ಪ್ರಶಾಂತ್ ನೀಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಹಾಗೂ ಸುದ್ದಿಯಲ್ಲಿರುವ ನಿರ್ದೇಶಕರು.. ಸಾಮಾಜಿಕ ಜಾಲತಾಣದ ತುಂಬೆಲ್ಲಾ ವೈರಲ್ ಆಗುತ್ತಿರುವ ಸುದ್ದಿ ಎಂದರೆ ಅದು ಪ್ರಶಾಂತ್ ನೀಲ್ ಅವರ ಕುರಿತೇ.. ಇದಕ್ಕೆ ಕಾರಣವೂ ಇದೆ.. ಹೌದು ಕೆಜಿಎಫ್‌‌ ಸಿನಿಮಾ ಮೂಲಕ‌ ಇಡೀ ಭಾರತದ ಸಿನಿಮಾ ಇಂಡಸ್ಟ್ರಿ ಕನ್ನಡದ ಸಿನಿಮಾ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ.. ಇದರ ಬಗ್ಗೆ ಕನ್ನಡಿಗರಿಗೆ ಹೆಮ್ಮೆ ಇದೆ.. ಆದರೆ

ಆದರೆ ಇಂದು ನಡೆದ ಘಟನೆ ಬಹುತೇಕ ಕನ್ನಡಿಗರಿಗೆ ಬೇಸರವನ್ನುಂಟು ಮಾಡಿದ್ದು ಪ್ರಶಾಂತ್ ನೀಲ್ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ.. ಪ್ರಶಾಂತ್ ನೀಲ್ ಹಾಗೂ ಕೆಜಿಎಫ್ ನಿರ್ಮಾಪಕರಾದ ಹೊಂಬಾಳೆ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ‌ ಅನೌನ್ಸ್ ಆಗಿದ್ದು ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ತೆಲುಗಿನ ಪ್ರಭಾಸ್ ಅವರ ಜೊತೆಗೆ ಎಂಬುದು ಖಚಿತವಾಗಿದೆ.. ಈ ಕುರಿತು ಪ್ರಭಾಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ‌ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ..

ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಕೆಲವರು ಸ್ವಾಗತಿಸಿದರೆ.. ಬಹುತೇಕ ಕನ್ನಡಿಗರು ಇದನ್ನು ವಿರೋಧಿಸಿದ್ದಾರೆ.. ಹಾಗೆಯೇ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದೆ.. ಕನ್ನಡದಲ್ಲಿ ಬೇರೆ ಯಾರೂ ಹೀರೋನೇ ಸಿಗಲಿಲ್ಲವಾ? ಬೆಳೆಯೋವರೆಗೂ ಕನ್ನಡದ ಹೀರೋಗಳು ಬೇಕು.. ಬೆಳೆದ ಮೇಲೆ ಬೇರೆ ಭಾಷೆಯವರು ಬೇಕಾ?

ಟ್ಯಾಲೆಂಟ್ ಇದೆ ಅಂದಮೇಲೆ ಕನ್ನಡದ ಹೀರೋಗಳಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ.. ಕನ್ನಡದಲ್ಲಿ ಹೀರೋಗಳಿಗೆ ಕಡಿಮೆನಾ? ನೀನೆ‌ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ.. ಹಣದ ಮುಂದೆ ಭಾಷಾಭಿಮಾನ ಏನೂ ಇಲ್ಲ.. ಹೀಗೆ ಸಾಲು ಸಾಲು ಟ್ರೋಲ್ ಗಳು ಪ್ರಶಾಂತ್ ನೀಲ್ ಅವರ ಕುರಿತು ಹರಿದಾಡುತ್ತಿದೆ.. ಯಶ್ ಅವರನ್ನೇ ಮುಂದಿನ ಸಿನಿಮಾಗೂ ಹೀರೋ ಮಾಡಬಹುದಿತ್ತು.. ಅಥವಾ ಸ್ವಂತ ಬಾವ ಶ್ರೀಮುರುಳಿಯನ್ನೇ ಪ್ಯಾನ್ ಇಂಡಿಯಾ ಹೀರೋ ಮಾಡಿ ಸಿನಿಮಾವನ್ನು ಸಕ್ಸಸ್ ಮಾಡಿ ಶ್ರೀ ಮುರುಳಿಗೆ ಮತ್ತಷ್ಟು ಹೆಸರು ತಂದುಕೊಡಬಹುದಿತ್ತು.. ಹೀಗೆ ನಾನಾ ರೀತಿಯಾಗಿ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ..

AK47-KANNADA-MOVIE

ಇದರ ಜೊತೆಗೆ ಜಗ್ಗೇಶ್ ಅವರೂ ಸಹ ಕನ್ನಡಕ್ಕೆ ಚಟ್ಟ ಕಟ್ಟಿ ಎಂದಿದ್ದಾರೆ.. ಹೌದು ಕೆಲ ದಿನಗಳ ಹಿಂದಷ್ಟೇ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕನ್ನಡಿಗರಿಗೆ ಕೆಲಸ ಸಿಗೋದಿಲ್ಲ.. ಎಂದು ಹೇಳಿದ್ದ ಜಗ್ಗೇಶ್ ಅವರನ್ನು ಹಲವರು ಹೀಯಾಳಿಸಿದ್ದರು.. ಆದರೆ ಇದೀಗ ಜಗ್ಗೇಸ್ ಅವರ ಮಾತು ಸತ್ಯ ಎನ್ನುವಂತಾಗಿದೆ ಎಂದಿದ್ದಾರೆ.. ಹೌದು ಈ ಬಗ್ಗೆ ಯಾರ ಹೆಸರನ್ನೂ ಪ್ರಸ್ತಾಪಿಸದೇ ಮಾತನಾಡಿರುವ ಜಗ್ಗೇಶ್ ಅವರು.. “ರಾಯರ ನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ.. ಅರಿವಾಗದ ಬಹುತೇಕರು ನೆಗೆಟಿವ್‌ ಆಗಿ ತೆಗೆದುಕೊಂಡು.. ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು.. ಮುಂದೈತೆ ಕನ್ನಡಿಗರೆ ಊರಬ್ಬ.. ಆಗ ಅಯ್ಯೋ ಜಗ್ಗೇಶ ಅಂದೇ ಹೇಳಿದ.. ನಾವು ಅಣಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ.. ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಆದರೆ ಪ್ರಶಾಂತ್ ನೀಲ್ ಅವರ ಹೊಸ ಸಿನಿಮಾ ಪ್ರಭಾಸ್ ಜೊತೆ ಅನೌನ್ಸ್ ಆಗುತ್ತಿದ್ದಂತೆ ಪ್ರತಿಕ್ರಿಯೆ ಕೊಟ್ಟ ಪ್ರಶಾಂತ್ ನೀಲ್ ಅವರ ಬಾವ ಶ್ರೀಮುರುಳಿ ಅವರು ಸಲಾರ್ ಸಿನಿಮಾದ ಫೋಟೋ ಹಂಚಿಕೊಂಡು ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕರು‌ ಮತ್ತು‌ ಪ್ರಭಾಸ್ ಗೆ ಶುಭಾಶಯ ತಿಳಿಸಿ ಸಿನಿಮಾಗೆ ಶುಭ ಕೋರಿದ್ದಾರೆ.. ಅಷ್ಟೇ ಅಲ್ಲದೇ ಇದು ಹೆಮ್ಮೆ ಪಡುವ ಸಂಗತಿ ಎಂದು ಬಾಮೈದನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.. ಈ ಕುರಿತು ನಿಮ್ಮ ಅಭಿಪ್ರಾಯವೇನು? ಪ್ರಶಾಂತ್ ನೀಲ್ ಅವರು ಬೇರೆ ಭಾಷೆಯ ಹೀರೋಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದು ಸರಿಯೋ.. ಅಥವಾ ಕನ್ನಡದ ಹೀರೋಗಳಿಗೆ ಸಿನಿಮಾ‌ ಮಾಡುವ ಮೂಲಕ ಇತರ ಭಾಷೆಯವರು ಕನ್ನಡದ ಹೀರೋಗಳ ಕಡೆ ತಿರುಗಿ ನೋಡುವಂತೆ ಮಾಡಬೇಕಿತ್ತಾ? ನಿಮ್ಮ ಅಭಿಪ್ರಾಯ ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!