ಆಂಕರ್ ಅನುಶ್ರೀ

ಅಂತೂ ಇಂತೂ ಮದುವೆಗೆ ಸಜ್ಜಾದ್ರು ಆಂಕರ್ ಅನುಶ್ರೀ: ಹುಡುಗ ಯಾರು ಗೊತ್ತಾ..?

Home

ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಕಿರುತೆರೆಯ ಬಹು ಬೇಡಿಕೆಯ ಆಂಕರ್ ಅನುಶ್ರೀ ಅವರು ಹಲವು ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಕನ್ನಡದ ಖ್ಯಾತ ನಿರೂಪಕಿ ಎಂದರೆ ಅದು ಅನುಶ್ರೀ.. ಅನುಶ್ರೀ ಅವರ ಮಾತುಗಳು ಎಂದರೆ ತುಂಬಾ ಜನಕ್ಕೆ ಇಷ್ಟ. ಅನುಶ್ರೀ ಅವರನ್ನು ನೋಡುವುದಕ್ಕಾಗಿಯೇ ತುಂಬಾ ಜನ ರಿಯಾಲಿಟಿ ಶೋಗಳನ್ನು ವೀಕ್ಷಿಸುತ್ತಾರೆ.

ಸರಿಗಮಪ, ಡಿಕೆಡಿ,  ಡ್ರಾಮಾ ಜೂನಿಯರ್ಸ್ ಸೇರಿದಂತೆ ಹತ್ತು ಹಲವು ರಿಯಾಲಿಟಿ ಶೋಗಳನ್ನು ಅನುಶ್ರೀ ಅವರು ನಡೆಸಿಕೊಟ್ಟಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರು. ಯಾವ ಶೋ ನಡೆಸಿಕೊಡುತ್ತಿದ್ದಾರೆ. ಎಲ್ಲಿದ್ದಾರೆ, ಮುಂದಿನ ಅವರ ಪ್ರಾಜೆಕ್ಟ್ ಏನು ಎಂಬ ಬಗ್ಗೆಯೆಲ್ಲ ಅಪ್ ಡೇಟ್ ಮಾಡುತ್ತಿರುತ್ತಾರೆ
ಅನುಶ್ರೀ ಕದ್ದು ಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡ್ರ ..? | ANUSHREE | ENGAGEMENT |  ANCHOR ANUSHREE | ACTRESS - YouTube

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಆಂಕರ್ ಅನುಶ್ರೀ ಅವರು ತಾವು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ ಅಂತ ಕನಸು ಕಂಡಿರಲಿಲ್ಲ. ಹುಟ್ಟಿದಾಗಿನಿಂದ ತಾಯಿಯ ಜೊತೆಗೆ ಬೆಳೆದ ಅನುಶ್ರೀ ಅವರಿಗೆ ಉತ್ತಮವಾದ ಕೆಲಸ ಬೇಕು ಎಂಬ ಆಸೆಯಿತ್ತು. ಅನುಶ್ರೀ ಅವರ ತಾಯಿಗೆ ತನ್ನ ಮಗಳು ಚೆನ್ನಾಗಿ ಓದಿ, ಸುಖವಾಗಿ ಬಾಳಬೇಕು ಎಂದು ಕನಸು ಕಂಡಿದ್ದರು. ನರ್ಸ್ ಆಗಬೇಕೆಂದು ಬೆಂಗಳೂರಿಗೆ ಬಂದ ಅವರಿಗೆ ಸ್ಯಾಂಡಲ್ವುಡ್ ಸ್ವಾಗತ ಕೋರಿತ್ತು.

ಸಣ್ಣ ಸಣ್ಣ ಪ್ರೋಗ್ರಾಮ್ ಗಳಲ್ಲಿ ನಟಿಸಲು ಪ್ರಾರಂಭಿಸಿದ ಅವರು ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಅನುಶ್ರೀ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಕಸ್ತೂರಿ ಚಾನೆಲ್ ಮೂಲಕ ನಿರೂಪಕಿ ಆದ ಅನುಶ್ರೀ ಇಂದು ಕರ್ನಾಟಕದ ಬಹುಬೇಡಿಕೆಯ ಆಂಕರ್ ಆಗಿದ್ದಾರೆ. ಇನ್ನು ಇದೀಗ ಅನುಶ್ರೀ ಅವರು ಮದುವೆಯಾಗಲು ಮುಂದಾಗಿದ್ದಾರೆ. ಅವರ ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ ಮುಗಿದಿದ್ದು, ಇನ್ನೇನು ಈ ವರ್ಷ ಮದುವೆಯಾಗುತ್ತದೆ ಎಂದು ತಿಳಿದು ಬಂದಿದೆ. ಹುಡುಗ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿದ್ದಾರೆ ಎಂದು ಮಾಹಿತಿ ಇದೆ. ಆದರೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...