ಇಡೀ ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ ಧಾರಾವಾಹಿ ಅಂದರೆ ಅದು ಜಿ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಜೊತೆ ಜೊತೆಯಲಿ ಧಾರಾವಾಹಿ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಯಾವ ಕನ್ನಡ ಧಾರಾವಾಹಿ ಕೂಡ ತಂದುಕೊಡದ TRP ಅನ್ನು ಜಿ ಕನ್ನಡ ವಾಹಿನಿಗೆ ತಂದುಕೊಟ್ಟ ಧಾರಾವಾಹಿ ಅಂದರೆ ಅದೂ ಜೊತೆ ಜೊತೆಯಲಿ ಧಾರಾವಾಹಿ ಆಗಿದೆ. ಬರಿ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೇ ದೊಡ್ಡ ಸುದ್ದಿಯಾಗಿತ್ತು ಈ ಧಾರಾವಾಹಿ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ವೀಕ್ಷಣೆ ಆಗುತ್ತಿತ್ತು ಮತ್ತು ಧಾರಾವಾಹಿಯಲ್ಲಿ ನಟನೆ ಮಾಡುವ ನಟ ಮತ್ತು ನಟಿಯರು ಜನರ ಮೆಚ್ಚುಗೆಯನ್ನ ಗಳಿಸಿಕೊಳ್ಳುವಲ್ಲಿ ಯಶಸ್ಸನ್ನ ಸಾಧಿಸಿದ್ದರು.

ಇನ್ನು ಈ ಧಾರಾವಾಹಿಯ ಕೇಂದ್ರ ಬಿಂಧು ಅಂದರೆ ಆರ್ಯವರ್ಧನ್ ಪಾತ್ರದಲ್ಲಿ ನಟನೆ ಮಾಡುತ್ತಿದ್ದ ಅನಿರುಧ್ ಮತ್ತು ಅನು ಸಿರಿಮನೆ ಪಾತ್ರವನ್ನ ಮಾಡುತ್ತಿರುವ ಮೇಘನಾ ಶೆಟ್ಟಿ ಎಂದು ಹೇಳಬಹುದು. ಇನ್ನು ಈ ಧಾರಾವಾಹಿ ಹೊಸ ರೀತಿಯ ಪ್ರೇಮ ಕಥೆಗೆ ಸಾಕ್ಷಿಯಾಗಿದ್ದು ಇದು ಧಾರಾವಾಹಿ ಜಗತ್ತಿನಲ್ಲಿ ಸದ್ಯ ಜನರ ಅಚ್ಚುಮೆಚ್ಚಿನ ಧಾರಾವಾಹಿ ಆಗಿದೆ. ಇನ್ನು ಆರಂಭದಿಂದಲೇ ಇಷ್ಟು ಸಂಚಲನವನ್ನ ಸೃಷ್ಟಿ ಮಾಡಿದ್ದ ಈ ಧಾರಾವಾಹಿ ಸದ್ಯ ಕರ್ನಾಟಕದ ಟ್ರೆಂಡಿಂಗ್ ಆಗಿದೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ಈ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುತ್ತಿದ್ದ ಮೇಘ ಶೆಟ್ಟಿ ಅವರು ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಎಂದು ತಿಳಿದರೆ ನೀವು ಒಮ್ಮೆ ಆಶ್ಚರ್ಯ ಪಡುತ್ತೀರಾ ಎಂದು ಹೇಳಿದರೆ ತಪ್ಪಾಗಲ್ಲ.

Anu-Sirimane

ಹಾಗಾದರೆ ಅನು ಸಿರಿಮನೆ ಪಾತ್ರವನ್ನ ಮಾಡುತ್ತಿರುವ ಮೇಘ ಶೆಟ್ಟಿ ಅವರು ಒಂದು ದಿನದ ಎಪಿಸೋಡ್ ಗೆ ಎಷ್ಟು ಸಂಭಾವನೆಯನ್ನ ಪಡೆಯುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಿಮಗೆಲ್ಲ ತಿಳಿದಿರುವ ಹಾಗೆ ಜೊತೆ ಜೊತೆಯಲಿ ಧಾರಾವಾಹಿ ಆರಂಭದಲ್ಲೇ TRP ಅಲ್ಲಿ ಮೊದಲ ಸ್ಥಾನವನ್ನ ಗಳಿಸುವಲ್ಲಿ ಯಶಸ್ಸನ್ನ ಸಾಧಿಸಿತ್ತು.

ಇನ್ನು ಬಂದಿರುವ ಕೆಲವು ಮಾಹಿತಿಯ ಪ್ರಕಾರ ಧಾರಾವಾಹಿಯ ಆರಂಭದಲ್ಲಿ ಅನು ಸಿರಿಮನೆ ಪಾತ್ರವನ್ನ ಮಾಡುತ್ತಿರುವ ಮೇಘ ಶೆಟ್ಟಿ ಅವರು ಪ್ರತಿ ಎಪಿಸೋಡ್ ಗೆ 8 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದರು ಮತ್ತು ಕೆಲವು ಸಮಯದ ಅವರ ಅಮೋಘವಾದ ನಟನೆ ಮತ್ತು ಧಾರಾವಾಹಿಯ ಯಶಸ್ಸಿನ ನಂತರ ಅವರ ಸಂಭಾವನೆ ಕೂಡ ಹೆಚ್ಚು ಮಾಡಲಾಯಿತು. ಇನ್ನು ಈಗ ಮೇಘ ಶೆಟ್ಟಿ ಅವರು ಪ್ರತಿ ಎಪಿಸೋಡ್ ಗೆ ಸುಮಾರು 15 ರಿಂದ 20 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರವನ್ನ ಮಾಡುವ ಅನಿರುಧ್ ಅವರು ಪ್ರತಿ ಎಪಿಸೋಡ್ ಗೆ ಸುಮಾರು 30 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಧಾರಾವಾಹಿ ಯಶಸ್ಸಿನ ನಂತರ ಅನು ಸಿರಿಮನೆ ಅವರ ಸಂಭಾವನೆಯನ್ನ ಕೂಡ ಹೆಚ್ಚು ಮಾಡಲಾಯಿತು ಎಂದು ಕಿರುತೆರೆಯಲ್ಲಿ ಕೇಳಿಬರುತ್ತಿದೆ. ಧಾರಾವಾಹಿಯಲ್ಲಿ ಅನು ಸಿರಿಮನೆ ಅವರು ತಮ್ಮ ಮುಗ್ದತೆ, ಸರಳತೆ, ಅವರ ನಟನೆ ಮತ್ತು ಮಾತು ಜನರ ಮೆಚ್ಚುಗೆಯನ್ನ ಗಳಿಸುವಲ್ಲಿ ಯಶಸ್ಸನ್ನ ಸಾಧಿಸಿದರು ಎಂದು ಹೇಳಬಹುದು. ಸ್ನೇಹಿತರೆ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •