ಹೌದು ಪಕ್ಕದ ಟಾಲಿವುಡ್​ ಸಿನಿಮಾರಂಗದಲ್ಲಿ ತಮ್ಮ ಲುಕ್ಸ್​ ಹಾಗೂ ಸಕತ್ ನಟನೆಯ ಮೂಲಕ ಈಗಾಗಲೇ ತಮ್ಮದೇ ಛಾಪು ಮೂಡಿಸಿರುವ ನಾಯಕಿ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅವರು ಇಂದು ಮತ್ತೆ ಕನ್ನಡ ಜನತೆಯ ಮನ ಗೆದ್ದಿದ್ದಾರೆ. ಜೊತೆಗೆ ಅಭಿಮಾನಿಗಳ ಹೃದಯ ಕೂಡ ಗೆದ್ದಿದ್ದಾರೆ. ಹೌದು ಮಕರ ಸಂಕ್ರಾಂತಿ ಹಬ್ಬದ ದಿನವಾದ ಇಂದು, ಪ್ರೀತಿಯಿಂದ ಕನ್ನಡದಲ್ಲೇ ಎಲ್ಲರಿಗೂ ಶುಭ ಕೋರಿದ್ದಾರೆ. ಶುಭಕೋರುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು ಮಾಡಿದ್ದಾರೆ.

Anushka-Shetty

ನಟಿ ಅನುಷ್ಕಾ ಶೆಟ್ಟಿ ಮತ್ತೆ ಕನ್ನಡ ಭಾಷೆಯ ಪ್ರೇಮ ಮೆರೆದಿರುವುದಕ್ಕೆ, ಸಾಕಷ್ಟು ಕನ್ನಡಿಗರು ನಟಿಗೂ  ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿ, ಸಖತ್​ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ಅನುಷ್ಕಾ ಶೆಟ್ಟಿಯವರು, ತಮ್ಮ ‘ನಿಶ್ಯಬ್ಧಂ’ ಸಿನಿಮಾದ ಬಳಿಕ, ಬೇರೆ ಒಂದಷ್ಟು ಕಥೆಗಳನ್ನ ಕೇಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಹಾಗೇನೇ ತೆಲುಗಿನ ಸೂಪರ್​ ಸ್ಟಾರ್​ ನಟ ಮಹೇಶ್​ ಬಾಬು ಅಭಿನಯ ಮಾಡಿರುವ ‘ಸರ್ಕಾರಿ ವಾರಿ ಪಾಠ’ ಚಿತ್ರದಲ್ಲಿ ಕೂಡ ನಟಿ ಅನುಷ್ಕಾ ಶೆಟ್ಟಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿಬರುತ್ತಿದೆ.

Anushka-Shetty

ಇದು ನಿಜವಾದಲ್ಲಿ, ಈ ಹಿಂದೆ 2010 ರಲ್ಲಿ ‘ಖಲೇಜಾ’ ಎನ್ನುವ ಸಿನಿಮಾ ತೆರೆಕಂಡ ನಂತರ, ಮತ್ತೆ ನಟಿ ಅನುಷ್ಕಾ ಶೆಟ್ಟಿ ಹಾಗೂ ನಟ ಮಹೇಶ್​ ಬಾಬು ಹತ್ತ ವರ್ಷಗಳ ಬಳಿಕ ಇದೀಗ ಒಟ್ಟಿಗೆ ನಟನೆ ಮಾಡಿದ ಹಾಗೆ ಆಗುತ್ತದೆ. ಏನೇ ಇರಲಿ ನಮ್ಮ ಕನ್ನಡತಿ ಅನುಷ್ಕಾ ಶೆಟ್ಟಿಗೆ ಹೆಚ್ಚು ಯಶಸ್ಸು ಸಿಗಲಿ ಎಂದು ಕಾಮೆಂಟ್ ಮಾಡಿ, ಮತ್ತು ತಪ್ಪದೆ ಎಲ್ಲರೂ ಈ ಪೋಸ್ಟ್ ಶೇರ್ ಮಾಡಿ ಧನ್ಯವಾದಗಳು..

Anushka-Shetty2

VIDEOS>>>>

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •