ವೇದಿಕೆ ಮೇಲೆ ಕಣ್ಣೀರ ಹೊಳೆ ಹರಿಸಿದ ಅನುಶ್ರೀ,ಅಯ್ಯೋ ಕಾರಣ ತಿಳಿದರೆ ಕಣ್ಣೀರು ಬರುತ್ತೆ ಕಣ್ರೀ.! ವಿಷಯ ಏನು ಗೊತ್ತೇ?

Home

ನಟ ಪುನೀತ್ ರಾಜಕುಮಾರ್ ಅವರು ಅಳಿದ ನೋವಂತೂ ಇನ್ನೂ ಮಾಸಿಲ್ಲ, ಸ್ಯಾಂಡಲ್ ವುಡ್ನಲ್ಲಿ ಇವತ್ತೀಗೂ ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರಿಡುತ್ತಿದೆ ಚಿತ್ರರಂಗ. ಅದರಲ್ಲೂ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿಷಯಕ್ಕೆ ಬಂದರೆ ಪುನೀತ್ ಅವರ ಬಹುದೊಡ್ಡ ಅಭಿಮಾನಿ ಆಗಿರುವ ಅವರು ಪುನೀತ್ ಬಗ್ಗೆ ಯಾರೇ ಮಾತನಾಡಿದರೂ ಭಾವುಕರಾಗುತ್ತಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರೆಗಮಪ ಕಾರ್ಯಕ್ರಮ ಹೆಚ್ಚು ಹೆಚ್ಚು ಫೆಮಸ್ ಆಗುತ್ತಿರುವುದೇ ಅದರಲ್ಲಿ ಪ್ರಸಾರವಾಗುವ ಥೀಮ್ ಗೀತೆಗಳ ಮೇಲೆ.

ಖ್ಯಾತ ಆ್ಯಂಕರ್ ಅನುಶ್ರೀ ಗಳಗಳನೆ ಅತ್ತಿದ್ಯಾಕೆ? | Btv News Live

ಹಳೆಯ ಹಾಗೂ ಹೊಸ ಹಾಡುಗಳ ಸಮ್ಮಿಶ್ರಣವನ್ನು ಇಲ್ಲಿಕಾಣಬಹುದು. ಹಾಗೆಯೇ ಸ್ವರ್ಧಿಗಳ ಗಾಯದನ ಜೊತೆಗೆ ಗಾಯಕ ವಿಜಯ್ ಪ್ರಕಾಶ್, ನಾದಬಹ್ಮ ಹಂಸಲೇಖ ಅವರುಗಳ ಗಾಯನ, ಹಾಗೂ ಗಾಯನಲೋಕದಲ್ಲಿ ಅದರಲೂ ಚಿತ್ರರಂಗದಲ್ಲಿ ಅವರ ಅನುಭವ ಆಸಕ್ತಿಯನ್ನೂ ಹುಟ್ಟುಹಾಕುತ್ತೆ, ಮನೊರಂಜನೆಯನ್ನೂ ನೀಡುತ್ತೆ. ಹೌದು ಕೇವಲ ಗಾಯನ ಮಾತ್ರವಲ್ಲದೇ ಸಿನಿಮಾ ದಿಗ್ಗಜರುಗಳನ್ನು ವೇದಿಕೆಯ ಮೇಲೆ ಕರೆಸುವ ಸರೆಗಮಪ ಗಾಯನ ಕಾರ್ಯಕ್ರಮ, ಅದೆಷ್ಟು ಬಾರಿ ಪ್ರಸಾರವಾದರೂ ವೀಕ್ಷಿಸುತ್ತಾರೆ.

ಕಿರುತೆರೆಯಲ್ಲಿ ಅಷ್ಟು ಛಾಪು ಮುಡಿಸಿರುವ ಈ ಕಾರ್ಯಕ್ರಮ ಈ ಬಾರಿ ಇನ್ನಷ್ಟು ರಂಗೇರಿದ್ದು, ನಟ , ನಿರ್ದೇಶಕ, ನಿರ್ಮಾಪಕ ವಿ, ರವಿಚಂದ್ರನ್ ಅವರ ಆಗಮದಿಂದ. ಅವರ ಚಿತ್ರರಂಗದ ಅನುಭವದ ಮಾತುಗಳು ಅತ್ಯಂತ ಆಕರ್ಷಣೀಯವಾಗಿದ್ದವು. ಹಾಗೂ ಅವರ ಹಾಡುಗಳಿಗೆ ಸ್ವರ್ಧಿಗಳು ಧ್ವನಿಯಾಗಿದ್ದು ರವಿಮಾಮನಿಗೂ ಖುಷಿ ತಂದಿತ್ತು. ಇವೆಲ್ಲದುದರ ಜೊತೆಗೆ ಹಳೆಯ ಗಾಯಕಿಯರ ಬಗ್ಗೆ ಹಾಗೂ ಇತ್ತೀಚಿಗೆ ನಮ್ಮನ್ನು ಅಗಲಿ, ಕನ್ನಡ ಚಿತ್ರರಂಗವನ್ನೇ ಒಂದರ್ಥದಲ್ಲಿ ಬರಿದಾಗಿಸಿದ ನಟ ಪುನೀತ್ ರಾಜಕುಮಾರ್ ಅವರ ಬಗೆಗಿನ ರವಿಚಂದ್ರನ್ ಅವರ ಮಾತು ಉಪಸ್ಥಿತರಿದ್ದ ಎಲ್ಲರನ್ನೂ ಭಾವುಕರನ್ನಾಗಿಸಿತ್ತು.

ಕ್ರೇಜಿಸ್ಟಾರ್ ಹೇಳಿದಂತೆ, “ಪುನೀತ್ ರಾಜಕುಮಾರ್ ನಮಗೆಲ್ಲಾ ಒಂದು ಪಾಠ ಕಲಿಸಿ ಹೋಗಿದ್ದಾರೆ. ನಾಳೆ ಅನ್ನುವುದು ಬರಿ ಕನಸು ಮತ್ತು ಆಸೆ ಅಷ್ಟೇ ಭರವಸೆಯಂತೂ ಅಲ್ಲ ಅದು. ಯಾವಾಗ ಬೇಕಾದರೂ ಮನುಷ್ಯ ಗುಡ್ ಬೈ ನೂ ಹೇಳದೇ ಹೊರಟು ಹೋಗುತ್ತಾನೆ. ಅಪ್ಪು ಗುಡ್ ಬೈ ನೂ ಹೇಳದೇ ಹೊರತು ಹೋಗಿದ್ದಾರೆ. ಎಷ್ಟು ಹಣ ಸಂಪಾದನೆ ಮಾಡಿ ಏನಾಗಬೇಕು. ಈ ತರ ಪ್ರಪಂಚ ಇರಬೇಕಾದ್ರೆ ನಮಗೆ ಇನ್ನೇನು ಬೇಕು, ನಗ್ರಿ, ಚೆನ್ನಾಗಿರ್ರಿ”. ಎಂದರು. ಈ ಮಾತು ಎಷ್ಟು ಸತ್ಯ ಅಲ್ವಾ? ನಮ್ಮೆಲ್ಲರ ಜೀವನಕ್ಕೂ ಖಂಡಿತ ಅಪ್ಲೈ ಆಗತ್ತೆ ಅಲ್ವಾ ಸ್ನೇಹಿತರೆ!
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...