ನಮಸ್ತೆ ಸ್ನೇಹಿತರೆ, ಕೆಲವು ತಿಂಗಳುಗಳಿಂದ ಈ ಮಹಿಳೆ ಆಟೋ ಓಡಿಸುತ್ತಿದ್ದರು.. ನಂತರ ಮಹಿಳೆ ಈ ಕೆಲಸ ಮಾಡಲು ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಆಶ್ಚರ್ಯ ಪಟ್ಟಿದ್ದಾರೆ‌.. ಅಷ್ಟಕ್ಕೂ ಈ ಮಹಿಳೆ ಯಾರು? ಇಷ್ಟೊಂದು ಫೇಮಸ್ ಆಗಲೂ ಕಾರಣವೇನು ಎಂಬುದನ್ನ ತಿಳಿಯೋಣ.. ಈ ಸುದ್ದಿ ಕೇಳಿ ಬಂದಿರುವುದು ಅಹಮದಾಬಾದ್ ನಿಂದ. ಮೂವತ್ತೈದು ವರ್ಷದ ಅಂಕಿತ ಆಟೋ ಓಡಿಸುತ್ತಿದ್ದಾರೆ.. ಈಕೆ ಆಟೋ ಓಡಿಸಲು ಕಾರಣ ಇವರ ತಂದೆ. ಹೌದು ಇವರ ತಂದೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು.. ಆದರೆ ಕೆಲವು ವರ್ಷಗಳ ಹಿಂದೆ ಅವರಿಗೆ ಕ್ಯಾ’ನ್ಸರ್ ಕಾಯಿಲೆ ಬಂದ ಕಾರಣ ಅಂಕಿತ ಅವರೇ ಮನೆಯ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡರು..

ಅಂಕಿತ ಅವರಿಗೆ ಇಬ್ಬರು ತಂಗಿಯರು ಕೂಡ ಇದ್ದಾರೆ. ಅವರ ಓದು, ಮದುವೆ ಜವಾಬ್ದಾರಿಯನ್ನು ಅಂಕಿತಾ ಅವರು ವಹಿಸಿಕೊಂಡಿದ್ದಾರೆ‌‌.. ನೀವು ಅಂದುಕೊಳ್ಳಬಹುದು ಇದೇನು ದೊಡ್ಡ ವಿಷಯಾನ! ಈ ರೀತಿಯ ನೂರಾರು ಕಥೆಗಳನ್ನು ಟಿವಿಗಳಲ್ಲಿ, ಪೇಪರ್ ಗಳಲ್ಲಿ ನೋಡುತ್ತಿರುತ್ತೇವೆ ಅಂತ.. ಆದರೆ ನಿಮಗೆ ಗೊತ್ತಿಲ್ಲದೇ ಇರುವ ವಿಷಯವೇನೆಂದರೆ ಚಿಕ್ಕ ವಯಸ್ಸಿನಲ್ಲಿ ಪೋ’ಲಿಯೊ ಕಾರಣದಿಂದಾಗಿ ಅಂಕಿತ ಅವರ ಬಲಗಾಲನ್ನು ತೆಗೆಯಬೇಕಾಗಿತ್ತು.. ಕೇವಲ ಒಂದು ಕಾಲಿನಿಂದಲೇ ತನ್ನ ಕುಟುಂಬದ ಭಾರವನ್ನು ಹೊರುತ್ತಿದ್ದಾರೆ.. ಈ ಹಿಂದೆ ಅಂಕಿತ ಅವರು ಕಾಲ್ ಸೆಂಟರ್ ಗಳಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು.. ಆದರೆ ತಿಂಗಳಿಗೆ ಕೇವಲ ಎಂಟು ಸಾವಿರ ರೂಪಾಯಿ ಮಾತ್ರ ಸಂಬಳ ಸಿಗುತ್ತಿತ್ತು..

ankita-auto-driver

ಬರುವ ಸಂಬಳದಲ್ಲಿ ಮನೆಯ ಬಾಡಿಗೆ, ತಂದೆಯ ಔ’ಷದಿಗಳಿಗೆ, ತಂಗಿಯರ ವಿದ್ಯಾಭ್ಯಾಸಕ್ಕೆ, ಮನೆಯ ದಿನಸಿಗೆ ಸಾಲುತ್ತಿರಲಿಲ್ಲ.. ಅದಕ್ಕೆ ಕಾಲ್’ಸೆಂಟರ್ ಕೆಲಸವನ್ನು ಬಿಟ್ಟು ಲೋನ್ ಮಾಡಿಸಿ ಒಂದು ಆಟೋವನ್ನು ಖರೀದಿ ಮಾಡಿಕೊಳ್ಳುತ್ತಾರೆ.. ಇನ್ನೂ ಅಂಕಿತ ಅವರು ಎಂಟು ಗಂಟೆಗಳ ಕಾಲ ಆಟೋ ಓಡಿಸಿಕೊಂಡು ತಿಂಗಳಿಗೆ ಇಪ್ಪತ್ತರಿಂದ ಇಪ್ಪತ್ನಾಲ್ಕು ಸಾವಿರ ರೂಪಾಯಿ ದುಡಿಯುತ್ತಿದ್ದು.. ತಮ್ಮ ಕುಟುಂಬವನ್ನು ಸಂತೋಷವಾಗಿ ನೋಡಿಕೊಳ್ಳುತ್ತಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಕೈ ಕಾಲು ಗಟ್ಟಿಮುಟ್ಟಾಗಿದ್ದರೂ ಸಹ ಕೆಲಸ ಮಾಡಲು ಹಲವರು ಸೋಮಾರಿಗಳಾಗಿ ಬಿಡುತ್ತಾರೆ..

ಆದರೆ ಇಂತಹವರನ್ನು ನೋಡಿದಾಗ ನಮಗೂ ಕೂಡ ಜೀವನದಲ್ಲಿ ಏನಾದರೂ ಒಂದನ್ನ ಸಾಧಿಸಲೇ ಬೇಕೆಂಬ ಛಲ ಹುಟ್ಟಿ ಬರುತ್ತದೆ.. ಮತ್ತು ಜೀವನದಲ್ಲಿ ಹುಟ್ಟಿದಮೇಲೆ ಏನಾದರೂ ಸಾಧಿಸಿ ತೀರಬೇಕು ಇಲ್ಲವಾದರೆ ನಾವು ಹುಟ್ಟಿದ್ದಕ್ಕೆ ಯಾವುದೇ ಪ್ರಯೋಜನ ಇರುವುದಿಲ್ಲ.. ಎಷ್ಟೇ ಕಷ್ಟ ಬಂದರೂ ಸಹ ಹೆತ್ತ ತಂದೆ ತಾಯಿಯನ್ನು ನೊಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಹ ಕೈಬಿಡಬಾರದು.. ತಂದೆ ತಾಯಿ ದೇವರ ಸಮಾನ. ಒಂದು ಕಾಲು ಇಲ್ಲದಿದ್ದರೂ ಸಹ ತನ್ನ ಕುಟುಂಬಕ್ಕಾಗಿ ಕಷ್ಟಪಡುತ್ತಿರುವ ಅಂಕಿತಾಗೆ ಒಂದು ಹ್ಯಾಂಡ್ ಸಫ್. ಇವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •