ಇತ್ತೀಚೆಗೆ ನಮ್ಮ ಆಪ್ತರೊಬ್ಬರು ಕೊರೊನಾ ಪಾಸಿಟಿವ್ ಆಗಿ ನಿಧನ ಹೊಂದಿದರು. ಅವರನ್ನು ಆಸ್ಪತ್ರೆಗೆ ಸೇರಿಸಲು ಸಾಕಷ್ಟು ಪರದಾಡಬೇಕಾಯಿತು. ಸಹಾಯವಾಣಿಗೆ ಕರೆ ಮಾಡಿದರೆ ಸರಿಯಾಗಿ ಯಾರೂ ಸ್ಪಂದಿಸುತ್ತಿಲ್ಲ. ಆಸ್ಪತ್ರೆ ಸಿಕ್ಕರೆ ಐಸಿಯೂ ಖಾಲಿ ಇಲ್ಲ, ವೆಂಟಿಲೇಟರ್ ವ್ಯವಸ್ಥೆ ಇಲ್ಲ. ಹಾಗೂ ಹೀಗೂ ಹರಸಾಹಸ ಮಾಡಿ ಆಸ್ಪತ್ರೆಗೆ ಸೇರಿಸಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡ ನಂತರ ರೆಮ್ ಡೆಸಿವಿಯರ್ ಔಷಧಿ ಲಭ್ಯವಿಲ್ಲ ಎಂದು ನಟ ಅನಿರುದ್ಧ್ ಅವರು ತಮ್ಮ ಪರದಾಟವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ರೆಮ್ ಡಿಸಿವಿಯರ್ ಔಷಧಿಯನ್ನು ಪಡೆಯಲೂ ಸಾಕಷ್ಟು ಇನ್ ಫ್ಯೂಯೆನ್ಸ್ ಮಾಡಿದ ನಂತರ, ಸಾಕಷ್ಟು ಜನರನ್ನು ಸಂಪರ್ಕ ಮಾಡಿದ ನಂತರವಷ್ಟೇ ಲಭ್ಯವಾಯಿತು. ನಾವು ನಿರಂತರವಾಗಿ ಸಾಕಷ್ಟು ಪ್ರಯತ್ನ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಅವರು ನಮ್ಮನ್ನು ಬಿಟ್ಟು ಅಗಲಿಯೇ ಬಿಟ್ಟರು.

 

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •