ಆದಿಶಕ್ತಿ ಮಹಾಮಾಯಿ ಎಂದು ಹೇಳಿಕೊಂಡಿರುವ ಈ ಶೇಕ್ ಅಮ್ಮನ ಹಿನ್ನಲೆ ಬಗ್ಗೆ ನಿಮಗೆ ತಿಳಿದರೆ ಶಾಕ್ ಆಗೋದು ಪಕ್ಕಾ! ಆಂಟಿಯ ಪ್ಲಾಷ್ ಬ್ಯಾಕ್ ಏನು ಗೊತ್ತಾ?

Home

ಸಾಮಾನ್ಯವಾಗಿ ದೇವರನ್ನು ನಂಬುವ ಜನರು ಈ ಸನ್ಯಾಸಿಗಳನ್ನು, ಋಷಿ ಮುನಿಗಳನ್ನು, ಜ್ಯೋತಿಷಿಗಳನ್ನು ಅದೇ ರೀತಿ ಸ್ವಾಮೀಜಿಗಳನ್ನು ನಂಬುತ್ತಾರೆ. ಸ್ವಾಮೀಜಿಗಳು ಅದೇನೇ ಹೇಳಿದರೂ ಅದನ್ನು ಶಿರಸಾವಹಿಸಿ ಮಾಡುತ್ತಾರೆ. ಜನರ ಈ ನಂಬಿಕೆಗೆ ಸರಿಯಾಗಿ ಸ್ವಾಮೀಜಿಗಳ ರೂಪದಲ್ಲಿ ಅನೇಕರು ಮೋಸ ಮಾಡುತ್ತಿದ್ದಾರೆ. ಇಂತಹ ಅನೇಕ ಘಟನೆಗಳು ನಡೆದರೂ ಜನರು ಮಾತ್ರ ಮತ್ತೆ ಮತ್ತೆ ಮೋಸ ಹೋಗುತ್ತಿದ್ದಾರೆ. ಇದಕ್ಕೆ ಒಂದು ಸಾಕ್ಷಿ ತಮಿಳುನಾಡಿನಲ್ಲಿ ನಡೆದ ಘಟನೆ. ತಮಿಳುನಾದು ಅಂದರೆ ಅಲ್ಲಿ ಸಾಮಾನ್ಯವಾಗಿ ಪೂಜೆ ಪುನಸ್ಕಾರ ಮಾದುವವರು ಹೆಚ್ಚಾಗಿಯೇ ಕಾಣುತ್ತಾರೆ.

ಅದರಲ್ಲೂ ಸ್ವಾಮೀಜಿಗಳನ್ನು ಹೆಚ್ಚಾಗಿ ನಂಬುತ್ತಾರೆ, ಪೂಜಿಸುತ್ತಾರೆ. ಅದೇ ರೀತಿ ಅಲ್ಲಿ ದಿಢೀರ್ ಆಗಿ ಒಂದು ಮಹಿಳೆ ಪ್ರತ್ಯಕ್ಷಳಾಗಿ ಆದಿಶಕ್ತಿ ಮಾತೆಯಾಗಿ ಜನರಿಗೆ ದರ್ಶನ ನೀಡುತ್ತಾಳೆ. ಆ ಮಹಿಳೆಯ ಹೆಸರು ಅಣ್ಣಪೂರ್ಣಿ ಅರಸು ಮಾತೆ. ಒಂದು ದೊಡ್ಡದಾದ ಕುರ್ಚಿ ಮೇಲೆ ಕೂತ ಅಣ್ಣಪೂರ್ಣಿ ಹಣೆ ತುಂಬಾ ಕುಂಕುಮ, ಜರತಾರಿ ರೇಷ್ಮೆ ಸೀರೆ, ಕೈಗಳಲ್ಲಿ ಒಂದಿಷ್ಟು ಬಂಗಾರದ ಬಳೆ, ಕೊರಳಲ್ಲಿ ಚಿನ್ನದ ಬಗೆ ಬಗೆ ಸರ, ತಲೆ ಪೂರ್ತಿ ಮಲ್ಲಿಗೆ ತೊಟ್ಟು ಕೂತಿರುತ್ತಾಳೆ. ಈಕೆಯ ದೇಹ ಪೂರ್ತಿ ದೇವರು ಮೈ ಮೇಲೆ ಬಂದ ಹಾಗೆ ಶೇಕ್ ಆಗುತ್ತಲೇ ಇರುತ್ತದೆ.

ಆದಿಶಕ್ತಿ ಮಹಾಮಾಯಿ ಎಂದು ಹೇಳಿಕೊಂಡಿರೋ ಈ ಶೇಕ್ ಅಮ್ಮನ ಹಿನ್ನೆಲೆ ಬಗ್ಗೆ ಗೊತ್ತಾದರೆ ಶಾಕ್ ಆಗೋದು ಪಕ್ಕಾ !! ಯಾರು ಗೊತ್ತೇ ಇವರು ?? – Karnataka Times

ಇನ್ನು ಭಕ್ತಾದಿಗಳು ಈಕೆಯ ಮುಂದೆ ಬಂದು ಕಾಲಿಗೆ ನಮಸ್ಕರಿಸಿ, ಕಷ್ಟ ಕಾರ್ಪಣ್ಯ ಹೇಳಿಕೊಂಡರೆ ಆಕೆಯ ಕಣ್ಣಲ್ಲಿ ಕಣ್ಣೀರು ಸುರಿಯುತ್ತದೆ. ಈಕೆ ಒಂದು ಮಾತು ಏನಾದರೂ ಹೇಳಿದರೆ ಅದು ನಿಜವಾಗುತ್ತದೆ ಅನ್ನುವುದು ಅಲ್ಲಿನವರ ನಂಬಿಕೆ. ಹಾಗಾಗಿ ಈ ಮಾತೆಯನ್ನು ನೋಡಲು, ತಲಾ ಎರಡು ಸಾವಿರ ರೂಪಾಯಿ ತೆತ್ತು ಆಕೆಯನ್ನು ಹೂವಿನ ಹಾರದಿಂದ ಅಲಂಕಾರ ಮಾಡಿ ಪೂಜಿಸುತ್ತಿದ್ದರು. ಈಕೆಯ ಬಗ್ಗೆ ಎಲ್ಲೆಡೆ ಪ್ರಚಾರ ಆಗುತ್ತಿದ್ದಂತೆ, ಕೆಲವರಿಗೆ ಈಕೆಯನ್ನು ಎಲ್ಲೋ ನೋಡಿದ ಹಾಗೆ ಅನ್ನಿಸಿ ಇಂಟರ್ನೆಟ್ ನಲ್ಲಿ ಹುಡುಕಾಡಿದಾಗ ಈಕೆಯ ಬಣ್ಣ ಬಯಲಾಗುತ್ತದೆ.

ಈಕೆ ಮೂಲತಃ ತಮಿಳುನಾಡಿನ ಕಡೆಗೂಡಿ ಗ್ರಾಮದವಳು. ಕಡು ಬಡತನದಲ್ಲಿ ಹುಟ್ಟಿದ್ದ ಈಕೆ ಶಂಕರ್ ನಾರಾಯಣ್ ಅನ್ನುವರನ್ನು ಮದುವೆಯಾಗಿ, ಎರಡು ಮಕ್ಕಳನ್ನು ಹೆತ್ತಿದ್ದಳು. ಆದರೆ ಈಕೆ ಇಡೀ ಜಗತ್ತಿಗೆ ಗೊತ್ತಾಗಿದ್ದು, ತಮಿಳಿನ ಜೀ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸೊಲ್ಲುದೆಲ್ಲಾ ಉನ್ಮಯಿ ಕಾರ್ಯಕ್ರಮದಲ್ಲಿ. ಅಲ್ಲಿ ಅರಸು ಅನ್ನುವವರ ಕುಟುಂಬ ಹಾಗೂ ಈಕೆಯ ಫ್ಯಾಮಿಲಿ ಇತ್ತು. ಈ ಅಣ್ಣಪೂರ್ಣಿ ಹಾಗೂ ನೆರೆಮನೆಯ ಅರಸು ಪರಸ್ಪರ ಪ್ರೀತಿಸಲು ಶುರು ಮಾಡಿ, ಅಣ್ಣಪೂರ್ಣಿ ತನ್ನ ಗಂಡನನ್ನು ಅದೇ ರೀತಿ ಅರಸು ತನ್ನ ಪತ್ನಿಯನ್ನು ಬಿಡಲು ನಿರ್ಧರಿಸಿದ್ದರು.

ಅರಸು ಪತ್ನಿ ತನ್ನ ಗಂಡ ತನಗೆ ಬೇಕು ಎಂದು ಆ ಕಾರ್ಯಕ್ರಮದಲ್ಲಿ ಅದೆಷ್ಟೇ ಕೇಳಿಕೊಂಡರೂ, ಅಣ್ಣಪೂರ್ಣಿ ಮಾತ್ರ ಇದಕ್ಕೆ ಒಪ್ಪದೆ, ಅರಸು ಜೊತೆನೇ ಜೀವನ ಆರಂಭಿಸಿದ್ದಳು. ಅದಾಗಿ ಸುಮಾರು ವರ್ಷಗಳ ನಂತರ ಅಣ್ಣಪೂರ್ಣಿ ಈ ರೂಪದಲ್ಲಿ ಕಾಣಿಸಿಕೊಂಡು ಆಕೆಯ ಬಗ್ಗೆ ವಿಚಾರಿಸಿದಾಗ, ಅರಸು ಕೂಡ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿರುವ ವಿಷಯ ತಿಳಿಯುತ್ತದೆ. ಅದು ಕೂಡ ಅನುಮಾನಸ್ಪದವಾಗಿ. ಇದೆಲ್ಲಾ ಮಾಧ್ಯಮದಲ್ಲಿ ಪ್ರಸಾರ‍ ಆಗುತ್ತಿದ್ದಂತೆ ಈ ಆದಿಶಕ್ತಿ ಮಾತೆಯಾಗಿದ್ದ ಅಣ್ಣಪೂರ್ಣಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಈಕೆಯನ್ನು ನಂಬಿ ಹಣ ಕಳೆದುಕೊಂಡ ಭಕ್ತರು ಇದೀಗ ತಲೆ ಚಚ್ಚಿಕೊಳ್ಳುತ್ತಿದ್ದಾರೆ.ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...