ಅನಿತಾ ಭಟ್ ಭಾರತೀಯ ಚಲನಚಿತ್ರ ನಟಿ, ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ನಟಿ ಅನಿತಾ ರೆಡ್ ಮಿರ್ಚಿ, ಹೊಸಾ ಕ್ಲೈಮ್ಯಾಕ್ಸ್‌ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ,ರೆಡ್ ಮಿರ್ಚಿ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಹಿಟ್ ಆಗಿತ್ತು.    

‘ಸೈಕೋ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನಿತಾ ಭಟ್ ಆನಂತರ ಬಹುತೇಕ ಗ್ಲಾಮರಸ್ ಪಾತ್ರಗಳ ಮೂಲಕ ಗುರುತಿಸಿಕೊಂಡರು. ಹೀಗಾಗಿ ತುಂಬಾ ವರ್ಷಗಳಿಂದ ಅವರು ಸಿನಿಮಾ ಕ್ಷೇತ್ರದಲ್ಲಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಚೆನ್ನಾಗಿಯೇ ಕಾಣಿಸುತ್ತಾರೆ. ಇದೀಗ ಅವರು ತಮ್ಮ ಸೌಂದರ್ಯದ ಗುಟ್ಟೇನು ಎಂದು ತಿಳಿಸಿದ್ದಾರೆ.

‘ನಾನು ಚಿಕ್ಕವಯಸ್ಸಿನಿಂದಲೂ ಯೋಗ ಮಾಡ್ತಾ ಬರ್ತಿದ್ದೀನಿ. ನನಗೀಗ ಏರಿಯಲ್ ಯೋಗ ತುಂಬಾ ಇಷ್ಟ. ಬಹಳ ಇಂಟರೆಸ್ಟಿಂಗ್ ಆಗಿದೆ. ಒಂದು ದಿನ ಮಾಡದಿದ್ದರೆ ನನಗೆ ನಾನು ಅನ್ಯಾಯ ಮಾಡಿಕೊಂಡೆ ಎನ್ನಿಸುತ್ತದೆ. ಹೀಗಾಗಿ ದಿನಕ್ಕೆ 2 ಗಂಟೆ ಯೋಗ ಮಾಡ್ತಿನಿ. ಇದು ಮಾನಸಿಕವಾಗಿ ತುಂಬಾ ಶಕ್ತಿ ಕೊಟ್ಟಿದೆ.’ ಎನ್ನುತ್ತಾರೆ ಅವರು.

ಅಂದ ಹಾಗೆ ಅನಿತಾ ಭಟ್ ಸದ್ಯ ನಟಿಸುತ್ತಿರುವ ‘ಬೆಂಗಳೂರು-69’ ಚಿತ್ರದ ಫಸ್ಟ್ ಲುಕ್ ಪೊಸ್ಟರ್ ಸಹ ಬಿಡುಗಡೆಯಾಗಿದ್ದು, ಅದರಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಅವರು ‘ಕಲಿವೀರ’, ‘ಸದ್ಗುಣ ಸಂಪನ್ನ ಮಾಧವ’, ‘ಕನ್ನೇರಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •