ಹೆಣ್ಣು ಮಕ್ಕಳು ಟೂ ವಿಲ್ಲರ್ ಹೊಡಿಸುತ್ತಾರೆ,ತ್ರೀ ವೀಲರ್ ಹೊಡಿಸುತ್ತಾರೆ,ಫೂರ್ ವೀಲರ್ ಹೊಡಿಸುತ್ತಾರೆ, ಸಿಕ್ಸ್ ವೀಲರ್ ಸಹ ಹೊಡಿಸುತ್ತಾರೆ.ಬಸ್ ಸ್ಟೇರಿಂಗ್ ಹಿಡಿದು ಸ್ಟೈಲಾಗಿ ಡ್ರೈ ವ್ ಮಾಡೊ ಮಹಿಳಾ ಡ್ರೈವರ್ ಗಳನ್ನು ಸಹ ನೊಡಿದ್ದೇವೆ. ಅದರೆ ಇದು ಮಂಗಳೂರಿನ ಗಟ್ಟಿ ಗಿತ್ತಿ ಮಹಿಳೆಯೊಬ್ಬಳ ಕಥೆ. ಈಕೆ ಮಿಕೆಲ್ಲಾ ಮಹಿಳೆಯರಿಗಿಂತಲು ಒಂದು ಹೆಜ್ಜೆ ಮುಂದೆ ಇಟ್ಟಿರುವಂತಹ ದಿಟ್ಟೆ.ಏಕೆಂದರೆ ಪುರುಷರಿಗೆ ಅಷ್ಟೇ ಮೀಸಲಾಗಿರುವ ಆಂಬ್ಯುಲೆನ್ಸ್ ಕೆಲಸಕ್ಕು ಸೈ ಅನಿಸಿಕೊಂಡಿದ್ದಾಳೆ.


ಇವರ ಹೆಸರು ಸಿ ಎಸ್ ರಾಧಿಕ ಮಂಗಳೂರಿನ ಕುಳಾಯಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರು ಚಾಲಕಿ ಅಷ್ಟೇ ಅಲ್ಲ.10 ಆಂಬ್ಯುಲೆನ್ಸ್ ಹಾಗೆ 2 ಬಸ್‌ಗಳ ಮಾಲಕಿಯೂ ಹೌದು.ಸಾಮಾನ್ಯವಾಗಿ ಮಹಿಳೆಯರು ತಮ್ಮ ಜೀವನ ನಿರ್ವಹಣೆಗಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಯೋಜನೆ ಮಾಡುತ್ತಾರೆ ಆದರೆ ಈ ಮಹಿಳೆ ಗಂಡಸರೆ ಹಿಂಜರಿಯುವ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಯಾವುದೇ ಹಿಂಜರಿಕೆ ಇಲ್ಲದೆ ಸಲೀಸಾಗಿ ಆಂಬ್ಯುಲೆನ್ಸ್ ಅನ್ನು ಹೊಡಿಸುತ್ತಾರೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಗು ಆಂಬ್ಯುಲೆನ್ಸ್ ಸಲಾಯಿಸುವ ಗಟ್ಟಿಗಿತ್ತಿ ಇವರು.

ರಾಧಿಕ ಅವರು ಈ ವೃತ್ತಿಯನ್ನು ಆರಿಸಿಕೊಳ್ಳುವುದಕ್ಕು ಒಂದು ಕಾರಣ ಇದೆ.ಅವರು ಮದುವೆ ಆದಾಗ ಪತಿ ಸುರೇಶ್ ಆಂಬ್ಯುಲೆನ್ಸ್ ಚಾಲಕರಾಗಿದ್ದರು.ತದ ನಂತರ ತಾವೆ ಒಂದು ಆಂಬ್ಯುಲೆನ್ಸ್ ಖರೀದಿ ಮಾಡಿ ಕಾವೇರಿ ಆಂಬ್ಯಲೆನ್ಸ್ ಅಂತ ಹೆಸರಿನಲ್ಲಿ ಸೇವೆಯನ್ನು ಆರಂಬಿಸಿದರು.ಆದರೆ ದುರಾದೃಷ್ಟವಶ ಅವರು 2002 ಇಸವಿಯಲ್ಲಿ ಪತಿ ಸುರೇಶ್ ಸಾವಿಗೀಡಾಗುತ್ತಾರೆ.ಗಂಡನ ಸಾವಿನ ಬಳಿಕ ರಾಧಿಕ ಅವರಿಗೆ ಜೀವನ ನಡೆಸುವುದೆ ಕಷ್ಟವಾಗಿಬಿಡುತ್ತದೆ. ಏಳು ವರ್ಷ ಹಾಗೂ ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುವುದು ಅಸಾಧ್ಯ ಅನಿಸುತ್ತದೆ.ಜೀವನಕ್ಕಾಗಿ ರಾಧಿಕ ಅವರು ಪತಿಯ ಆಂಬ್ಯಲೆನ್ಸ್ ಚಾಲನೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •