ಅನಿರುದ್ಧ್

ಮಾವನ ಹಂಗಿನಲ್ಲಿ ಬದುಕಬೇಡ,ನೀನು‌ ದತ್ತು ಅಳಿಯ ಎಂದ ವ್ಯಕ್ತಿಗೆ,ತಿರುಗೇಟು ಕೊಟ್ಟು ನಟ ಅನಿರುದ್ಧ್..

Cinema/ಸಿನಿಮಾ Home Kannada News/ಸುದ್ದಿಗಳು Serial/ಧಾರಾವಾಹಿ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರು ಸಧ್ಯ ಕನ್ನಡ ಕಿರುತೆರೆಯ ಸೆನ್ಸೇಷನಲ್ ಹೀರೋ ಎಂದು ಹೆಸರು ಮಾಡಿದ್ದು ಜೊತೆಜೊತೆಯಲಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದದ್ದು ಎಲ್ಲರಿಗೂ ತಿಳಿದೇ ಇದೆ.. ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರೂ ಸಹ ಅಲ್ಲಿ ನಿರೀಕ್ಷಿಸಿದ ಯಶಸ್ಸು ದೊರಕಿರಲಿಲ್ಲ.. ನಂತರ ಕಿರುತೆರೆಗೆ ಕಾಲಿಟ್ಟು ಒಂದೇ ವಾರದಲ್ಲಿ ಸೆನ್ಸೇಷನಲ್ ಹೀರೋ ಎನಿಸಿಕೊಂಡರು.. ತೆರೆಯ ಮೇಲಷ್ಟೇ ಅಲ್ಲದೇ ನಿಜ ಜೀವನದಲ್ಲಿಯೂ ವಿಷ್ಣುವರ್ಧನ್ ಅವರಂತೆಯೇ ಆದರ್ಶ ವ್ಯಕ್ತಿಯಾಗಿರುವ ಅನಿರುದ್ಧ್ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ..Jote Joteyali Anirudh – Cinisuddi

ಅದರಲ್ಲಿ ಪ್ರಮುಖವಾಗಿ ಸ್ವಚ್ಛತೆಯ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ವಚ್ಛತೆ ಇಲ್ಲದ ಪ್ರದೇಶಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸ್ಥಳೀಯ ಅಧಿಕಾರಿಗಳಲ್ಲಿ‌ ಹಾಗೂ ಕಾರ್ಮಿಕರಲ್ಲಿ ಮನವಿ ಮಾಡಿಕೊಳ್ಳುವರು.. ತದನಂತರ ಆ ಪ್ರದೇಶ ಸ್ವಚ್ಛವಾದ ಬಳಿಕವೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುವರು.. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಇರುವ ಅನಿರುದ್ಧ್ ಅವರು ಅಭಿಮಾನಿಗಳ ಕಮೆಂಟ್ ಗಳಿಗೂ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.. ಆದರೆ ಇಂದು ವ್ಯಕ್ತಿಯೊಬ್ಬರು ಅನಿರುದ್ಧ್ ಅವರ ಬಗ್ಗೆ ಬೇರೆ ರೀತಿಯ ಕಮೆಂಟ್ ಮಾಡಿದ್ದು ನೀನು ದತ್ತು ಅಳಿಯ ಎಂಬ ಮಾತನ್ನೆಲ್ಲಾ ಆಡಿದ್ದು ನಿಜಕ್ಕೂ ಅನಿರುದ್ಧ್ ಅವರ ಮನಸ್ಸಿಗೆ ನೋವುಂಟು ಮಾಡಿರುವುದು ಸತ್ಯ..Jote Joteyali Kannada Serial - Karnataka Trending

ಹೌದು ನಂದೀಶ್ ಸಂಪತ್ ಕುಮಾರ್ ಎಂಬ ವ್ಯಕ್ತಿಯೊಬ್ಬರು ಅನಿರುದ್ಧ್ ಅವರ ಪೋಸ್ಟ್ ಒಂದಕ್ಕೆ ಅನಿರುದ್ಧ ರವರೇ ನಿಮ್ಮ ಅಪ್ಪನ ಹೆಸರು ಉಳಿಸಿ, ವಿಷ್ಣು ಸರ್ ಹೆಸರು ನೀವು ಉಳಿಸಬೇಕೆಂದಿಲ್ಲ.. ಅವರ ಹೆಸರು ಆಲ್ರೆಡಿ ಉಳಿದಿದೆ. ಮಾವನ ಹಂಗಿನಲ್ಲಿ ಬದುಕಬೇಡ, ಅಪ್ಪನ ಆಸರೆಯಲ್ಲಿ ಬದುಕು.. ನೀನು ದತ್ತು ಅಳಿಯ ಎಂದು ಕಮೆಂಟ್ ಮಾಡಿದ್ದಾರೆ.. ಇದಕ್ಕೆ ಅನಿರುದ್ಧ್ ಅವರು ಮಾತ್ರವಲ್ಲದೇ ಅನೇಕರು ಪ್ರತಿಕ್ರಿಯೆ ನೀಡಿ ಆತನ ಕೀಳು ಮನಸ್ಸಿನ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ..

ಇನ್ನು ಇಂತಹ ಕಮೆಂಟ್ ಗೂ ಸಹ ಪ್ರತಿಕ್ರಿಯೆ ನೀಡಿರುವ ನಟ ಅನಿರುದ್ಧ್ ಅವರು ನಂದೀಶ್ ಸಂಪತ್ ಕುಮಾರ್ ತಾವು ತಮ್ಮ ಆಲೋಚನೆ ಹಾಗೂ ಮಾತುಗಳಿಂದ ತಮ್ಮ ತಂದೆ ತಾಯಿಯ ಹೆಸರು ಹಾಳು ಮಾಡುತ್ತಾ ಇದ್ದೀರ.. ದಯವಿಟ್ಟು ಮೊದಲು ಅಲ್ಲಿ ಗಮನ ಹರಿಸಿ.. ಎಂದು ಸಂಯಮದಿಂದಲೇ ಆತನಿಗೆ ಯಾವ ವಿಚಾರವನ್ನು ಅರ್ಥ ಮಾಡಿಸಬೇಕೋ ಅದನ್ನು ನಯವಾಗಿಯೇ ತಿರುಗೇಟು ಕೊಟ್ಟು ಅರ್ಥ ಮಾಡಿಸಿದ್ದಾರೆ..Jote Joteyali Kannada Serial1 - Karnataka Trending

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನೇಕರು “ಯಾಕಪ್ಪಾ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತೀಯಾ.. ಒಳ್ಳೆ ಕೆಲಸ ನಿನ್ನ ಕೈಯಲ್ಲಿ ಮಾಡಲು ಆಗದಿದ್ದರೆ ಒಳ್ಳೆ ಕೆಲಸ ಮಾಡುವ ಜನರ ಕಾಲು ಎಳೆಯಬೇಡ ಎಂದಿದ್ದಾರೆ.. ಮತ್ತೊಬ್ಬರು ವಿಷ್ಣು ಜೀ ಅವರಿಗೆ ನಾಡಿನ ಅಭಿಮಾನಿಗಳು ಮಕ್ಕಳಾಗಿದ್ದಾರೆ ದಯವಿಟ್ಟು ಈ ರೀತಿ ಮಾತನಾಡಬೇಡಿ.. ಅನಿರುದ್ಧ್ ಅವರು ಸಹ ವಿಷ್ಣು ಜೀ ಅವರ ಮಗುವಾಗಿದ್ದರೆ ಈ ವಿಷಯದಲ್ಲಿ ತಪ್ಪಾಗಿ ಮಾತಾಡಕ್ ಹೋಗ್ಬೇಡಿ.. ಎಂದಿದ್ದಾರೆ..

ಇನ್ನು ಇದಕ್ಕೂ ಮಿಗಿಲಾಗಿ ಮತ್ತೊಬ್ಬರು ಪ್ರತಿಕ್ರಿಯೆ ನೀಡಿ ಏನ್ ಗುರು ತಲೇಲಿ ಸಗಣಿ ತುಂಬುಕೊಂಡು ಮಾತನಾಡಬೇಡ.. ಒಳ್ಳೆ ಕೆಲಸ ಮಾಡೋರಿಗೆ ಬೆಂಬಲಿಸೋಕೆ ಆಗಿಲ್ಲ ಅಂದ್ರೆ ಮುಚ್ಕೊಂಡ್ ಇರು.. ಅದನ್ನ ಬಿಟ್ಟು ಈ ತರ ತಿಕ್ಕಲತಿಕ್ಕಲ ತರ ಕಮೆಂಟ್ ಹಾಕಬೇಡ ಎಂದಿದ್ದಾರೆ.. ಒಟ್ಟಿನಲ್ಲಿ‌ ಒಳ್ಳೆ ಕೆಲಸ ಮಾಡೋರಿಗೆ ಈ ರೀತಿಯೂ ಮಾತನಾಡಿ ಮನಸ್ಸು ನೋಯಿಸೋರನ್ನು ನೋಡಿದರೆ ನಿಜಕ್ಕೂ ಎಂತಹ ಮನಸ್ಥಿತಿ ಜನಗಳು ಎನಿಸುವುದಂತೂ ಸತ್ಯ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...