ಸಾಮಾನ್ಯವಾಗಿ ಸಿನಿಮಾಗಳಲ್ಲಿ ಸತ್ಯವನ್ನು ಬಯಲು ಮಾಡುವುದಕ್ಕೆ ಬೆರಳುಗಳನ್ನು ತುಂಡು ಮಾಡುವುದು, ಶಾಕ್ ಟ್ರೀಟ್ಮೆಂಟ್ ಕೊಡುವುದು,ಇಲಿಗಳ ಕೈಯಲ್ಲಿ ಕಟ್ಟಿಸುವುದು ಇಂತಹ ಶಿಕ್ಷೆಗಳನ್ನು ನೀವು ನೋಡಿರುತ್ತೀರಿ. ಆದರೆ ನಮ್ಮ ರಾಜರ ಕಾಲದಲ್ಲಿ ಸತ್ಯವನ್ನು ಬಯಲು ಮಾಡುವುದಕ್ಕೆ, ಗೂಢಚಾರಿ ಗಳನ್ನು ಶಿಕ್ಷಿಸುವುದಕ್ಕೆ ಮತ್ತು ಕೈದಿಗಳನ್ನು ಶಿಕ್ಷಿಸಲು ಊಹಿಸಲು ಸಾಧ್ಯವಾಗದಂಥ ಶಿಕ್ಷೆಗಳನ್ನು ಕೊಡುತ್ತಿದ್ದರು. ಈ ಶಿಕ್ಷೆಗಳು ಎಷ್ಟುಭಯಾನಕವಾಗಿತ್ತು ಗೊತ್ತಾ. ಯಾರಿಂದಲಾದರೂ ನಿಜವನ್ನು ಹೇಳಿಸಬೇಕು ಎಂದಿದ್ದಾರೆ ಅವರಿಗೆ ಶಿಕ್ಷೆ ಕೊಡುವ ಹಾಗಿಲ್ಲ. ಅವರ ಮುಂದೆ ಬೇರೆಯವರನ್ನು ಶಿಕ್ಷಿಸಿದರೆ ಸಾಕು, ಅದನ್ನು ನೋಡಿ ಅವರು ನಿಜ ಹೇಳುತ್ತಿದ್ದರು. ಅಷ್ಟು ಭಯಂಕರವಾದ ಶಿಕ್ಷೆಗಳನ್ನು ನಮ್ಮ ರಾಜರ ಕಾಲಗಳಲ್ಲಿ ಕೊಡುತ್ತಿದ್ದರು. 

1.ಬ್ರೇಜ಼ನ್ ಬುಲ್ಲ್ : ಇಥೇನ್ಸ್ ನಗರಕ್ಕೆ ಸೇರಿದ ಪಿಲರಿಸ್ ಎಂಬ ರಾಜ ಈ ಶಿಕ್ಷೆಯ ವಿಧಾನವನ್ನು ಉಪಯೋಗಿಸುತ್ತಾನೆ. ಕಾಪರ್ ಮೆಟಲ್ ನಲ್ಲಿ ಒಂದು ಎತ್ತಿನ ರೂಪದಲ್ಲಿರುವ ವಿಗ್ರಹವನ್ನು ಮಾಡಿಸುತ್ತಾನೆ. ಅದಕ್ಕೆ ಒಂದು ಬಾಗಿಲು ಕೂಡ ಇರುತ್ತೆ. ಅದರಲ್ಲಿ ಎಂಟು ಅಡಿಯ ಮನುಷ್ಯ ಕೂಡ ಇರಿಸುತ್ತಾನೆ. ನಂತರ ಆ ವಿಗ್ರಹದ ಹೊಟ್ಟೆ ಕೆಳಗಡೆ ಬೆಂಕಿ ಇಡುತ್ತಾರೆ. ಹಾಗ ವಿಗ್ರಹದ ಒಳಗಿರುವ ಮನುಷ್ಯ ಏನಾಗುತ್ತಾನೆ ಎಂದು ಊಹೆ ಮಾಡಿಕೊಳ್ಳಿ. ಒಳಗಿರುವವರ ಕೂಗು ಆ ವಿಗ್ರಹದ ಬಾಯಿಯಿಂದ ಕೇಳಿಸುತ್ತದೆ.ಅದು ಕೂಡ ಎತ್ತು ಕರೆಯುವ ರೀತಿಯಲ್ಲಿ ಕೇಳಿಸುತ್ತದೆ.

2. ಸ್ವಾಯಿಂಗ್ :ಪ್ರಪಂಚದ ತುಂಬಾ ಜನ ರಾಜರು ಈ ಶಿಕ್ಷೆಯ ವಿಧಾನವನ್ನು ಉಪಯೋಗಿಸುತ್ತಿದ್ದರು. ಒಬ್ಬ ಮನುಷ್ಯನನ್ನು ಒಂದು ಕಂಬಕ್ಕೆ ಕಟ್ಟಿ ಹಾಕಿ,ತಲೆಯಿಂದ ಕಾಲಿನವರೆಗೆ ಕೊಯ್ದು ಎರಡು ಭಾಗಗಳನ್ನಾಗಿ ಮಾಡುತ್ತಿದ್ದರು.

3. ಸ್ಕ್ಯಾಪಿಸಮ್: ಈ ವಿಧಾನದಲ್ಲಿ ಒಬ್ಬ ಮನುಷ್ಯನನ್ನು ಚಿಕ್ಕ ದೋಣಿಯಲ್ಲಿಟ್ಟು ಅವರಿಗೆ ಹಾಲು ಜೇನಿನ ಮಿಶ್ರಣವನ್ನು ಕುಡಿಸಿ, ಆ ಮಿಶ್ರಣವನ್ನು ದೇಹದ ಮೇಲೆ ಚೆಲ್ಲಿ ಅವರನ್ನು ಸಮುದ್ರದಲ್ಲಿ ಅಥವಾ ಕೆರೆಯಲ್ಲಿ ಬಿಡುತ್ತಿದ್ದರಂತೆ. ಈ ರೀತಿ ಮಾಡುವುದರಿಂದ ಎರಡು ತರ ಶಿಕ್ಷೆಗೆ ಗುರಿಯಾಗುತ್ತಿದ್ದರಂತೆ.ಒಂದು ಈ ಮಿಶ್ರಣವನ್ನು ಕುಡಿಯುವುದರಿಂದ ಆ ಮನುಷ್ಯ ತುಂಬಾ ಜಾಸ್ತಿ ದಿನ ಬದುಕುತ್ತಾನೆ. ಇದರಿಂದ ಶಿಕ್ಷೆ ಜಾಸ್ತಿ ದಿನ ಅನುಭವಿಸಬೇಕಾಗುತ್ತದೆ. ಎರಡು ಮಿಶ್ರಣ ದೇಹದ ಮೇಲೆ ಚೆಲ್ಲುವುದರಿಂದ ನೋಣಗಳು ಮೊಟ್ಟೆ ಇಟ್ಟು ಆ ಮೊಟ್ಟೆಗಳು ಲಾವವಾಗಿ ಬದಲಾವಣೆಯಾಗುತ್ತೆ. ಇದರಿಂದ ಮನುಷ್ಯ ಬದುಕಿದ್ದಾಗಲೇ ದೇಹ ಕೊಳೆಯುವುದಕ್ಕೆ ಪ್ರಾರಂಭವಾಗುತ್ತೆ.

ancient-times

4. ಸ್ಪ್ಯಾನಿಶ್ ಡಾಂಕಿ: ಸ್ಪ್ಯಾನಿಷ್ ನಲ್ಲಿ ಕೈದಿಗಳನ್ನು ಬಟ್ಟೆಗಳು ಇಲ್ಲದ ಹಾಗೆ ಮಾಡಿ ತ್ರಿಕೋನಾಕಾರದ ಕುರ್ಚಿಯಲ್ಲಿ ಕೂರಿಸಿ ನಂತರ ಅವರ ಕಾಲಿಗೆ ತೂಕ ಇರುವ ವಸ್ತುವನ್ನು ಕಟ್ಟುತ್ತಾರೆ. ನಂತರ ಗುರುತ್ವಕರ್ಷಣ ಬಲದ ಕಾರಣದಿಂದ ಅವರು ಕೆಳಗೆಳೆದು ಎರಡು ಭಾಗಗಳಾಗಿ ಮಾಡುತ್ತೆ. ಈ ರೀತಿ ನಿಧಾನವಾಗಿ ಶಿಕ್ಷೆ ಅನುಭವಿಸಿ ಸಾಯುತ್ತಿದ್ದರು.

5.ಬ್ರೆಸ್ಟ್  ರಿಪ್ಪರ್: 15ನೇ ಶತಮಾನದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ದೇಶದಲ್ಲಿ ಮಹಿಳೆಯರು ಏನಾದರೂ ಮದುವೆಗೆ ಮುಂಚೆ ಗರ್ಭಿಣಿಗಳಾದರೆ, ಅಥವಾ ಅಕ್ರಮ ಸಂಬಂಧಗಳು ಇಟ್ಟುಕೊಂಡಿದ್ದಾರೆ. ಈ ಶಿಕ್ಷೆಯ ವಿಧಾನವನ್ನು ಉಪಯೋಗಿಸುತ್ತಿದ್ದರು. ಒಂದು ಆಯುಧದಿಂದ ಮಹಿಳೆಯರ ಬ್ರೆಸ್ಟ್ ಅನ್ನು ಕಟ್ ಮಾಡುತ್ತಿದ್ದರು. ಅದರಿಂದ ರಕ್ತಸ್ರಾವವಾಗಿ ಸಾಯುತ್ತಿದ್ದರು.

6. ಚೈನೀಸ್ ಬಾಂಬೋ: ಕೆಲವೊಂದು ಜಾತಿಯ ಬಿದಿರು ಗಿಡಗಳು ದಿನಕ್ಕೆ ಮೂರರಿಂದ ನಾಲ್ಕು ಅಡಿ ಬೆಳೆಯುತ್ತೆ. ಈ ಒಂದು ಪ್ರಕೃತಿಯ ವಿಸ್ಮಯವನ್ನ ಉಪಯೋಗಿಸಿಕೊಂಡು ಚೀನಾದವರು ಶಿಕ್ಷೆಯನ್ನು ಕೊಡುತ್ತಿದ್ದರಂತೆ. ನಾಲ್ಕು ಅಡಿ ಎತ್ತರ ಇರುವ ಬಿದಿರು ಗಿಡಗಳ ಮೇಲೆ ಮರಗಳ ಸಹಾಯದಿಂದ ಒಬ್ಬ ಮನುಷ್ಯನನ್ನು ಕಟ್ಟಿ ಹಾಕುತ್ತಿದ್ದರಂತೆ. ಆ ಗಿಡ ಬೆಳೆಯುವ ವೇಗಕ್ಕೆ ದೇಹದ ಕೆಳಗಡೆಯಿಂದ ಮೇಲಕ್ಕೆ ಬರುತ್ತಿದ್ದವಂತೆ.ಇದರಿಂದ ರಕ್ತಸ್ರಾವವಾಗಿ ನರಳಿ ಸಾಯುತ್ತಿದ್ದರಂತೆ.

7. ಪ್ಲೇಯಿಂಗ್ :ಕ್ರಿಸ್ತಪೂರ್ವ 883ರಲ್ಲಿ ಅಶೋರ್ ನಜೀರ್ ಪಾಲ್ ಎಂಬ ರಾಜ ಅವರ ಕೈದಿಗಳನ್ನು ಶಿಕ್ಷಿಸಲು ಬದುಕಿದ್ದಾಗಲೇ ಅವರ ದೇಹದಿಂದ ಚರ್ಮವನ್ನು ಬೇರೆ ಮಾಡುತ್ತಿದ್ದನಂತೆ. ಇದು ಎಷ್ಟು ಭಯಾನಕ ಶಿಕ್ಷೆ ಎಂದರೆ ಇದನ್ನ ಊಹೆ ಕೂಡ ಮಾಡಲು ಸಾಧ್ಯವಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •