ಅಂದು ಸಿನಿಮಾ ಇಲ್ಲದೆ ಬಂದಿದ್ದೆಲ್ಲವನ್ನು ಒಪ್ಪಿಕೊಂಡಿದ್ದ ಅನಿರುಧ್,ಜೊತೆಜೊತೆಯಲಿ ಸಂಭಾವನೆ ಎಷ್ಟು ಗೊತ್ತಾ!

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಮನೆಮನೆಗಳಲ್ಲೂ ಕೇಳುವ ಹೆಸರು ಆರ್ಯವರ್ಧನ್ ಮತ್ತು ಅನು ಸಿರಿಮನೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿನ ಪಾತ್ರಧಾರಿಗಳು ಒಂದು ರೀತಿ ಎಲ್ಲಾ ವೀಕ್ಷಕರ ಮನೆಯವರಂತೆಯೇ ಆಗಿದ್ದಾರೆ. ಆರ್ಯ, ಅನು, ಪುಷ್ಪ, ಸುಬ್ಬು ಎಲ್ಲರನ್ನು ಸಹ ಕರ್ನಾಟಕದ ಜನ ಬಹಳ ಇಷ್ಟಪಟ್ಟಿದ್ದಾರೆ. ಮನ ಮುಟ್ಟುವಂತಹ ಕಥೆ, ಒಳ್ಳೆಯ ತಿರುವುಗಳು, ಕಲಾವಿದರ ಉತ್ತಮವಾದ ಅಭಿನಯ ಈ ಎಲ್ಲಾ ಕಾರಣಗಳಿಂದ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂಚಲನ ಮೂಡಿಸಿದ ಧಾರಾವಾಹಿ ಜೊತೆ ಜೊತೆಯಲಿ. ಹಲವಾರು ಗೌರವಾನ್ವಿತ ಕಲಾವಿದರ ದಂಡೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿದೆ. ಹಾಗಾದ್ರೆ, ಅನಿರುಧ್ ಅವರ ಸಂಭಾವನೆ ಎಷ್ಟು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ, ಮುಂದೆ ಓದಿರಿ

ಉಳಿದೆಲ್ಲ ಪಾತ್ರಕ್ಕಿಂತಲು ವೀಕ್ಷಕರನ್ನು ಹೆಚ್ಚು ಆಕರ್ಷಿಸಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಆರ್ಯವರ್ಧನ್ ರ ಜಾಣ್ಮೆ, ಸರಳತೆ, ಗಾಂಭೀರ್ಯ ಅನು ಸಿರಿಮನೆಯ ಮುಗ್ಧತೆ ಇವೆಲ್ಲವೂ ಸಹ ವೀಕ್ಷಕರಿಗೆ ಬಹಳ ಇಷ್ಟವಾಯಿತು. ಅದರಲ್ಲೂ ವರ್ಧನ್ ಗ್ರೂಪ್ ಆಫ್ ಕಂಪನಿಸ್ ನ ಸಂಸ್ಥಾಪಕ ಆರ್ಯವರ್ಧನ್ ಪಾತ್ರ ಹಿರಿಯರಿಂದ ಕಿರಿಯರವರೆಗೂ ಎಲ್ಲರ ಮೆಚ್ಚುಗೆ ಪಡೆದಿದೆ. ಪಾತ್ರಕ್ಕೆ ಮತ್ತು ವ’ಯಸ್ಸಿಗೆ ತಕ್ಕಂತೆ ಇರುವ ಅನಿರುದ್ಧ್ ಅವರ ನಟನೆಯಲ್ಲಿ ಗಾಂಭೀರ್ಯತೆ, ಪ್ರಬುದ್ಧತೆ ಮ್ಯಾನರಿಸಮ್ ಇವೆಲ್ಲವೂ ಸಹ ಎಲ್ಲರಿಗೂ ಮೆಚ್ಚುಗೆಯಾಗಿದೆ.

Anirudh

ಅದರಲ್ಲೂ ಹೆ’ಣ್ಣುಮ’ಕ್ಕಳಿಗೆ ತಾವು ಇಷ್ಟ ಪಡುವ ಹುಡುವ ಅಥವಾ ಮದುವೆ ಆಗಬಯಸುವ ಹುಡುಗ ಆರ್ಯವರ್ಧನ್ ರಂತೆ ಇರಬೇಕು ಎಂದು ಹೇಳುವಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿದೆ ಆರ್ಯವರ್ಧನ್ ಪಾತ್ರ. ಆರ್ಯವರ್ಧನ್ ರ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದೆ. ಹಿರಿತೆರೆಯಿಂದ ಕಿರುತೆರೆಗೆ ಬಂದ ನಂತರ, ಹಿಂದೆಂದಿಗಿಂತಲೂ ಸಿಗದಷ್ಟು ಯಶಸ್ಸು ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಸಿಕ್ಕಿದೆ. ನಟ ಅನಿರುದ್ಧ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…?

ಆರ್ಯವರ್ಧನ್ ಪಾತ್ರದಲ್ಲಿ ನಟಿಸಲು ನಟ ಅನಿರುದ್ಧ್ ಒಂದು ದಿನಕ್ಕೆ ಪಡೆಯುವ ಸಂಭಾವನೆ ಬರೋಬ್ಬರಿ 35,000 ರೂಪಾಯಿಗಳು. ನಮಗೆಲ್ಲಾ ತಿಳಿದಿರುವ ಹಾಗೆ ಅನಿರುದ್ಧ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ, ವಿಷ್ಣುವರ್ಧನ್ ಅವರು ಇದ್ದಾಗ ಹಲವಾರು ಸಿನಿಮಾಗಳಲ್ಲಿ ನಾಯಕರಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ವಿಷ್ಣುವರ್ಧನ್ ಅವರ ನಿಧನದ ನಂತರ ಅನಿರುದ್ಧ್ ಅವರು ನಟಿಸಿದ ಸಿನಿಮಾಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ. ಆದರೆ ಜೊತೆ ಜೊತೆಯಲಿ ಧಾರಾವಾಹಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದರೆ, ಈಗಿನ ಸ್ಟಾರ್ ನಟರು ಪಡೆಯುವಷ್ಟು ಸಂಭಾವನೆಯನ್ನು ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಹಿಗೆ ಪಡೆಯುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •