ಮದುವೆಯಾಗಿದ್ದರೂ‌ ಮತ್ತೊಬ್ಬನ ಜೊತೆ ಹೋಗುತ್ತಿದ್ದಳು,ಪಾಪ ಪ್ರಜ್ಞೆ ಕಾಡುತ್ತಿದೆ ಇನ್ನುಮುಂದೆ ಗಂಡನ ಜೊತೆ ಚೆನ್ನಾಗಿರುವೆ ಎಂದವಳ ಸ್ಥಿತಿ ಏನಾಗಿ ಹೋಯ್ತು ಗೊತ್ತಾ..

Crime/ಅಪರಾಧ Home Kannada News/ಸುದ್ದಿಗಳು

ಮನುಷ್ಯ ಅನ್ನೋ ಜೀವವೇ ಇಷ್ಟು.. ಆಕ್ರಷಣೆಗಳಿಗೆ ಒಳಗಾಗಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಮಾಡಬಾರದ ತಪ್ಪನ್ನು ಮಾಡಿಬಿಡುತ್ತಾರೆ.. ಆದರೆ ಮಾಡುತ್ತಿರುವುದು ತಪ್ಪು ಎಂದು ತಿಳಿಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.. ಪಾಪಪ್ರಜ್ಞೆ ಕಾಡಿದರೂ ಸಹ ಮತ್ತೆ ಸರಿಯಾದ ಜೀವನ ನಡೆಸಬೇಕು ಎಂದು ಆಸೆ ಪಟ್ಟರೂ ಸಹ ಅದು ಒಮ್ಮೊಮ್ಮೆ ಸಾಧ್ಯವಾಗೋದಿಲ್ಲ.. ಹೌದು ಇಲ್ಲೊಂದು ಅದೇ ರೀತಿಯ ಘಟನೆ ನಡೆದಿದ್ದು ತಪ್ಪುಗಳ ನಡುವಿನ ಸರೊಯ ಹುಡುಕಾಟದಲ್ಲಿ ಕೊನೆಗೆ ನಡೆದ ಘಟನೆ ಮಾತ್ರ ಆಕೆ ಕನಸಿನಲ್ಲಿಯೂ ಊಹಿಸಿರಲಿಲ್ಲ ಎನ್ನಬಹುದು..

ಹೌದು ಈಕೆಯ ಹೆಸರು ಅನಿತಾ ವಯಸ್ಸಿನ್ನೂ ಕೇವಲ ಇಪ್ಪತ್ತಮೂರು.. ಬೆಂಗಳೂರಿನ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.. ಈಕೆಗೆ ಕಳೆದ ಮೂರು ವರ್ಷದ ಹಿಂದೆಯೇ ಮದುವೆಯೂ ಆಗಿತ್ತು.. ಆದರೆ ಅನಿತಾ ಕೆಲಸ ಮಾಡುತ್ತಿದ್ದ ಮೆಡಿಕಲ್ ಸ್ಟೋರ್ ನಲ್ಲಿಯೇ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬಾತನ ಜೊತೆ ಅತಿಯಾದ ಸ್ನೇಹ ನಂತರ ಆತ್ಮೀಯತೆಯನ್ನು ಹೆಚ್ಚಿಸಿದೆ.. ಮದುವೆಯಾಗಿದ್ದರೂ ಸಹ ಅನಿತಾ ವೆಂಕಟೇಶ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.. ಇಬ್ಬರೂ ಸಹ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಸಹ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದರು ಮೂರು ವರ್ಷದಿಂದ ಇಬ್ಬರು ಆಗಾಗ ಸೇರುತ್ತಲೇ ಇದ್ದರು.. ಅತ್ತ ಗಂಡನ ಜೊತೆಯೂ ಸಂಸಾರ ಮಾಡುತ್ತಾ ಇತ್ತ ವೆಂಕಟೇಶ್ ಜೊತೆಯೂ ಸೇರುತ್ತಿದ್ದಳು.. ಮೂರು ವರ್ಷ ಇದೇ ಮುಂದುವರೆದಿದೆ..

ಆದರೆ ಈಗ ಅದೇನಾಯ್ತೋ ಏನೋ ಗಂಡನಿಗೆ ಮೋಸ ಮಾಡುತ್ತಿದ್ದೇನೆ ಎಂದು ಅನಿತಾಗೆ ಮೂರು ವರ್ಷದ ನಂತರ ಅನಿಸಿದೆ.. ಪಾಪಪ್ರಜ್ಞೆ ಕಾಡಿದೆ.. ಇನ್ನಾದರೂ ಗಂಡನ ಜೊತೆ ಚೆನ್ನಾಗಿರಬೇಕು ಎಂದೆನಿಸಿ ವೆಂಕಟೇಶ್ ಗೆ ಈ ಸಂಬಂಧ ಸಾಕು ಅರ್ಥ ಮಾಡಿಕೋ ನನ್ನ ಗಂಡನ ಜೊತೆ ಇನ್ನು‌ಮುಂದೆ ಚೆನ್ನಾಗಿರಬೇಕು ಎಂದು ಬೇಡಿಕೊಂಡಿದ್ದಾಳೆ.. ಆದರೆ ಮೂರು ವರ್ಷ ತಪ್ಪು ಮಾಡಿದವಳು ತನ್ನ ಜೀವನ ಸರಿ ಮಾಡಿಕೊಳ್ಳಬೇಕು ಎಂದುಕೊಂಡ ಅನಿತಾಳ ಸ್ಥಿತಿ ಆಗಿದ್ದೇ ಬೇರೆ.. ಹೌದು ಗಂಶನ ಜೊತೆ ಚೆನ್ನಾಗಿ ಬಾಳಬೇಕು ಎಂದುಕೊಂಡವಳು ಇಲ್ಲವಾಗಿಯೇ ಹೋದಳು.. ಹೌದು ಅನಿತಾ ಕೊನೆಯುಸಿರೆಳೆದುಬಿಟ್ಟಳು.. ಆದರೆ ಇದಕ್ಕೆ ಕಾರಣ ಮೂರು ವರ್ಷ ಜೊತೆಗಿದ್ದ ವೆಂಕಟೇಶ್ ಎಂಬುದು ನಂಬಲೇಬೇಕಾದ ಸತ್ಯ..

ಹೌದು ಇತ್ತ ವೆಂಕಟೇಶ್ ಗೆ ನಮ್ಮ ಸಂಬಂಧ ಸಾಕು ಎಂದು ಫೋನ್ ನಲ್ಲಿ ತಿಳಿಸಿದಾಗ ಅದಕ್ಕೆ ಒಪ್ಪದ ವೆಂಕಟೇಶ್ ಅನಿತಾಳಿಗೆ ಸಾಕಷ್ಟು ಮನವೊಲಿಸಲು ಪ್ರಯತ್ನ ಮಾಡಿದ್ದಾನೆ.. ಆದರೆ ಅದಕ್ಕೆ ಒಪ್ಪದ ಅನಿತಾಳಿಗೆ ಸರಿ ಕೊನೆಯ ಬಾರಿ ಒಮ್ಮೆ ಎದುರಿಗೆ ಮಾತನಾಡಿ ನಂತರ ದೂರವಾಗೋಣ ಎಂದಿದ್ದಾನೆ.. ಅದಕ್ಕೆ ಒಪ್ಪಿಕೊಂಡ ಅನಿತಾ ವೆಂಕಟೇಶ್ ಬಳಿ ಬಂದಿದ್ದಾಳೆ.. ಇತ್ತ ಅದಾಗಲೇ ವೆಂಕಟೇಶ್ ಬೇರೆಯದ್ದೇ ನಿರ್ಧಾರ ಮಾಡಿಕೊಂಡು ಅನಿತಾಳನ್ನು ನೋಡಲು ಬಂದಿದ್ದನು.. ಹೌದು ಮೊದಲು ಅನಿತಾಳ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ.. ಆದರೆ ಇತ್ತ ಅನಿತಾ ಮಾತ್ರ ನನ್ನ ಗಂಡನಿಗೆ ಇನ್ನೂ ಮೋಸ ಮಾಡಲು ನನ್ನಿಂದ ಆಗದು.. ನನಗೆ ಪಾಪಪ್ರಜ್ಞೆ ಕಾಡುತ್ತಿದೆ ದಯವಿಟ್ಟು ಇದೆಲ್ಲಾ ಇಲ್ಲಿಗೆ ಬಿಟ್ಟು ಬಿಡೋಣ ಎಂದಿದ್ದಾಳೆ.. ಆದರೆ ತಕ್ಷಣ ಅನಿತಾಳ ಮೇಲೆ ಕೈ ಮಾಡಿದ ವೆಂಕಟೇಶ್ ಆಕೆಯನ್ನು ಇಲ್ಲವಾಗಿಸಿದ್ದಾನೆ..

ಹೌದು ತನ್ನನ್ನೇ ನಂಬಿಕೊಂಡಿದ್ದ ಗಂಡನಿಗೆ ಮೋಸ ಮಾಡಿದ ಅನಿತಾ ಕೊನೆಗೆ ಒಳ್ಳೆಯ ಜೀವನ ನಡೆಸಬೇಕು ಎಂದು ಅಂದುಕೊಂಡರೂ ಸಹ ವಿಧಿ ಅವಳಿಗೆ ಆ ಅವಕಾಶ ನೀಡಲಿಲ್ಲ.. ಇತ್ತ ವೆಂಕಟೇಶ್ ಮೂರು ವರ್ಷ ಜೊತೆಯಲ್ಲಿದ್ದರೂ ಆಕೆ ಮಾಡಿದ ತಪ್ಪನ್ನು ತಿದ್ದುಕೊಳ್ಳಲು ಇದೆಲ್ಲವನ್ನು ಬಿಡೋಣ ಎಂದು ಕೇಳಿಕೊಂಡರೂ ದುಡುಕಿನ ನಿರ್ಧಾರ ಮಾಡಿ ಇದೀಗ ಪೊಲೀಸರ ವಶದಲ್ಲಿರುವಂತಾಯಿತು.. ಆದರೆ ಅತ್ತ ತನಗೆ ಮೋಸ ಮಾಡಿದ್ದರೂ ಸಹ ತನ್ನ ಜೊತೆ ಮೂರು ವರ್ಷ ಸಂಸಾರ ಮಾಡಿದ ಹೆಂಡತಿಗೆ ಗಂಡನೇ ಅಂತ್ಯ ಸಂಸ್ಕಾರ ಮಾಡಿ ಕಣ್ಣೀರಿಟ್ಟಿದ್ದಾನೆ.. ಇಷ್ಟೇ ಜೀವನ ಅತಿಯಾಗಿ ಪ್ರೀತಿಸುವ ಗಂಡನಿಗೆ ಒಳ್ಳೆಯ ಹೆಂಡತಿ ಸಿಗೋದಿಲ್ಲ.. ಒಳ್ಳೆಯ ಹೆಣ್ಣು ಮಕ್ಕಳಿಗೆ ಪ್ರೀತಿಸುವ ಗಂಡ ಸಿಗೋದಿಲ್ಲ.. ಆದರೆ ವಯಸ್ಸಿನ ಆಕರ್ಷಣೆಗೆ ಮನಸ್ಸನ್ನು ಹರಿಬಿಟ್ಟ ಅನಿತಾಳ ಜೀವನ ಈ ರೀತಿ ಅಂತ್ಯವಾಗಿದ್ದು ಅದೆಷ್ಟೋ ಜನರಿಗೆ ಪಾಠವಾಗಿರುವುದಂತೂ ಸತ್ಯ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...