ಬಾಲಿವುಡ್ ಸೆಲೆಬ್ರಿಟಿ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಶಿರಸಾನದಲ್ಲಿ (ತಲೆ ಕೆಳಗೆ ಕಾಲು ಮೇಲೆ ಮಾಡಿ ನಿಲ್ಲುವುದು)ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಅಚ್ಚರಿ ಮೂಡಿಸಿದ್ದಾರೆ.

ಗರ್ಭಿಣಿಯಾಗಿದ್ದಾಗ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಅಧಿಕ ಭಾರ ಎತ್ತುವುದು, ಜೋರಾಗಿ ಓಡುವುದು, ಬಿರುಸಿನ ವ್ಯಾಯಾಮ ಇವೆಲ್ಲಾ ಗರ್ಭಿಣಿಯರಿಗೆ ಹೊಟ್ಟೆಯೊಳಗಿನ ಮಗುವಿನ ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಸೂಕ್ತವಲ್ಲ.

ಹಾಗಂತ ಏನೂ ವ್ಯಾಯಾಮ ಮಾಡಲೇಬಾರದೇ, ಮಾಡುವುದಾದರೆ ಏನು ಮಾಡಬಹುದು, ಏನು ಮಾಡಬಾರದು ಎಂಬುವ ಪ್ರಶ್ನೆ ಅನೇಕ ಗರ್ಭಿಣಿಯರನ್ನು ಕಾಡುತ್ತದೆ. ಅದಕ್ಕೆ ಉತ್ತರ ಎಂಬಂತಿದೆ ಅನುಷ್ಕಾರ ಈ ಯೋಗಾ ಭಂಗಿ.

ಶಿರಸಾನ ಬಗ್ಗೆ ಅನುಷ್ಕಾರ ಮಾತು

‘ಯೋಗ ಎಂಬುವುದು ನನ್ನ ಜೀವನದ ಅಂಗವಾಗಿದೆ. ನನಗೆ ನನ್ನ ಡಾಕ್ಟರ್ ಗರ್ಭಿಣಿಯಾಗುವ ಮೊದಲು ಯಾವೆಲ್ಲಾ ಆಸನಗಳನ್ನು ಮಾಡುತ್ತಿದ್ದೆನೋ ಅವುಗಳನ್ನು ಈಗಲೂ ಮಾಡಬಹುದು . ಆದರೆ ಟ್ವಿಸ್ಟಿಂಗ್, ಬಾಗುವುದು ಇವೆಲ್ಲಾ ಬೇಡ ಎಂಬ ಸಲಹೆ ನೀಡಿದರು. ಈ ಯೋಗವನ್ನು ನನ್ನ ನಾನು ನನ್ನ ಪತಿಯ ಸಹಾಯ ಪಡೆದುಕೊಂಡು ಮಾಡಿದ್ದೇನೆ. ಯೋಗ ಟೀಚರ್‌ ನನಗೆ ವರ್ಚ್ಯೂಯಲಿ(ಆನ್‌ಲೈನ್‌ನಲ್ಲಿ) ನನ್ನ ಜೊತೆ ಇದ್ದು ಮಾರ್ಗದರ್ಶನ ನೀಡುತ್ತಿದ್ದರು ‘ ಎಂದು ಹೇಳಿದ್ದಾರೆ.

Anushka-Sharma

ಎಲ್ಲಾ ಗರ್ಭಿಣಿಯರು ಈ ಶಿರಾಸನ ಮಾಡಬಹುದೇ?

ಖಂಡಿತ ಇಲ್ಲ, ಏಕೆಂದರೆ ನೀವು ಯಾವುದೇ ವ್ಯಾಯಾಮ ಮಾಡುವ ಮುನ್ನ ನಿಮ್ಮ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಅಲ್ಲದೆ ಈಜುವುದಾಗಲಿ, ಈ ರೀತಿಯ ವ್ಯಾಯಾಮ ಮಾಡುವಾಗ ಆಗಲಿ ನಿಮ್ಮ ಜೊತೆ ಯಾರಾದರೂ ಇರಲೇಬೇಕು, ಇಲ್ಲದಿದ್ದರೆ ಇಂಥ ಸಾಹಸ ಮಾಡಬೇಡಿ. ಯೋಗ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು, ಆದರೆ ಕೆಲವೊಂದು ಯೋಗಾಸನಗಳು ಗರ್ಭಿಣಿಯರಿಗೆ ಅಷ್ಟು ಸೂಕ್ತವಲ್ಲ, ಆದ್ದರಿಂದ ಅನುಷ್ಕಾ ಶರ್ಮ ಮಾಡಿದ್ದಾರೆ ಅಂತ ನೀವು ಮಾಡುವ ಪ್ರಯತ್ನ ಮಾಡಬೇಡಿ.

ಶಿರಸಾನದ ಪ್ರಯೋಜನಗಳು ಶಿರಸಾನ ತಲೆಗೆ ರಕ್ತ ಸಂಚಾರ ಹೆಚ್ಚಿಸುತ್ತದೆ. ಇದನ್ನು ಮಾಡುವ ಉದರಿಂದ ಕಣ್ಣಿಗೆ, ಕಿವಿಗೆ ಸರಿಯಾಗಿ ರಕ್ತ ಸಂಚಾರವಾಗುವುದರಿಂದ ತುಂಬಾ ಒಳ್ಳೆಯದು. ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮಾನಸಿಕ ಆರೋಗ್ಯವನ್ನು ಮಾಡುವುದು.

ಗರ್ಭಿಣಿಯರಿಗೆ ಮಾಡಬಹುದಾದ ಸೇಫ್‌ ಯೋಗಾಸನಗಳು ಬಟರ್‌ಫ್ಲೈ ಪೋಸ್‌ (ಚಿಟ್ಟೆ ಪೋಸ್) ಬೆಕ್ಕು-ಹಸು ಭಂಗಿ ಭುಜಾಂಗಾಸನ ಒಂದು ಬದಿಗೆ ತಿರುಗಿ ಮಲಗಿ ಮಾಡುವ ಯೋಗಾಸನ ತಾಡಾಸನ ಶವಾಸನ ವೀರ ಭದ್ರಾಸನ ಯಾವಾಗ ಯೋಗ ಪ್ರಾರಂಭಿಸಬಹುದು? ಎರಡನೇ ತ್ರೈಮಾಸಿಕದಿಂದ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಒಂದು ವೇಳೆ ಐವಿಎಫ್‌ ಆದರೆ ಯೋಗಾ ಟೀಚರ್‌ 20 ವಾರಗಳ ಬಳಿಕ ಮಾಡಲು ಸಲಹೆ ನೀಡುತ್ತಾರೆ. ಆದರೆ ಉಸಿರಾಟದ ವ್ಯಾಯಾಮವನ್ನು ಯಾವುದೇ ಸಮಯದಲ್ಲೂ ಮಾಡಬಹುದು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •