ಕನ್ನಡ ಕಿರುತೆರೆ ಲೋಕದ ಖ್ಯಾತ ಮತ್ತು ನಂಬ ರ್ ವನ್ ಪಟ್ಟ ಅಲಂಕರಿಸಿ ಹೆಸರುವಾಸಿಯಾಗಿರುವ ನಿರೂಪಕಿ ಎಂದರೆ ಅನುಶ್ರೀ ಅವರು. ಹೌದು ನಟಿ ನಿರೂಪಕಿ ಅನುಶ್ರೀ ಅವರು ಕರ್ನಾಟಕದಲ್ಲಿ ಎಷ್ಟೆಲ್ಲ ಜನಪ್ರಿಯತೆ ಪಡೆದಿದ್ದಾರೆ ಎಂಬುದು ತಮಗೆಲ್ಲರಿಗೂ ಕೂಡ ತಿಳಿದಿದೆ. ಹೌದು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಕನ್ನಡದ ಬಹುಬೇಡಿಕೆಯ ಹಾಗೂ ದುಬಾರಿ ನಿರೂಪಕಿ ಎಂದೆ ಹೇಳಬಹುದು. ಹೌದು ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹಲವಾರು ರಿಯಾಲಿಟಿ ಶೋಗಳ ಹಲವು ಸೀಸನ್ ಗಳನ್ನು ಅನುಶ್ರೀ ಯವರು ನಿರೂಪಣೆ ಮಾಡಿಕೊಂಡು ಬರುತ್ತಿದ್ದು ಜೀ ಕನ್ನಡ ವಾಹಿನಿಯಲ್ಲಿ ಫಿಕ್ಸ್ ಆಗಿ ಬಿಟ್ಟಿದ್ದಾರೆ ಎಂದೇ ಹೇಳಬಹುದು.

ಇನ್ನು ನಾವು ಗಮನಿಸಿ ಬೇಕಾದ ವಿಚಾರವೆಂದರೆ ಅನುಶ್ರೀ ಅವರಿಗೆ ಯಶಸ್ಸು ಎಂಬುದು ಒಂದೇ ಸಲ ಸಿಕ್ಕಿದ್ದಲ್ಲ. ತಾವು ಹುಟ್ಟಿ ಬೆಳೆದ ಊರಾದ ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ನೆಲೆನಿಂತ ಗಟ್ಟಿಗಿತ್ತಿ ನಿರೂಪಕಿ ಅನುಶ್ರೀ ಯವರು. ನಿರೂಪಣೆ ಕೆಲಸ ಮಾಡುತ್ತಾ ದಶಕಗಳನ್ನು ಕಳೆದಿರುವ ಅನುಶ್ರೀ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿರುವುದು ವಿಶೇಷ. ತುಂಬ ಚೆನ್ನಾಗಿ ಡಾನ್ಸ್ ಮಾಡುವ ಈ ಮಂಗಳೂರು ಚೆಲುವೆ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಯೂ ಕೂಡ ಆಗಿದ್ದರು. ಕಿರುತೆರೆಯಲ್ಲಿ ಸದಾ ಕಾಣಿಸಿಕೊಳ್ಳುವ ಇವರ ಜನಪ್ರಿಯತೆ ಯಾವ ಸಿನಿ ಕಲಾವಿದರಿಗಿಂತ ಕಡಿಮೆ ಏನಿಲ್ಲ ಎಂದರೆ ನೀವು ನಂಬಲೇ ಬೇಕು. ಅಲ್ಲದೇ ಕನ್ನಡದಲ್ಲಿ ನಿರೂಪಕಿ ಎಂದಾಕ್ಷಣ ಪ್ರತಿಯೊಬ್ಬರಿಗೂ ಅನುಶ್ರೀ ಅವರು ನೆನಪಾಗಿ ಬಿಡುತ್ತಾರೆ.

ಪಟ ಪಟ ಅಂತ ಮಾತನಾಡುತ್ತಾ ಎಲ್ಲರ ಮುಖದಲ್ಲೂ ನಗು ಮೂಡಿಸುವ ಇವರ ಬದುಕಲ್ಲೂ ಕಣ್ಣೀರಿನ ಕಥೆಯಿದ್ದು ಈ ಬಗ್ಗೆ ಹಲವು ಬಾರಿ ಸ್ವತಃ ಅನುಶ್ರೀ ಅವರೇ ಕೆಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಮಂಗಳೂರಿನ ಈ ಬೆಡಗಿಗೆ ಕುಟುಂಬಕ್ಕೆ ಸಹಾಯವಾಗುವಂತೆ ಏನಾದರೂ ಕೆಲಸ ಮಾಡಬೇಕೆಂಬ ಆಸೆ ಇತ್ತು ಎನ್ನುವುದಕ್ಕಿಂತ ಹೆಚ್ಚಾಗ ಅನಿವಾರ್ಯತೆ ಇತ್ತು ಎಂದೇ ಹೇಳಬಹುದು. ಮೊದಮೊದಲು ಮಂಗಳೂರಿನ ಲೋಕಲ್ ಚಾನಲ್ ವೊಂದರಲ್ಲಿ ಅಂತ್ಯಾಕ್ಷರಿ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದ ಅನುಶ್ರೀ ಈ ಕಾರ್ಯಕ್ರಮಕ್ಕೆ ಜನರು ಕರೆ ಮಾಡಿ ಅನುಶ್ರೀ ಅವರ ಜೊತೆ ಅಂತ್ಯಾಕ್ಷರಿ ಆಡಬೇಕಿತ್ತು.

ಅ್ಯಂಕರ್ ಅನುಶ್ರೀಗೆ ಈತ ಫೇವರೇಟ್, ಯಾರದು?

ಈ ಕಾರ್ಯಕ್ರಮ ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ವರ್ಷಗಟ್ಟಲೇ ಈ ಕಾರ್ಯಕ್ರಮವನ್ನು ಅನುಶ್ರೀ ಅವರೇ ನಡೆಸಿಕೊಟ್ಟಿದ್ದರು. ಇದನ್ನು ನೋಡಿದ ಕನ್ನಡದ ಪ್ರಖ್ಯಾತ ವಾಹಿನಿಯೊಂದು ಅನುಶ್ರೀಗೆ ಕರೆ ಮಾಡಿ ಆಡಿಷನ್‌ ನೀಡುವಂತೆ ಹೇಳಿದ್ದು ಏನೂ ಯೋಚನೆ ಮಾಡದೆ ಬೆಂಗಳೂರಿಗೆ ಹೋಗಲು ಅನುಶ್ರೀ ನಿರ್ಧರಿಸಿ ಬಿಟ್ಟರು. ಆ ಶೋಗೆ ಆಯ್ಕೆಯಾಗುತ್ತೇನೆಯೋ ಇಲ್ಲವೋ ಎಂದೂ ಕೂಡ ಅನುಶ್ರೀ ಯೋಚನೆ ಮಾಡದೆ ಕೆಂಪು ಬಸ್ಸು ಹತ್ತಿ ಬೆಂಗಳೂರಿಗೆ ಬಂದು ಇಳಿದು ಬಿಟ್ಟರು.

ಹೀಗೆ ಬೆಂಗಳೂರಿಗೆ ಬಂದ ಅನುಶ್ರೀ ಅವರು ಮೊದಲು ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು ಅನುಶ್ರೀ ಅವರು ನನಗೆ ಚಾನೆಲ್‌ ದೊಡ್ಡ ಮೊತ್ತ ಸಿಗಲಿದೆ. ನನ್ನ ಕುಟುಂಬಕ್ಕೆ ಇನ್ಯಾವುದೇ ರೀತಿಯಲ್ಲಿ ತೊಂದರೆ ಇರೋದಿಲ್ಲ ಎಂದೇ ಭಾವಿಸಿದ್ದರು .ಆದರೆ ಪ್ರತಿ ಸಂಚಿಕೆಗೆ ಕೇವಲ 250 ರೂಪಾಯಿ ಎಂದಾಗ ಬೇರೆ ಪಾರ್ಟ್ ಟೈಮ್ ಕೆಲಸ ಮಾಡದೆ ವಿಧಿಯಿರಲಿಲ್ಲ.

Anchor Anushree HOT photoshoot || Kannada actress hot bikini || sinima 101 - YouTube

ಹೀಗಾಗಿ ಹುಟ್ಟುಹಬ್ಬದ ಪಾರ್ಟಿಗಳಲ್ಲೂ ಸಹ ಅನುಶ್ರೀ ನಿರೂಪಣೆ ಮಾಡಿದ್ದು ನಂತರ ಸಾಲು ಸಾಲು ರಿಯಾಲಿಟಿ ಕಾರ್ಯಕ್ರಮಗಳು ಕಾಮಿಡಿ ಕಾರ್ಯಕ್ರಮಗಳು ಹಾಗೂ ಲೈವ್ ಇವೆಂಟ್ ಸೇರಿದಂತೆ ಅನೇಕ ರೀತಿಯ ರ್ಯಕ್ರಮದಲ್ಲಿ ನಿರೂಪಣೆ ಮಾಡುವ ಮೂಲಕ ಇದೀಗ ದೊಡ್ಡ ಎತ್ತರಕ್ಕೆ ಬೆಳಿದು ನಿಂತಿದ್ದಾರೆ ಅನುಶ್ರೀಯವರು.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!