ಗಂಡ ಜೀವಂತವಿದ್ದರೂ ವಿಧವೆಯರ ಥರ ಜೀವನ ನಡೆಸುತ್ತಾರೆ ಇಲ್ಲಿನ ಮಹಿಳೆಯರು:ಈ ರೀತಿ ಮಾಡುವುದೇಕೆ ಗೊತ್ತೆ.?

Home Kannada News/ಸುದ್ದಿಗಳು

ಪ್ರತಿಯೊಬ್ಬ ವಿವಾಹಿತ ಮಹಿಳೆ ತಾನು ಜೀವನಪರ್ಯಂತ ಮದುವೆಯಾಗಿ ಮುತೈದೆಯಾಗಿರಬೇಕೆಂದು ಬಯಸುತ್ತಾಳೆ. ಯಾವುದೇ ಮಹಿಳೆಯು ವಿಧವೆಯಂತೆ ಬದುಕಲು ಇಷ್ಟಪಡುವದಿಲ್ಲ, ವಿಧವೆಯಂತೆ ಬದುಕುವುದು ತುಂಬಾ ಕಷ್ಟ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಪತಿಯು ಬದುಕಿದರೂ ಸಹ ಈ ಹಳ್ಳಿಯ ಮಹಿಳೆಯರು ವಿಧವೆಯರಂತೆ ಜೀವನ ನಡೆಸುತ್ತಾರೆ. ಆ ಹಳ್ಳಿಯ ಹೇಸರು ದವೇರಿಯಾದ ಬೆಳವಾರ ಎಂದಿದೆ.

ಪ್ರತಿ ವರ್ಷ ಯುಪಿಯ ದವೇರಿಯಾದ ಬೆಳವಾರ ಜಿಲ್ಲೆಯಲ್ಲಿ ಮೂರು ತಿಂಗಳ ಶೋಕಾಚರಣೆಯನ್ನು ಆಚರಿಸಲಾಗುತ್ತದೆ. ಇಲ್ಲಿನ ಮುತೈದೆಯರು ಮೂರು ತಿಂಗಳು ಯಾವುದೇ ಮೇಕ್ಅಪ್ ಮಾಡದೇ ವಿಧವೆಯರಂತೆ ಶೋಚನೀಯ ಜೀವನ ನಡೆಸುತ್ತಾರೆ. ಈ ಗ್ರಾಮದಲ್ಲಿ ಮೂರು ತಿಂಗಳ ಕಾಲ ವಿಚಿತ್ರ ಮೌನ ಆವರಿಸಿರುತ್ತದೆ. ಎಲ್ಲೆಡೆ ಶೋಕದ ವಾತಾವರಣವಿರುತ್ತವೆ.

ಈ ಹಳ್ಳಿಯ ಬಹುತೇಕ ಎಲ್ಲಾ ಪುರುಷರು ಮರಗಳಿಂದ ಟೋವನ್ನು ತೆಗೆಯುವ ಕೆಲಸವನ್ನು ಮಾಡುತ್ತಾರೆ. ತಾಳೆ ಮರಗಳು 50 ಅಡಿಗಳಿಗಿಂತ ಹೆಚ್ಚು ಎತ್ತರ ಮತ್ತು ತುಂಬಾ ಸಮತಟ್ಟಾಗಿರುತ್ತವೆ. ಈ ಮರಗಳನ್ನು ಹತ್ತಿ ಕಡ್ಡಿ ತೆಗೆಯುವದು ತುಂಬಾ ಅಪಾಯಕಾರಿ ಕೆಲಸ. ಈ ಕೆಲಸ ಮಾಡುವಾಗ ಕೆಲವೊಮ್ಮೆ ಕೆಲವರು ಸಾಯುತ್ತಾರೆಯೂ ಕೂಡಾ ಅಷ್ಟು ಕಠಿಣವಾಗಿರುತ್ತದೆ ಈ ಕೇಲಸ.

ಇಲ್ಲಿನ ಪುರುಷರು ಈ ಕೆಲಸಕ್ಕಾಗಿ ಹೊರಟಾಗ, ಅವರ ಪತ್ನಿಯರು ತಮ್ಮನ್ನು ವಿಧವೆಯರನ್ನಾಗಿ ಮಾಡುತ್ತಾರೆ ಮತ್ತು ವಿಧವೆಯರಂತೆ ಬದುಕಲು ಪ್ರಾರಂಭಿಸುತ್ತಾರೆ. ಅವರ ಗಂಡಂದಿರು ಹಿಂದಿರುಗಿದಾಗ, ಅವರು ಮುತೈದೆಯರಾಗಿ ಅವರ ಗಂಡದಿಯರಿಗೆ ಪ್ರೀತಿಯಿಂದ ಸ್ವಾಗತಿಸುತ್ತಾರೆ ಎಂದು ಹಳ್ಳಿಯವರು ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...