ಅಲ್ಲು ಅರ್ಜುನ್ ನಟನೆಯ ‘ಆರ್ಯ’ ಸಿನಿಮಾ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಹಾಡುಗಳು ಇಂದಿಗೂ ಕೂಡ ಪ್ರಸ್ತುತ. ಈ ಸಿನಿಮಾ ಅಲ್ಲುಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಅವರ ಡಾನ್ಸ್, ಮ್ಯಾನರಿಸಂ ಎಲ್ಲವೂ ಯುವಜನತೆಯನ್ನು ಸೆಳೆದಿತ್ತು. 2004ರಲ್ಲಿ ತೆರೆಕಂಡ ಈ ಸಿನಿಮಾವನ್ನು ಮೊದಲ ಬಾರಿಗೆ ಸುಕುಮಾರ್ ನಿರ್ದೇಶನ ಮಾಡಿದ್ದರು. ಅಲ್ಲು ಅರ್ಜುನ್ ಜೊತೆಗೆ ಅನು ಮೆಹ್ತಾ, ಶಿವ ಬಾಲಾಜಿ ಈ ಚಿತ್ರದಲ್ಲಿ ನಟಿಸಿದ್ದರು.

ಈ ಚಿತ್ರ ಎಷ್ಟು ಹಿಟ್ ಆಯ್ತು ಅಂದರೆ ಬೆಂಗಾಳಿ, ಓಡಿಯಾ, ಸಿಂಹಳ, ತಮಿಳಿನಲ್ಲಿಯೂ ಈ ಚಿತ್ರವನ್ನು ತಯಾರಿಸಿ ರಿಲೀಸ್ ಮಾಡಲಾಯ್ತು. ಅಲ್ಲು ಅರ್ಜುನ್ ಅಭಿನಯದೊಂದಿಗೆ ‘ಆರ್ಯ 2’ ಕೂಡ ಬಂತು. ದಿಲ್ ರಾಜು ಈ ಚಿತ್ರ ನಿರ್ಮಿಸಿದ್ದರು.ಮೊದಲ ಸಿನಿಮಾದಲ್ಲಿಯೇ ಸುಕುಮಾರ್ ಗೆದ್ದಿದ್ದರು. ಇದನ್ನು ಮಣಿರತ್ನಂ ಅವರ ಸಿನಿಮಾಕ್ಕೂ ಕೂಡ ಹೋಲಿಕೆ ಮಾಡಲಾಯ್ತು. ಎಮೋಶನ್, ಸೆಂಟಿಮೆಂಟ್, ಕ್ರೀಜಿನೆಸ್, ಸಾಹಸ, ಲವ್ ಮುಂತಾದ ಅಂಶಗಳನ್ನು ಹೊಂದಿರುವ ಫುಲ್ ಪವರ್ ಪ್ಯಾಕ್ ಸಿನಿಮಾ ‘ಆರ್ಯ’ ಎಂದು ಬಣ್ಣಿಸಲಾಯ್ತು.

anu-mehta

ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತು. ಈ ಸಿನಿಮಾದ ಹೀರೋ ಅಲ್ಲು ಅರ್ಜುನ್ ಈಗ ಹಿಟ್ ಸಿನಿಮಾ ನೀಡುತ್ತಿದ್ದಾರೆ, ಶಿವ ಬಾಲಾಜಿ ಕೂಡ ನಟಿಸುತ್ತಿದ್ದಾರೆ. ಹೀರೋಯಿನ್ ಅನು ಮೆಹ್ತಾ ಏನು ಮಾಡುತ್ತಿದ್ದಾರೆ? ಎಂಬ ಸಂದೇಹ ನಿಮಗಿರಬಹುದು. ಇಲ್ಲಿದೆ ಉತ್ತರ

ಮೊದಲ ಸಿನಿಮಾದಲ್ಲೇ ಭಾರೀ ಯಶಸ್ಸು ಗಳಿಸಿದ ಅನು ಮೆಹ್ತಾ

ಸಹಜ ಸುಂದರಿ ಅನು ಮೆಹ್ತಾಗೆ ‘ಆರ್ಯ’ ಮೊದಲ ಸಿನಿಮಾ. ಆಂಧ್ರದ ಈ ಹುಡುಗಿ, ದೆಹಲಿಯಲ್ಲಿಯೇ ಓದಿದ್ದರು. ಮಾಡೆಲ್ ಆಗಿದ್ದ ಅನು, ಹೀರೋಯಿನ್ ಆಗಿದ್ದೇ ಆಶ್ಚರ್ಯ. ತೆಲುಗು ಮತ್ತು ಕನ್ನಡದಲ್ಲಿ ನಟಿಸಿದ್ದ ಅನು ಆಮೇಲೆ ಚಿತ್ರರಂಗದಿಂದಲೇ ದೂರವಾದರು. ಆಂಧ್ರಪ್ರದೇಶದಲ್ಲಿ ಹುಟ್ಟಿದ್ದ ಈ ಚೆಲುವೆಗೆ ಮೊದಲ ಸಿನಿಮಾವೇ ದೊಡ್ಡ ಯಶಸ್ಸು ನೀಡಿತು. ಇವರ ನಟನೆ ನೋಡಿ ಸಾಕಷ್ಟು ಅವಕಾಶಗಳು ಅರಸಿ ಬಂದವು. ಇವರ ಎರಡನೇ ಸಿನಿಮಾ ‘ನುವ್ವಂಟೆ ನಾಕಿಷ್ಟಂ’. ಈ ಚಿತ್ರದಲ್ಲಿ ಆರ್ಯನ್ ರಾಜೇಶ್ ಹೀರೋ ಆಗಿ ನಟಿಸಿದ್ದರು. 2005ರಲ್ಲಿ ತೆರೆ ಕಂಡ ಈ ಸಿನಿಮಾ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ನೀನಂದ್ರೆ ಇಷ್ಟ’ ಸಿನಿಮಾದ ರಿಮೇಕ್ ಆಗಿತ್ತು.

anu-mehta

ಪುನೀತ್ ಜೊತೆ ನಟಿಸಿದ್ದ ಅನು ಮೆಹ್ತಾ

ಅನು ಮೆಹ್ತಾ ಮೂರನೇ ಸಿನಿಮಾ ‘ಅಜಯ್’. ಮೂರನೇ ಚಿತ್ರದ ಮೂಲಕ ಅನು ಕನ್ನಡಕ್ಕೂ ಕಾಲಿಟ್ಟರು. ಈ ಚಿತ್ರದ ಹೀರೋ ಪುನೀತ್ ರಾಜ್‌ಕುಮಾರ್. ತೆಲುಗು ಸಿನಿಮಾ ‘ಒಕ್ಕುಡು’ದ ರಿಮೇಕ್ ಆಗಿತ್ತು. ‘ಒಕ್ಕುಡು’ನಲ್ಲಿ ಮಹೇಶ್ ಬಾಬು, ಭೂಮಿಕಾ ಚಾವ್ಲಾ ನಟಿಸಿದ್ದರು. ಈ ಚಿತ್ರ ಕೂಡ ಒಳ್ಳೆಯ ಯಶಸ್ಸು ಪಡೆದಿತ್ತು. ಪ್ರಕಾಶ್ ರಾಜ್, ಶ್ರೀನಾಥ್, ದೊಡ್ಡಣ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಕನ್ನಡಿಗರು ಈ ಚಿತ್ರದ ಮೂಲಕ ಅನುರನ್ನು ಸ್ಯಾಂಡಲ್‌ವುಡ್‌ ನಟಿಯಂತೆ ಭಾವಿಸಿದರು. ಸಹಜವಾಗಿ, ಸೈಲೆಂಟ್ ಆಗಿರುವ ಪಾತ್ರಗಳಲ್ಲಿಯೇ ಅನು ಮಿಂಚಿರೋದು ಆಶ್ಚರ್ಯ. ಅನು ಮಾಡಿರುವ ಪಾತ್ರಗಳಲ್ಲಿ ಹಲವು ಸಾಂಪ್ರದಾಯಿಕವುಳ್ಳವಾಗಿವೆ. ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು.

anu-mehta

ಥಿಯೇಟರ್‌ನಲ್ಲಿ ಡಿಸಾಸ್ಟರ್ ಆದ ‘ಹೊಂಗನಸು’

ಅನು ಆಮೇಲೆ ತೆಲುಗಿನಲ್ಲಿ ‘ಮಹರಾಜಶ್ರೀ’, ‘ವೇದುಕ’ ಸಿನಿಮಾದಲ್ಲಿ ನಟಿಸಿದರು. ಆಮೇಲೆ ಕನ್ನಡದಲ್ಲಿ ‘ಹೊಂಗನಸು’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಹೀರೋ ಆಗಿದ್ದರು. ಈ ಚಿತ್ರದಲ್ಲಿ ಅನಂತ್‌ನಾಗ್ ಕೂಡ ತುಂಬ ಮುಖ್ಯವಾದ ಪಾತ್ರ ನಿಭಾಯಿಸಿದ್ದರು. ‘ಗಜ’, ‘ಗಾಳಿಪಟ’ ಸಿನಿಮಾ ಬ್ಲಾಕ್ ಬಸ್ಟರ್ ಆದ ವಾರದ ನಂತರದಲ್ಲಿ ಈ ಚಿತ್ರ ರಿಲೀಸ್ ಆದರೂ ಕೂಡ ಥೀಯೇಟರ್‌ನಲ್ಲಿಯೂ ಜಾಸ್ತಿ ದಿನ ಉಳಿಯಲಿಲ್ಲ, ಒಳ್ಳೆಯ ವಿಮರ್ಶೆ ಕೂಡ ಪಡೆಯಲಿಲ್ಲ. ‘ನಾದಬ್ರಹ್ಮ’ ಹಂಸಲೇಖ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಇದು ಬ್ಲಾಕ್ ಬಸ್ಟರ್ ಆಗದೆ ಡಿಸಾಸ್ಟರ್ ಆಗಿದ್ದು ಮಾತ್ರ ಬೇಸರದ ವಿಷಯ.

ಅಂದು ರೆಸಾರ್ಟ್‌ನಲ್ಲಿ ನಡೆದಿದ್ದೇನು?

‘ಹೊಂಗನಸು’ ಸಿನಿಮಾ ನಂತರದಲ್ಲಿ ಅನು ಮೆಹ್ತಾ ಪತ್ತೆಯೇ ಇಲ್ಲ. ಕಿರುತೆರೆ, ಹಿರಿತೆರೆಯಲ್ಲಿಯೂ ಅನು ಕಾಣಿಸಿಕೊಳ್ಳಲಿಲ್ಲ, ಮಾಧ್ಯಮದ ಮುಂದೆ ಅವರು ಹಾಜರಾಗಲಿಲ್ಲ. ಯಾಕೆ ಇದ್ದಕ್ಕಿದ್ದಂತೆ ಅನು ಚಿತ್ರರಂಗದಿಂದ ದೂರ ಹೋದರು ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಒಮ್ಮೆ ಚೆನ್ನೈನ ರೆಸಾರ್ಟ್‌ನಲ್ಲಿ ಸ್ನೇಹಿತರ ಜೊತೆ ಅನು ತೆರಳಿದ್ದರು. ಅವರ ಸ್ನೇಹಿತರು ಕುಡಿದು ರೆಸಾರ್ಟ್‌ನವರ ಜೊತೆ ಜಗಳ ಆಡಿದ್ದರಂತೆ. ಆಮೇಲೆ ಇದರ ಮ್ಯಾನೇಜರ್ ಇವರ ಸ್ನೇಹಿತರ ಮೇಲೆ ದೂರು ದಾಖಲು ಮಾಡಿದ್ದರು. ಅನುಗೆ ಮದುವೆ ಆಯ್ತಾ? ಇಲ್ಲವಾ? ಎಂಬುದರ ಬಗ್ಗೆಯೂ ಮಾಹಿತಿಯಿಲ್ಲ.

ಅಂತರ್ಜಾದಲ್ಲಿ ಅನು ಬಗ್ಗೆ ಅಷ್ಟಾಗಿ ಮಾಹಿತಿ ಕೂಡ ಸಿಗದಷ್ಟು ಅನು ಭೂಗತರಾಗಿಬಿಟ್ಟಿದ್ದಾರೆ. ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •