ಕಾಫಿ ಕಿಂಗ್ ಸಿದ್ದಾರ್ಥ್ ಇಲ್ಲವಾಗಿ ವರ್ಷ ಕಳೆಯಿತು.. ಅಂದು ಇಡೀ ನಾಡೇ ಸಿದ್ದಾರ್ಥ್ ಅವರ ಸಾವಿಗೆ ಕಂಬನಿ ಮಿಡಿದಿತ್ತು‌‌.. ಆ ಕುಟುಣ್ಬಕ್ಕೆ ದುಃಖ ತಡೆಯುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದ್ದರು.. ದಿನ ಕಳೆದಂತೆ ಸಿದ್ದಾರ್ಥ್ ಅವರ ಕಂಪನಿ ವ್ಯವಹಾರವನ್ನು ಸಿದ್ದಾರ್ಥ್ ಅವರ ಪತ್ನಿ, ಎಸ್ ಎಂ ಕೃಷ್ಣ ಅವರ ಮಗಳು ಮಾಳವಿಕಾ ಅವರೇ ನೋಡಿಕೊಳ್ಳಲು ಶುರು ಮಾಡಿದರು.. ಇನ್ನು ಸಿದ್ದಾರ್ಥ್ ಅವರು ಇಲ್ಲವಾದ ವರ್ಷದ ಒಳಗೆ ಶುಭ ಕಾರ್ಯ ಮಾಡಬೇಕಾದ್ದರಿಂದ ಮಗನ ಮದುವೆಯನ್ನು ನಿಶ್ಚಯ ಮಾಡಿದರು.. ಸಿದ್ದಾರ್ಥ್ ಅವರ ಆಪ್ತರೂ ಆದ ಎಸ್ ಎಂ ಕೃಷ್ಣ ಅವರ ಸ್ನೇಹಿತರೂ ಆದ ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಜೊತೆ ಸಿದ್ದಾರ್ಥ್ ಅವರ ಪುತ್ರ ಅಮರ್ತ್ಯಾ ಹೆಗ್ಡೆ ಅವರ ಮದುವೆ ನಿಶ್ಚಯವಾಯಿತು..

ಕಳೆದ ಏಪ್ರಿಲ್ ತಿಂಗಳ 15 ನೇ ತಾರೀಕಿನಂದು ಡಿ ಕೆ ಶಿವಕುಮಾರ್ ಅವರ ಮನೆಯಲ್ಲಿ ಐಶ್ವರ್ಯಾ ಹಾಗೂ ಅಮರ್ತ್ಯ ಉಂಗುರ ಬದಲಾಯಿಸಿಕೊಂಡಿದ್ದರು.. ಇದೇ ತಿಂಗಳು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡುವ ಯೋಜನೆ ಮಾಡಿದ್ದರು.. ಅಷ್ಟೇ ಅಲ್ಲದೇ ಬರುವ 2020 ರ ಫೆಬ್ರವರಿಯಲ್ಲಿ 14 ಅಥವಾ 24 ರಂದು ಅಮರ್ತ್ಯಾ ಹಾಗೂ ಐಶ್ವರ್ಯಾ ಅವರ ಮದುವೆ ದಿನಾಂಕವನ್ನು ನಿಶ್ಚಯಗೊಳಿಸಿ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿತ್ತು.. ಆದರೀಗ ಮಗನ ಮದುವೆ ಸಂಭ್ರಮದಲ್ಲಿದ್ದ ಸಿದ್ದಾರ್ಥ್ ಅವರ ಪತ್ನಿ ಮಾಳವಿಕ ಸಿದ್ದಾರ್ಥ್ ಅವರಿಗೆ ದೊಡ್ಡ ಶಾಕ್ ಆಗಿದೆ..

aishwarya-daughter

ಹೌದು ಮಾಳವಿಕ ಸಿದ್ದಾರ್ಥ್ ಅವರಿಗೆ ಬಂಧನದ ಭೀತಿ ಎದುರಾಗಿದೆ.. ಮೊದಲೇ ತಿಳಿಸಿದಂತೆ ಕಾಫಿ ಡೇ ಸಂಪೂರ್ಣ ವ್ಯವಹಾರವನ್ನು ಮಾಳವಿಕ ಸಿದ್ದಾರ್ಥ್ ಅವರು ನೋಡಿಕೊಳ್ಳುತ್ತಿದ್ದರು.. ಇದೀಗ ಮಾಳವಿಕ ಸಿದ್ದಾರ್ಥ್ ಅವರನ್ನೂ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಮೂಡಿಗೆರೆಯ ಜೆ ಎಂ ಎಫ್ ಸಿ ನ್ಯಾಯಾಲಯ ಜಾಮೀನು ರಹಿತ ಬಂಧನದ ಆದೇಶ ನೀಡಿದೆ..

ಹೌದು ಸಿದ್ದಾರ್ಥ್ ಅವರ ಕಂಪನಿಗೆ ನೂರಾರು ಕಾಫಿ ಬೆಳೆಗಾರರು ತಮ್ಮ ಬೆಳೆಯನ್ನು ನೀಡಿದ್ದರು.. ಆದರೆ ಕಾಫಿ ಬೆಳೆ ನೀಡಿದ್ದ ಮುನ್ನೂರಕ್ಕೂ ಹೆಚ್ಚು ಜನರಿಗೆ ಕಾಫಿ ಡೇ ಕಂಪನಿ ಹಣ ಪಾವತಿ ಮಾಡಿರುವುದಿಲ್ಲ.. ನೂರಕ್ಕೂ ಹೆಚ್ಚು ಕೋಟಿ ಹಣವನ್ನು ಪಾವತಿ‌ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ.. ಕಂಪನಿ ನೀಡಿದ್ದ ಚೆಕ್ ಗಳೆಲ್ಲಾ ಬೌನ್ಸ್ ಆಗಿವೆಯೆಂದು ಇದೀಗ ಕಾಫಿ ಬೆಳೆಗಾರರು ದೂರು ದಾಖಲಿಸಿದ್ದಾರೆ‌‌.. ಅದೇ ದೂರಿನ ಆಧಾರದ ಮೇಲೆ ಇದೀಗ ಮಾಳವಿಕ ಅವರ ವಿರುದ್ಧ ನ್ಯಾಯಾಲಯ ಬಂಧನದ ಆದೇಶ ನೀಡಿದೆ ಎನ್ನಲಾಗಿದೆ..

ಕೆಲ ದಿನಗಳ ಹಿಂದಷ್ಟೇ ಡಿ ಕೆ ಶಿವಕುಮಾರ್ ಅವರ ಮನೆಗೆ ಸಿಬಿಐ ಆಗಮಿಸಿ ಚಿನ್ನಾಭರಣ ಹಾಗೂ ನಗದನ್ನು ವಶ ಪಡಿಸಿಕೊಂಡಿದ್ದರು.. ಆ ಸಮಯದಲ್ಲಿ ಮಗಳ ಮದುವೆಗೆ ತಂದ ಒಡವೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಡಿ ಕೆ ಶಿವಕುಮಾರ್ ಅವರು ನೊಂದುಕೊಂಡಿದ್ದರು.. ಈಗ ಕೋರ್ಟ್ ಆದೇಶದಿಂದ ಸಿದ್ದಾರ್ಥ್ ಕುಟುಂಬ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •