ಸ್ಯಾಂಡಲ್ವುಡ್ ನ ತಾರೆಯರ ಜೋಡಿಗಳ ಪೈಕಿ ಐಂದ್ರಿತಾ ದಿಗಂತ್ ಜೋಡಿಯೂ ಒಂದು.. ಕಲಾವಿದರ್ಯ್ ಪ್ರೀತಿಸಿ ಮದುವೆಯಾಗುವುದು ಹೊಸದೇನಲ್ಲ.. ಯಶ್ ರಾಧಿಕಾ.. ಉಪೇಂದ್ರ ಪ್ರಿಯಾಂಕ.. ಹೀಗೆ ನಟಿ ಐಂದ್ರಿತಾ ಹಾಗೂ ದಿಗಂತ್ ಸತತ ಎಂಟು ವರ್ಷಗಳ ಕಾಲ ಪ್ರೀತಿಸಿ 2018 ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಐಂದ್ರಿತಾ ರೈ ಬಂಗಾಳದವರಾದ್ದರಿಂದ‌ ಮದುವೆ ನಮ್ಮ ಹಾಗೂ ಬೆಂಗಾಲಿ ಎರಡೂ ಶೈಲಿಯಲ್ಲಿಯೂ ನೆರವೇರಿತ್ತು.. ಇದೀಗ ಮದುವೆಯಾದ ಎರಡು ವರ್ಷಗಳ ಬಳಿಕ ಸಂತೋಷದ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ..

ಹೌದು ದಿಗಂತ್ ಹಾಗೂ ಐಂದ್ರಿತಾ ಜೋಡಿ ಯೋಗರಾಜ್ ಭಟ್ಟರ ಮನಸಾರೆ ಸಿನಿಮಾ ಮೂಲಕ ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.. ಆ ಸಮಯದಲ್ಲಿ ಈ ಜೋಡಿ ಯುವ ಜನತೆಗೆ ಹುಚ್ಚು ಹಿಡಿಸಿತ್ತೆನ್ನಬಹುದು.. ಸಿನಿಮಾ ದೊಡ್ಡ ಮಟ್ಟದಲ್ಲಿ‌ ಯಶಸ್ವಿಯಾಗಿತ್ತು.. ಈ ಜೋಡಿ ಮೋಡಿ ಮಾಡಿತ್ತು.. ಸಿನಿಮಾದಲ್ಲಿ ಒಂದಾಗಿದ್ದ ಐಂದ್ರಿತಾ ದಿಗಂತ್.. ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು ಸ್ನೇಹಿತರು ಹಾಗೂ ಸ್ಯಾಂಡಲ್ವುಡ್ ಮಂದಿಗೆ ವಿಚಾರ ತಿಳಿದಿತ್ತಾದರೂ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ..‌

aindrita-digant

ಕೊನೆಗೆ 2018 ರ ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಜೀವನವನ್ನು ಬಹಳ ಹ್ಯಾಪಿ ಆಗಿ ಕಳೆಯುತ್ತಿದ್ದ ಆಂಡಿ ಹಾಗೂ ದಿಗಂತ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಜ್ಟೀವ್ ಆಗಿದ್ದು ಪ್ರತಿದಿನವೂ ಒಂದಿಲ್ಲೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ..

ಇನ್ನು ಇದೀಗ ಐಂದ್ರಿತಾ ರೈ ಸಂತೋಷದ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನ ಪ್ರಚಲಿತ ವಿಚಾರದಲ್ಲಿ‌ ದಿಗಂತ್ ಹಾಗೂ ಐಂದ್ರಿತಾ ಹೆಸರು ಕೇಳಿ ಬಂದಿತ್ತು.. ಇಬ್ಬರೂ ಸಹ ವಿಚಾರಣೆಗೆ ಹಾಜರಾಗಿ ಸಹಕರಿಸಿದ್ದರು.. ಆನಂತರ ಆ ಬಗ್ಗೆ ಯಾವುದೇ ಬೆಳವಣಿಗೆಯಾದ ಮಾಹಿತಿ ಹೊರಬರಲಿಲ್ಲ.. ದಿಗಂತ್ ತಮ್ಮ ಸಿನಿಮಾಗಳಲ್ಲಿ ತೊಡಗಿಕೊಂಡರು..

ಇತ್ತ ಐಂದ್ರಿತಾ ರೈ ಕೂಡ ಸೈಕ್ಲಿಂಗ್ ಹಾಗೂ ತಮ್ಮ ಹವ್ಯಾಸಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದರು.. ಇದೀಗ ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಬರೋಬ್ಬರಿ 8 ವರ್ಷಗಳ ಬಳಿಕ ಐಂದ್ರಿತಾ ಹಾಗೂ ದಿಗಂತ್ ಮತ್ತೊಮ್ಮೆ ತೆರೆಯ ಮೇಲೆ‌ ಒಂದಾಗುತ್ತಿದ್ದಾರೆ.. ಹೌದು “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಸಿನಿಮಾದಲ್ಲಿ ದಿಗಂತ್ ಜೊತೆಯಾಗಿ ಐಂದ್ರಿತಾ ಕಾಣಿಸಿಕೊಳ್ಳುತ್ತಿದ್ದಾರೆ.. ಇದರ ಜೊತೆಗೆ ಕನ್ನಡತಿ ಧಾರಾವಾಹಿಯ ನಟಿ ರಂಜನಿ ರಾಘವನ್ ಕೂಡ ನಾಯಕಿಯಾಗಿದ್ದು ಮಲೆನಾಡಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ..

ಈ ಬಗ್ಗೆ ವಿಚಾರ ತಿಳಿಸಿರುವ ಐಂದ್ರಿತಾ ರೈ.. “ಕ್ಷಮಿಸಿ.. ನಿಮ್ಮ ಖಾತೆಯಲ್ಲಿ ಹಣವಿಲ್ಲ.. ಮಲೆನಾಡಿನ ಮೋಹಕ ತಾಣಗಳಲ್ಲಿ ಚಿತ್ರೀಕರಣ.. ಎಂಟು ವರ್ಷಗಳ ನಂತರ ಮತ್ತೊಮ್ಮೆ ತೆರೆಯ ಮೇಲೆ ನನ್ನ ಆಫ್ ಸ್ಕ್ರೀನ್ ಲವ್ ದಿಗಂತ್ ಜೊತೆ ಕಾಣಿಸಿಕೊಳ್ಳುತ್ತಿದ್ದೇನೆ.. ಎಂದು ದಿಗಂತ್ ಜೊತೆಗಿನ ಫೋಟೋ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ.. ಇನ್ನು ದಿಗಂತ್ ಹಾಗೂ ಐಂದ್ರಿತಾ ರೈ ಮದುವೆಯಾದ ಹೊಸದರಲ್ಲಿಯೇ ಇಬ್ಬರು ಹೊಸ ಸಿನಿಮಾವೊಂದರಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು.. ಆದರೆ ಆ ವಿಚಾರ ಎಲ್ಲಿಯೂ ಅಧಿಕೃತವಾಗಿ ಹೊರ ಬರಲಿಲ್ಲ.. ಇದೀಗ ಮದುವೆಯಾದ ಎರಡು ವರ್ಷಗಳ ನಂತರ ಮತ್ತೊಮ್ಮೆ ಮನಸಾರೆ ಜೋಡಿ ತೆರೆ ಮೇಲೆ ಬರುತ್ತಿದ್ದು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!