ಅನುಪಮಾ ಗೌಡರವರು ಅಕ್ಕ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಿತರಾದರು . ಅವರು ಈ ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಹಿಸುವುದರ ಮೂಲಕ ಸೈ ಎನಿಸಿಕೊಂಡರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ ೫ರಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾದರು.

ಇತ್ತೀಚಿಗೆ ತೆರೆಕಂಡ ‘ಆ ಕರಾಳ ರಾತ್ರಿ’ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಬೆಳ್ಳಿತೆರೆಗೆ ರಂಗಪ್ರವೇಶ ಮಾಡಿದರು. ಇವರು ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ‘ತ್ರಯಂಬಕಂ’ ಎಂಬ ಚಿತ್ರದಲ್ಲೂ ಕೂಡ ನಟಿಸಿದ್ದಾರೆ. ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ‘ಮಜಾ ಭಾರತ’ ದಲ್ಲಿ ನಿರೂಪಕಿಯಾಗಿಯಾಗಿದ್ದಾರೆ.

ಸದ್ಯ ನಿರುಪಮಾ ಗೌಡ ‘ರಾಜಾ- ರಾಣಿ’ ಶೋನಲ್ಲಿ ನಟಿ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ. 12 ಜೋಡಿಗಳ ಮಧ್ಯೆ ನಡೆಯುವ ಶೋ ಇದಾಗಿದ್ದು. ಇತರ ರಿಯಾಲಿಟಿ ಶೋಗಳಿಗಿಂತ ‘ರಾಜಾ ರಾಣಿ’ ಶೋ ತುಂಬ ವಿಭಿನ್ನವಾಗಿದೆ.

ಅನುಪಮಾಗೆ ಈ ಹಿಂದೆ ಬಿಗ್‌‌‌ಬಾಸ್‌ ಕಾರ್ಯಕ್ರಮದ ಸಂಚಿಕೆಯಲ್ಲಿ ಮನೆಯ ಸದಸ್ಯರುಗಳಿಗೆ ತಮ್ಮ ಜೀವನದಲ್ಲಿ ನಡೆದಿರುವ ಘಟನೆ ಮತ್ತು ಅದು ಇಲ್ಲಿಯವರೆಗೂ ಯಾರಿಗೂ ತಿಳಿಯದೆ ಇರುವ ರಹಸ್ಯವನ್ನು ಹಂಚಿಕೊಳ್ಳುವ ವಿಶೇಷ ಚಟುವಟಿಕೆಯನ್ನು ನೀಡಲಾಗಿತ್ತು. ಅದರಂತೆ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದಿದ್ದ ರಹಸ್ಯ ಕಥೆಗಳನ್ನು ಬಿಗ್ ಬಾಸ್ ಕ್ಯಾಮರಾ ಮುಂದೆ ಬಿಚ್ಚಿಡಬೇಕಾಗಿದ್ದು ಅದೇ ಟಾಸ್ಕ್.

“ಒಂದುವರೆ ವರ್ಷದ ಹಿಂದೆ ಕೆಲವು ಕಾರಣಗಳಿಂದಾಗಿ ನನ್ನ ಮನಸಿಗೆ ಬಹಳ ತುಂಬಾ ನೋವಾಗಿತ್ತು, ನಾನು ತುಂಬಾ ಹತಾಶೆಗೊಂಡಿದ್ದೆ ನನ್ನ ಬಳಿ ಯಾರೂ ಇಲ್ಲ, ಏನೂ ಇಲ್ಲ ಎಂದು ಅನಿಸುತಿತ್ತು. ಆಗ ನಾನು ಬದುಕಬಾರದು ಎಂದು ನಿರ್ಧಾರ ಮಾಡಿ ನಿದ್ದೆ ಮಾತ್ರಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ನಾನು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾಗ ನೇಹಾ ನನ್ನ ಜೊತೆಗೆ ಇಡೀ ದಿನ ಇದ್ದು ನನ್ನ ಉಳಿಸಿದಳು, ಆಕೆ ನನ್ನನ್ನ ಆರೈಕೆ ಮಾಡಿದಳು. ಆಕೆಯಿಂದ ನನಗೆ ಪುನರ್ಜನ್ಮ ಲಭಿಸಿತು.ಹೀಗಾಗಿ ನನಗೆ ನೇಹಾ ಅಂದ್ರೆ ಬಹಳ ಗೌರವವಿದೆ.”

“ಆಗ ನಾನು ಇದ್ದ ರೀತಿ ಈಗ ಇಲ್ಲ. ತುಂಬಾ ಸ್ಟ್ರಾಂಗ್ ಆಗಿದ್ದೀನಿ, ಸಣ್ಣ ಸಣ್ಣ ವಿಷಯಕ್ಕೆಲ್ಲ ಈಗ ನಾನು ಹತಾಶೆಗೊಳ್ಳೋದಿಲ್ಲ. ನನ್ನನ್ನ ನಾನೇ ಪ್ರೀತಿಸಲು ಶುರು ಮಾಡಿದ್ದೇನೆ.. ಇದೇ ನನ್ನ ನನ್ನ ಜೀವನದ ರಹಸ್ಯ” ಎಂದು ಅನುಪಮಾ ಗೌಡ ಹೇಳಿದ್ದಾರೆ.

ಬಿಗ್ ಬಾಸ್ ನೀಡಿದ ರಹಸ್ಯವೊಂದನ್ನು ಬಹಿರಂಗಪಡಿಸುವ ಚಟುವಟಿಕೆಯಲ್ಲಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತ ಅನುಪಮಾ ‘ಒಂದೂವರೆ ವರ್ಷದ ಹಿಂದೆ ಜೀವನವೇ ಬೇಡ ಎನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಟ್ಯಾಬ್ಲೆಟ್ಸ್ ತೆಗೆದುಕೊಂಡಿದ್ದೆ. ಆದರೆ ನೇಹಾ (ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ) ನನ್ನ ಕಾಪಾಡಿದಳು.

ಅವತ್ತು ಇಡೀ ದಿನ ನನ್ನ ಜತೆ ಇದ್ದು ನೋಡಿಕೊಂಡಳು. ಅವಳನ್ನು ನನಗೆ ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು ಎಂದು ಹೇಳಿಕೊಟ್ಟಳು. ಅದಾದ ಮೇಲೆ ನಾನು ಹಾಗೆಯೇ ಬದುಕುತ್ತಿದ್ದೇನೆ’ ಎಂದು ಅನುಪಮಾ ರಹಸ್ಯ ಬಾಯ್ಬಿಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •