ಅಲ್ಲಾವುದ್ಧೀನ್ ಖಿಲ್ಜಿಯ ಪುತ್ರಿಯ ಸಾವಿಗೆ ಕಾರಣವಾಯಿತಾ…ಆಕೆಯ ಪ್ರೇಮ.

ಅಲ್ಲಾವುದ್ಧೀನ್ ನಮ್ಮ ಭಾರತದ ಮೇಲೆ ದಾಳಿ ಮಾಡಿ ಅನೇಕ ದೇವಾಲಯಗಳನ್ನು ನಾಶ ಮಾಡಿ ನಮ್ಮ ದೇಶದ ಸಂಪತ್ತಿಗೆ ಕಣ್ಣು ಹಾಕಿದ್ದ.ಈತ ಒಂದು ದಿನ ಗುಜರಾತ್ ನ ದೇವಾಲಯದ ಶಿವಲಿಂಗ ವನ್ನು ತೆಗೆದುಕೊಂಡು ದಿಲ್ಲಿಗೆ ಅಪಹರಿಸಿಕೊಂಡು ಹೊರಟಿದ್ದನು.

ಆಗ ಕನ್ನಡದೇವ ದಿಲ್ಲಿಗೆ ಹೋಗಿ ತನ್ನ ಸೇನೆ ಜೊತೆಗೆ ಖಿಲ್ಜಿಯ ಜೊತೆ ಹೋರಾಡುತ್ತಾನೆ.ಆಗ ಖಿಲ್ಜಿ ಸೋಲುತ್ತಾನೆ.ನಂತರ ಶಿವಲಿಂಗವನ್ನು ಖಿಲ್ಜಿ ಕನ್ನಡದೇವನಿಗೆ ಕೊಡುತ್ತಾನೆ.ಈ ಸೋಲಿನಿಂದ ಹತಾಶನಾದ ಖಿಲ್ಜಿ ಕನ್ನಡ ದೇವನ ಮಗನಾದ ದೇವಮರಾಜನನ್ನು ಮಾತುಕಥೆಗಾಗಿ ತನ್ನ ಆಸ್ಥಾನಕ್ಕೆ ಕರೆಯುತ್ತಾನೆ.

ಮಾತುಕಥೆಯ ಸಮಯದಲ್ಲಿ ಖಿಲ್ಜಿಯ ಪುತ್ರಿ ಫಿರೋಸ ಇರುತ್ತಾಳೆ.ಆಗ ದೇವಮ ನನ್ನು ಕಂಡು ಪ್ರೀತಿಗೆ ಜಾರುತ್ತಾಳೆ.ತನ್ನ ತಂದೆಗೆ ತಾನು ಆತನನ್ನು ಪ್ರೀತಿಸುತ್ತೇನೆ ಮದುವೆಯಾದರೇ ಆತನನ್ನೇ ಎಂದು ಹಠ ಹಿಡಿಯುತ್ತಾಳೆ.ಮೊದಲಿಗೆ ಒಪ್ಪದ ಖಿಲ್ಜಿ ಮಗಳ ಹಠಕ್ಕೆ ಸೋತನು.

allauddin-khilji

ನಂತರ ಈ ಬಗ್ಗೆ ದೇವಮನಲ್ಲಿ ಹೇಳುತ್ತಾನೆ.ಹೇಳಿದಾಗ ಆತ ನಾನು ಸಾಮ್ರಾಜ್ಯಕ್ಕೆ ಹೋದ ಮೇಲೆ ಹೇಳುತ್ತೇನೆ ಎಂದು ಹೊರಟ.ಆದರೇ ದೇವಮನಿಗೆ ಆಕೆಯನ್ನು ಮದುವೆಯಾಗಲು ಇಷ್ಟವಿರಲಿಲ್ಲ.ಆತ ನಿರಾಕರಿಸಿದ.

ಕನ್ನಡದೇವನಿಗೆ ಖಿಲ್ಜಿ ಪತ್ರ ಬರೆದ.ಅದರಲ್ಲಿ ನನ್ನ ಮಗಳನ್ನು ನಿಮ್ಮ ಮಗ ಮದುವೆಯಾಗ ಬೇಕು ಇಲ್ಲವಾದಲ್ಲಿ ಯುದ್ಧಕ್ಕೆ ತಯಾರಾಗಿ ಎಂದ.ತನ್ನ ಮಗನನ್ನು ಅವರಿಗೆ ಕೊಡುವುದಕ್ಕಿಂತ ಯುದ್ಧವೇ ಆಗಲಿ ಎಂದು ಹೊರಟ.ಯುದ್ಧದಲ್ಲಿ ದೇವಮ ವೀರ ಮರಣ ಹೊಂದುತ್ತಾನೆ.

ಈ ವಿಷಯ ಕೇಳಿ ಫಿರೋಸ ಯಮುನ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.ಆತ ದೇಶಕ್ಕಾಗಿ ಪ್ರಾಣ ಬಿಟ್ಟರೇ ಈಕೆ ಪ್ರೀತಿಗಾಗಿ ಪ್ರಾಣಬಿಟ್ಟಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •