ನಿರೂಪಕಿ ಅನುಶ್ರೀ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬ ಮನೆಯ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅನುಶ್ರೀ ಎಂದರೆ ಯಾರೆಂಬುದು ಗೊತ್ತು. ಪ್ರತಿಯೊಬ್ಬರ ಬಾಯಲ್ಲಿ ನಿರೂಪಕಿ ಅನುಶ್ರೀ ಅವರ ಹೆಸರು ಓಡಾಡುತ್ತದೆ. ಅಷ್ಟರಮಟ್ಟಿಗೆ ಫೇಮಸ್ ಆಗಿರುವ ಅನುಶ್ರಿ ಅವರ ಹಿಂದಿನ ಜೀವನದ ಬಗ್ಗೆ ನಿಮಗೆ ಗೊತ್ತಾದರೆ ನಿಮ್ಮ ಹೃದಯ ಕಲ್ ಇದ್ದರೂ ಕೂಡ ಕರಗುತ್ತದೆ. ಹೌದು ಅನುಶ್ರೀ ಅವರು ಮೊದಲಿಗೆ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಾಗ ಅವರ ಮೇಲೆ ತಮ್ಮ ಹಾಗೂ ಅಮ್ಮನ ಜವಾಬ್ದಾರಿ ಇತ್ತು. ಅವರನ್ನು ಅನುಶ್ರೀ ಅವರೇ ಸಾಕಬೇಕಾಗಿತ್ತು. ಅಷ್ಟೇ ಅಲ್ಲದೆ ತಮ್ಮನನ್ನೂ ಓದಿಸಬೇಕಾಗಿತ್ತು. ಹೀಗೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡು ಅನುಶ್ರೀ ಅವರು ಬೆಂಗಳೂರಿಗೆ ಬಂದರು. ಒಂದು ಕಾಲದಲ್ಲಿ ಇವರು ತುತ್ತು ಅನ್ನಕ್ಕಾಗಿ ಪರದಾಡಿದ್ದು, ಇದೀಗ ಕನ್ನಡ ಕಿರುತೆರೆಯ ಫೇಮಸ್ ನಿರೂಪಕಿ.

Anushree

ಅನುಶ್ರೀ ಅವರು ಮೂಲತಃ ಮಂಗಳೂರಿನ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳಲಾಗದೆ ಅನುಶ್ರೀ ಅವರ ತಂದೆ ಅವರ ಕುಟುಂಬವನ್ನು ತೊರೆದರು. ಹೀಗಾಗಿ ಅನುಶ್ರೀ ಅವರು ಚಿಕ್ಕವಯಸ್ಸಿನಲ್ಲಿ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ತಾವೇ ಹೊತ್ತುಕೊಂಡರು. ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಅನುಶ್ರೀ ಅವರು ತಮ್ಮ ಓದನ್ನು ಮಧ್ಯದಲ್ಲಿಯೇ ಬಿಟ್ಟರು. ಹೀಗಾಗಿ ಅವರು ಬಹಳ ಓದಿಲ್ಲ.

ಅಷ್ಟೇ ಅಲ್ಲದೆ ತಮ್ಮ ಹಾಗೂ ತಮ್ಮ ತಾಯಿಯನ್ನು ಹಾಕಲು ಅನುಸರಿಸುವವರು ಕೂಲಿ ಕೆಲಸ ಮಾಡಿದ್ದು ಕೂಡ ಉಂಟು. ಶಾಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದ ಅನುಶ್ರೀ ಅವರು ಎಂದು ಕರ್ನಾಟಕದ ಫೇಮಸ್ ನಿರೂಪಕಿಯಾಗಿ ಹೊರಹೊಮ್ಮಿದ್ದಾರೆ. ಹೀಗೆ ಮಾತನ್ನೇ ಬಂಡವಾಳ ಮಾಡಿಕೊಂಡು ಅನುಶ್ರಿ ಅವರು ನಮ್ಮ ಟಿವಿ ಎಂಬ ಮಂಗಳೂರಿನ

Anushree

ವಾಹಿನಿಯಲ್ಲಿ ಮೊದಲ ಬಾರಿಗೆ ನಿರೂಪಕಿಯಾಗಿ ಕಾರ್ಯ ಪ್ರಾರಂಭಿಸಿದರು. ಅಲ್ಲಿಂದ ಅವರ ಹೊಸ ಅಧ್ಯಾಯ ಪ್ರಾರಂಭವಾಯಿತು. ನಂತರದಲ್ಲಿ ಅವರು ಈ ಟಿವಿ ವಾಹಿನಿಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು ಎಂಬ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಕಾಲಿಟ್ಟರು. ಅಲ್ಲಿಂದ ನಿರೂಪಕಿಯಾಗಿ ಹೆಸರನ್ನು ಗಳಿಸುತ್ತಾ ಬಂದರು.

ಇಷ್ಟೇ ಅಲ್ಲದೆ ಕನ್ನಡ ಬಿಗ್ ಬಾಸ್ ಒಂದನೇ ಆವೃತ್ತಿಯಲ್ಲಿ ಕೂಡ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಸುಮಾರು 80 ದಿನಗಳನ್ನು ಕಳೆದ ಇವರು ನಂತರ ಕನ್ನಡದ ಹಲವಾರು ವಾಹಿನಿಗಳಲ್ಲಿ ಕೆಲಸ ಮಾಡಿದರು. ಆದರೆ ಇವರಿಗೆ ಕರ್ನಾಟಕದ ತುಂಬೆಲ್ಲ ಹೆಸರು ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋ. ಹೌದು ಅನುಶ್ರೀ ಅವರು ಸರಿಗಮಪ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು ಪಟಪಟನೆ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದರು. ಅಲ್ಲಿಂದ ಇವರ ಜೀವನದ ದಿಕ್ಕೇ ಬದಲಾಗಿತ್ತು. ಅನಂತರ ರೂಪಾಯಿಗಳಲ್ಲಿ ಪಡೆಯುತ್ತಿದ್ದ ಸಂಬಳ ಇಂದು ಲಕ್ಷಗಳಲ್ಲಿ ಆದಾಯ ತಮ್ಮದಾಗಿಸಿಕೊಂಡಿದ್ದಾರೆ.

Anushree

ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡಿದ ಅನುಶ್ರೀ ಅವರು ಇಂದು ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ತಮ್ಮನನ್ನು ಓದಿಸುತ್ತಾ ಹಾಗೂ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅನುಶ್ರೀ ಅವರು ತುಂಬಾ ಸುಖವಾಗಿದ್ದಾರೆ. ಹೀಗೆ ಹಣದ ಬೆಂಬಲವಿಲ್ಲದೆ ಕಷ್ಟಪಟ್ಟು ಎತ್ತರಕ್ಕೆ ಬೆಳೆದ ಅನುಸಿರೆ ಅವರು ಇಂದು ಕನ್ನಡಿಗರ ಮನೆಮಾತಾಗಿದ್ದಾರೆ. ಇವರು ಇದೇ ರೀತಿ ಇನ್ನಷ್ಟು ಗಳಿಸಲಿ ಎಂದು ನಾವು ಈ ಮೂಲಕ ಹಾರೈಸೋಣ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •