೆ ಎಲ್ಲರಿಗೂ ಇಷ್ಟವಾಗಿದೆ. ಇವರು ಸರಿಗಮಪ ರಿಯಾಲಿಟಿ ಶೋನ ನಿರೂಪಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ನಿರೂಪಕಿ ಅನುಶ್ರೀ ಅವರು ಕಿರುತೆರೆ ಯಾವುದೇ ಕಾರ್ಯಕ್ರಮವಾದರೂ ಕೂಡ ಅವರೇ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಅನುಶ್ರಿ ಅವರ ಬೇಡಿಕೆಯಿದೆ. ಇನ್ನು ಅನುಶ್ರೀ ಅವರು ಬಾಲ್ಯದಿಂದಲೂ ತಮ್ಮ ಕುಟುಂಬದ ಹೊಣೆಯನ್ನು ಹೊತ್ತುಕೊಂಡು ಇಂದು ಅವರು ಎತ್ತರಕ್ಕೆ ಬೆಳೆದಿದ್ದಾರೆ. ಇನ್ನು ಸರಿಗಮಪ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದರು ನಿಮಗೆ ಗೊತ್ತಾ?

Anushree

ಹೌದು ಇದೀಗ ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಬಹು ಬೇಡಿಕೆ ಇದೆ. ಸರಿಗಮಪದ ಹಲವಾರು ಸೀಸನ್ ಗಳನ್ನು ಇವರೇ ನಿರೂಪಣೆ ಮಾಡಿದ್ದಾರೆ. ಇವರು ವೀಕ್ಷಕರಿಗೆ ತುಂಬಾ ಹತ್ತಿರವಾಗಿದ್ದು, ಸರಿಗಮಪದ 1 ಎಪಿಸೋಡಿಗೆ 60ರಿಂದ 70 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹೌದು ಇತ್ತೀಚಿಗೆ ನಡೆದ ಸಂಗೀತ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ಅನುಶ್ರೀ ಅವರು ಒಂದು ಎಪಿಸೋಡಿಗೆ ಸುಮಾರು 60ರಿಂದ 70 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಇನ್ನು ಇದು ಕಿರುತೆರೆಯ ಯಾವ ನಟಿಯರಿಗೂ ಸರಿ ಸಮಾನವಲ್ಲ. ಅಷ್ಟರಮಟ್ಟಿಗೆ ಅನುಶ್ರೀ ಅವರು ನಿರೂಪಕಿಯಾಗಿ ಖ್ಯಾತರಾಗಿದ್ದಷ್ಟೇ ಅಲ್ಲದೆ ಅವರ ಬೇಡಿಕೆಯು ಕೂಡ ಹಾಗೆಯೇ ಇದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ನಿರೂಪಕಿ ಅನುಶ್ರೀ ಅವರು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ಶೇರ್ ಕೂಡ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •